ಪ್ರಧಾನ ಮಂತ್ರಿಯವರ ಕಛೇರಿ

​​​​​​​ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಚಿನ್ನ ಗೆದ್ದ ನಿತೇಶ್ ಕುಮಾರ್ ಮತ್ತು ತರುಣ್ ಧಿಲ್ಲೋನ್ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರಧಾನ ಮಂತ್ರಿಗಳು

Posted On: 27 OCT 2023 7:39PM by PIB Bengaluru

ಹ್ಯಾಂಗ್‌ಜೌ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಇಂದು ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಎಸ್‌ಎಲ್‌3- ಎಲ್‌ಎಸ್‌4 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ನಿತೇಶ್ ಕುಮಾರ್ ಮತ್ತು ತರುಣ್ ಧಿಲ್ಲೋನ್ ಅವರನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. ಹಾಗೆಯೇ ಇದೊಂದು ಅದ್ಭುತ ತಂಡ ಸ್ಪೂರ್ತಿಯಾಗಿದ್ದು, ಮುಂಬರುವ ಅಥ್ಲೀಟ್‌ಗಳಿಗೆ ಇದು ಉತ್ತಮ ಉದಾಹರಣೆಯಾಗಿದೆ ಎಂದು ಶ್ಲಾಘಿಸಿದರು.

ಈ ಕುರಿತು "ಎಕ್ಸ್‌" ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಪ್ರಧಾನ ಮಂತ್ರಿಗಳು,

"ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಎಸ್‌ಎಲ್ 3-ಎಸ್‌ಎಲ್ 4 ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ನಿತೇಶ್ ಕುಮಾರ್ ಮತ್ತು ತರುಣ್ ಧಿಲ್ಲೋನ್ ಅವರಿಗೆ ಅಭಿನಂದನೆಗಳು. ಅವರ ತಂಡ ಸ್ಫೂರ್ತಿ ಹಾಗೂ ಪ್ರತಿಭಾ ಪ್ರದರ್ಶನವು ಮುಂಬರುವ ಅಥ್ಲೀಟ್‌ಗಳಿಗೆ ಉಜ್ವಲ ಉದಾಹರಣೆಯಾಗಿದೆ. ಭಾರತವು ಅವರ ಬಗ್ಗೆ ಹೆಮ್ಮೆಪಡುತ್ತದೆ,ʼʼ ಎಂದು ಬಣ್ಣಿಸಿದ್ದಾರೆ

 

****



(Release ID: 1972921) Visitor Counter : 67