ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಪ್ಯಾರಾ ಗೇಮ್ಸ್ 2022 ರ ಮಿಶ್ರ 50 ಮೀ ರೈಫಲ್ಸ್ ಪ್ರೋನ್ ಎಸ್‌ಎಚ್ -1 ಸ್ಪರ್ಧೆಯಲ್ಲಿ ಸಿದ್ಧಾರ್ಥ ಬಾಬು ಅವರು ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ

Posted On: 26 OCT 2023 11:48AM by PIB Bengaluru

ಚೀನಾದ ಹ್ಯಾಂಗ್‌ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌2022ರ ಮಿಶ್ರ 50 ಮೀಟರ್ ರೈಫಲ್ಸ್ ಪ್ರೋನ್ ಎಸ್‌ಎಚ್ -1 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಸಿದ್ಧಾರ್ಥ ಬಾಬು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್  ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ;
 
 “ಮಿಕ್ಸ್ಡ್ 50 ಮೀ ರೈಫಲ್ಸ್ ಪ್ರೋನ್ ಎಸ್‌ಎಚ್ -1 ಸ್ಪರ್ಧೆಯಲ್ಲಿ ಬೆರಗುಗೊಳಿಸುವ ಪ್ರದರ್ಶನ ನೀಡಿದ್ದಕ್ಕಾಗಿ ನಮ್ಮ ಪ್ಯಾರಾ ಶೂಟರ್ ಕ್ರೀಡಾಳು  ಸಿದ್ಧಾರ್ಥ ಬಾಬು ಅವರಿಗೆ ಅಭಿನಂದನೆಗಳು!

ಈ ಚಿನ್ನದ ಪದಕವು ಅವರ ನಿಖರತೆ, ಗಮನ, ಅಸಾಧಾರಣ ಪ್ರತಿಭೆ ಮತ್ತು ಪಟ್ಟುಬಿಡದ ಮನೋಭಾವಕ್ಕೆ ಸಾಕ್ಷಿಯಾಗಿದೆ. ಭಾರತವು ಉತ್ಸಾಹಭರಿತವಾಗಿದೆ. ”
 

***



(Release ID: 1971489) Visitor Counter : 54