ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ಯಾರಾ ಏಷ್ಯನ್ ಕ್ರೀಡಾಕೂಟದ ಮಹಿಳಾ ಪ್ಯಾರಾ ಕ್ಲಬ್ ಥ್ರೋನಲ್ಲಿ ಕಂಚಿನ ಪದಕ ಗಳಿಸಿದ್ದಕ್ಕಾಗಿ ಕ್ರೀಡಾಪಟು ಏಕ್ತಾ ಭಯಾನ್ ಅವರನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು

ಪ್ರಕಟಣಾ ದಿನಾಂಕ: 24 OCT 2023 6:56PM by PIB Bengaluru

ಇಂದು ನಡೆದ ಪ್ಯಾರಾ ಏಷ್ಯನ್ ಕ್ರೀಡಾಕೂಟದ ಮಹಿಳಾ ಪ್ಯಾರಾ ಕ್ಲಬ್ ಥ್ರೋ - ಎಫ್ 32/51 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಕ್ರೀಡಾಳು ಏಕ್ತಾ ಭಯಾನ್ ಅವರನ್ನು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯ  ಸಂದೇಶದಲ್ಲಿ ಈ ರೀತಿ ಹೇಳಿದ್ದಾರೆ:

 "ಮಹಿಳೆಯರ ಪ್ಯಾರಾ ಕ್ಲಬ್ ಥ್ರೋ - ಎಫ್ 32/51 ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿದ್ದಕ್ಕಾಗಿ ಏಕ್ತಾ ಭಯಾನ್ ಅವರಿಗೆ ಅಭಿನಂದನೆಗಳು. ಅವರ ಈ ಸಾಧನೆಯಿಂದ ಭಾರತ ಸಂತಸಗೊಂಡಿದೆ!"


(ಪ್ರಕಟಣೆ ಐ.ಡಿ.: 1970538) ವಿಸಿಟರ್ ಕೌಂಟರ್ : 115