ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಮಿಶ್ರ 50 ಮೀ ರೈಫಲ್ ಎಸ್ ಎಚ್1 ಸ್ಪರ್ಧೆಯಲ್ಲಿ ರುದ್ರಾಂಶ್ ಖಂಡೇಲ್ವಾಲ್ ಗೆ ಬೆಳ್ಳಿ ಪದಕ: ಪ್ರಧಾನಿ ಮೋದಿ ಸಂಭ್ರಮ

ಪ್ರಕಟಣಾ ದಿನಾಂಕ: 23 OCT 2023 5:43PM by PIB Bengaluru

ಚೀನಾದ ಹ್ಯಾಂಗ್‌ಝೌನಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್‌ 2022ರಲ್ಲಿ ಮಿಶ್ರ 50 ಮೀ ರೈಫಲ್ ಎಸ್ ಹೆಚ್1 ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದ  ರುದ್ರಾಂಶ್ ಖಂಡೇಲ್ವಾಲ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು,

ಮಿಶ್ರ 50 ಮೀ ರೈಫಲ್ ಎಸ್ ಹೆಚ್1 ಸ್ಪರ್ಧೆಯಲ್ಲಿ ಅದ್ವಿತೀಯ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ರುದ್ರಾಂಶ್ ಖಂಡೇಲ್ವಾಲ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ಪರಾಕ್ರಮವು ನಿಜವಾಗಿಯೂ ಶ್ಲಾಘನೀಯವಾಗಿದ್ದು ಮಹತ್ವಾಕಾಂಕ್ಷಿ ಕ್ರೀಡಾಪಟುಗಳಿಗೆ ಮಾನದಂಡವಾಗಿದೆ. ಅವರ ಸಾಧನೆಗೆ ಭಾರತ ಹೆಮ್ಮೆಪಡುತ್ತದೆ ಎಂದು ಬರೆದಿದ್ದಾರೆ.

 

***


(ಪ್ರಕಟಣೆ ಐ.ಡಿ.: 1971313) ವಿಸಿಟರ್ ಕೌಂಟರ್ : 104