ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

‘ವಿಕಸಿತ ಭಾರತ @ 2047: ಯುವಜನತೆಯ ಜತೆಗೆ "ಧ್ವನಿ"ಗೂಡಿಸಲು ಎಲ್ಲರಿಗೂ ಪ್ರಧಾನಿ ಮನವಿ


‘ವಿಕಸಿತ ಭಾರತ @ 2047: ಯುವಜನತೆಯ ಧ್ವನಿ’ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

प्रविष्टि तिथि: 11 DEC 2023 10:05AM by PIB Bengaluru

ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮ ಯುವಜನರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿರುವ ‘ವಿಕಸಿತ್ ಭಾರತ್ @ 2047: ಯುವಜನತೆಯ ಧ್ವನಿ’ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಬೇಕು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಒತ್ತಾಯಿಸಿದ್ದಾರೆ. 

ವಿಕಸಿತ ಭಾರತ್‌ ಅಭಿಯಾನ ಮೂಲಕ ನಮ್ಮ ಕನಸನ್ನು ನನಸಾಗಿಸಲು ಭಾರತದ ಯುವ ಶಕ್ತಿಯಲ್ಲಿ ಅಪಾರ ನಂಬಿಕೆಯಿದೆ ಎಂದು ಶ್ರೀ ಮೋದಿ ಹೇಳಿದರು.

ಅವರು ಇಂದು ಬೆಳಿಗ್ಗೆ 10:30 ಕ್ಕೆ ಈ ಉಪಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಸಂಬಂಧ ಪ್ರಧಾನ ಮಂತ್ರಿ X ನಲ್ಲಿ ಸಂದೇಶ ನೀಡಿದ್ದಾರೆ. 

“ನಮ್ಮ ವಿಕಸಿತ್ ಭಾರತ್ ಕನಸನ್ನು ನನಸಾಗಿಸಲು ಭಾರತದ ಯುವ ಶಕ್ತಿಯಲ್ಲಿ ನನಗೆ ಅಪಾರ ನಂಬಿಕೆ ಇದೆ. ಇಂದು ಬೆಳಿಗ್ಗೆ 10:30 ಗಂಟೆಗೆ, ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ನಮ್ಮ ಯುವಕರನ್ನು ಸಂಯೋಜಿಸುವ ಗುರಿಯನ್ನು ಹೊಂದಿರುವ ‘ವಿಕಸಿತ್ ಭಾರತ್ @ 2047 : ಯುವಜನತೆಯ ಧ್ವನಿ’ ಉಪಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ನಾನು ವಿನಂತಿಸುತ್ತೇನೆ ” ಎಂದು ಸಂದೇಶ ನೀಡಿದ್ದಾರೆ.

***

 


(रिलीज़ आईडी: 1984915) आगंतुक पटल : 288
इस विज्ञप्ति को इन भाषाओं में पढ़ें: Marathi , Telugu , English , Urdu , हिन्दी , Bengali , Manipuri , Assamese , Punjabi , Gujarati , Odia , Tamil , Malayalam