ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ಥಳೀಯ ಪ್ರಗತಿಗೆ ಮತ್ತು ಮುಂದಿನ ಭಾರತದ ಪ್ರಗತಿಗಾಗಿ ಧ್ವನಿಯಾಗುವಂತೆ ಪ್ರತಿಯೊಬ್ಬರನ್ನೂ ಒತ್ತಾಯಿಸಿದ ಪ್ರಧಾನಮಂತ್ರಿ

प्रविष्टि तिथि: 10 NOV 2023 3:02PM by PIB Bengaluru

ಸ್ಥಳೀಯ ಪ್ರಗತಿಗೆ ಮತ್ತು ಮುಂದಿನ ಭಾರತದ ಪ್ರಗತಿಗೆ ಎಲ್ಲರೂ ಧ್ವನಿಗೂಡಿಸಬೇಕೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನತೆಯಲ್ಲಿ ಕೋರಿದ್ದಾರೆ. 140 ಕೋಟಿ ಭಾರತೀಯರ ಕಠಿಣ ಪರಿಶ್ರಮವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು ಮತ್ತು ಉದ್ಯಮಿಗಳ ಸೃಜನಶೀಲತೆ ಮತ್ತು ಪಟ್ಟುಬಿಡದ ಮನೋಭಾವದಿಂದಾಗಿ ನಾವು ಸ್ಥಳೀಯ ಪ್ರಗತಿಗೆ ಮತ್ತು ಮುಂದಿನ ಭಾರತದ ಪ್ರಗತಿಗೆ ಧ್ವನಿಯಾಗಲು ಸಾಧ್ಯವಾಯಿತು ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ.

ಶ್ರೀಮತಿ ಕಿರಣ್ ಮಜುಂದಾರ್-ಶಾ ಅವರ ಎಕ್ಸ್ ಖಾತೆಯ ಸಂದೇಶಕ್ಕೆ ಪ್ರತಿಕ್ರಿಯಿಸಿದ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ;

“ನಿಜವಾಗಿಯೂ, ಈ ದೀಪಾವಳಿಯನ್ನು 140 ಕೋಟಿ ಭಾರತೀಯರ ಕಠಿಣ ಪರಿಶ್ರಮದ ಪರಿಕಲ್ಪನೆಯಲ್ಲಿ ಮಾಡೋಣ.  ಉದ್ಯಮಿಗಳ ಸೃಜನಶೀಲತೆ ಮತ್ತು ಪಟ್ಟುಬಿಡದ ಮನೋಭಾವದಿಂದಾಗಿ ನಾವು #ಸ್ಥಳೀಯಪ್ರಗತಿಗಾಗಿಧ್ವನಿ ( #VocalForLocal ) ಆಗಲು ಮತ್ತು ಭಾರತದ ಪ್ರಗತಿಯನ್ನು ಇನ್ನೂ ತೀವ್ರಗೊಳಿಸಲು ಸಾಧ್ಯವಾಯಿತು. ಈ ಹಬ್ಬವು ಆತ್ಮನಿರ್ಭರ ಭಾರತಕ್ಕೆ ನಾಂದಿಯಾಗಲಿ!

 

 *********


(रिलीज़ आईडी: 1976210) आगंतुक पटल : 124
इस विज्ञप्ति को इन भाषाओं में पढ़ें: Telugu , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Malayalam