ಪ್ರಧಾನ ಮಂತ್ರಿಯವರ ಕಛೇರಿ
1 ದಶಕದ ಹಿಂದೆ ಭಾರತವು ‘ದುರ್ಬಲ 5 ರಾಷ್ಟ್ರ’ಗಳಲ್ಲಿ ಒಂದಾಗಿತ್ತು, ಆದರೀಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿವರ್ತನೆ ಹೊಂದಿದ್ದು, ಇಡೀ ಜಗತ್ತಿನ ಗಮನ ಸೆಳೆದಿದೆ: ಪ್ರಧಾನಿ
Posted On:
21 DEC 2023 8:52PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೈನಾನ್ಶಿಯಲ್ ಟೈಮ್ಸ್ ಜತೆಗಿನ ತಮ್ಮ ಸಂದರ್ಶನವನ್ನು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ಅವರು ‘ಎಕ್ಸ್’ನಲ್ಲಿ ಇದನ್ನು ಪೋಸ್ಟ್ ಮಾಡಿದ್ದಾರೆ:
"@FT ಯೊಂದಿಗಿನ ಈ ವಿಸ್ತೃತ ಸಂದರ್ಶನದಲ್ಲಿ ನಾನು ದೇಶೀಯ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದೇನೆ.
on.ft.com/3NDFBiR
ನಾನು ಭಾರತದ ಅಭಿವೃದ್ಧಿಯ ದಾಪುಗಾಲುಗಳ ಬಗ್ಗೆ ಮಾತನಾಡಿದ್ದೇನೆ. ಭಾರತವು ದಾಖಲೆಯ ವೇಗದಲ್ಲಿ ಹೇಗೆ ಬೆಳೆಯುತ್ತಿದೆ, ಸ್ಟಾರ್ಟಪ್‌ಗಳ ಗಣನೀಯ ಏರಿಕೆ, ಜನಸಾಮಾನ್ಯರ ಜೀವನ ಸುಧಾರಿಸುವ ಗುರಿ ಹೊಂದಿರುವ ಅನನ್ಯ ಜನರಿಂದ ಚಾಲಿತ ಸಾಮೂಹಿಕ ಚಳುವಳಿಗಳು ಮತ್ತು ಇತರೆ ವಿಷಯಗಳನ್ನು ಹಂಚಿಕೊಂಡಿದ್ದೇನೆ. ಒಂದು ದಶಕದ ಹಿಂದೆ 'ದುರ್ಬಲವಾದ ಐದು ದೇಶ'ಗಳಲ್ಲಿ ಒಂದಾಗಿದ್ದ ಭಾರತವು, ಇದೀಗ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಇಡೀ ವಿಶ್ವದ ಗಮನ ಸೆಳೆದಿದೆ. ಇದು ಭಾರತವನ್ನು ಭರವಸೆಯ ಕಿರಣವಾಗಿ ಮತ್ತು ಜಾಗತಿಕ ಸಮೃದ್ಧಿ ಹೆಚ್ಚಿಸುವಲ್ಲಿ ಪ್ರಮುಖ ಪಾಲುದಾರನಾಗಿ ನೋಡುತ್ತಿದೆ ಎಂದು ಪ್ರಧಾನ ಮಂತ್ರಿ ತಿಳಿಸಿದರು.
***
(Release ID: 1989504)
Visitor Counter : 86
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam