ಪ್ರಧಾನ ಮಂತ್ರಿಯವರ ಕಛೇರಿ
ಏಷ್ಯಾ ಪ್ಯಾರಾ ಗೇಮ್ಸ್ 2022 ರ ಪ್ಯಾರಾ ಕ್ಯಾನೋಯಿಂಗ್ ಮಹಿಳಾ ವಿಎಲ್2 ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಾಚಿ ಯಾದವ್ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
Posted On:
23 OCT 2023 11:22AM by PIB Bengaluru
ಚೀನಾದ ಹ್ಯಾಂಗ್ ಝೌ ನಲ್ಲಿ ನಡೆಯುತ್ತಿರುವ ಏಷ್ಯಾ ಪ್ಯಾರಾ ಗೇಮ್ಸ್ 2022 ರ ಪ್ಯಾರಾ ಕ್ಯಾನೋಯಿಂಗ್ ಮಹಿಳಾ ವಿಎಲ್2 ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಾಚಿ ಯಾದವ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಮಂತ್ರಿಯವರು:
“ಏಷ್ಯಾ ಪ್ಯಾರಾ ಗೇಮ್ಸ್ ನಲ್ಲಿ ಪ್ರಾಚಿ ಯಾದವ್ ಅವರು ಮೊದಲ ಪದಕ ಗಳಿಸುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಪ್ಯಾರಾ ಗೇಮ್ಸ್ ನ ಪ್ಯಾರಾ ಕ್ಯಾನೋಯಿಂಗ್ ಮಹಿಳಾ ವಿಎಲ್2 ಫೈನಲ್ ನಲ್ಲಿ ಬೆಳ್ಳಿ ಪದಕ ಗೆದ್ದು ಗಣನೀಯ ಸಾಧನೆ ಮಾಡಿರುವ ಪ್ರಾಚಿ ಯಾದವ್ ಅವರಿಗೆ ಅಭಿನಂದನೆಗಳು.
ಅದ್ಭುತ ಪ್ರದರ್ಶನದಿಂದ ಅವರು ಇಡೀ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
(Release ID: 1970110)
Visitor Counter : 121
Read this release in:
Malayalam
,
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu