ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ನಿವೃತ್ತ ನ್ಯಾಯಮೂರ್ತಿ ಎಂ. ಫಾತಿಮಾ ಬೀವಿ ಅವರ ನಿಧನಕ್ಕೆ ಪ್ರಧಾನ ಮಂತ್ರಿಗಳ ಸಂತಾಪ

Posted On: 24 NOV 2023 10:55AM by PIB Bengaluru

ನಿವೃತ್ತ ನ್ಯಾಯಮೂರ್ತಿ ಎಂ. ಫಾತಿಮಾ ಬೀವಿ ಅವರ ನಿಧನಕ್ಕೆಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪ್ರಧಾನ ಮಂತ್ರಿಗಳ ಕಾರ್ಯಾಲಯವು 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿದೆ "ನ್ಯಾಯಮೂರ್ತಿ ಎಂ. ಫಾತಿಮಾ ಬೀವಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಹಲವಾರು ಅಡೆತಡೆಗಳನ್ನು ಮುರಿದು ಮುನ್ನಡೆದ ಅವರ ಗಮನಾರ್ಹ ಪ್ರಯಾಣವು ಮಹಿಳೆಯರಿಗೆ ಹೆಚ್ಚು ಸ್ಫೂರ್ತಿದಾಯಕವಾಗಿತ್ತು. ಕಾನೂನು ಕ್ಷೇತ್ರಕ್ಕೆ ಅವರ ಕೊಡುಗೆ ಸದಾ ಸ್ಮರಣೀಯ. ಅವರ ಕುಟುಂಬ ದವರು ಮತ್ತು ಸ್ನೇಹಿತರಿಗೆ ನೋವು ಭರಿಸುವ ಶಕ್ತಿ ಸಿಗುವಂತಾಗಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ: ಪ್ರಧಾನಿ ನರೇಂದ್ರ ಮೋದಿ" ಎಂಬುದಾಗಿ ಸಂದೇಶ ಪೋಸ್ಟ್ ಮಾಡಲಾಗಿದೆ.

***


(Release ID: 1979404) Visitor Counter : 74