ಸಂಸ್ಕೃತಿ ಸಚಿವಾಲಯ

ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ವೀರರನ್ನು ಗೌರವಿಸಲು “ಮೇರಿ ಮಾಟಿ ಮೇರಾ ದೇಶ್” ಎಂಬ ರಾಷ್ಟ್ರವ್ಯಾಪಿ ಅಭಿಯಾನವು ಕೊನೆಯ ಹಂತವನ್ನು ತಲುಪುತ್ತಿದೆ.


 ರಾಷ್ಟ್ರದಾದ್ಯಂತ 4419 ಬ್ಲಾಕ್ ಗಳಿಗೂ ಹೆಚ್ಚು  ಕಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ

ದೇಶದ ಪ್ರತಿಯೊಂದು ಮೂಲೆಯಿಂದ ಸಂಗ್ರಹಿಸಿದ ಮಣ್ಣನ್ನು ಕರ್ತವ್ಯ ಪಥದಲ್ಲಿರುವ ಅಮೃತ ವಾಟಿಕಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸ್ಮಾರಕದಲ್ಲಿ ಸ್ಮರಣಾರ್ಥವಾಗಿ ಇರಿಸಲಾಗುತ್ತದೆ, ಇದು ಸ್ಮರಣಾರ್ಥವಾಗಿ ಒಂದು ಪರಂಪರೆಯನ್ನು ಸೃಷ್ಟಿಸುತ್ತದೆ.

Posted On: 17 OCT 2023 12:04PM by PIB Bengaluru

"ಮೇರಿ ಮಾಟಿ ಮೇರಾ ದೇಶ್" (ಎಂಎಂಎಂಡಿ) ಅಭಿಯಾನವು ರಾಷ್ಟ್ರವ್ಯಾಪಿ ಅಮೃತ ಕಲಶ ಯಾತ್ರೆಗಳೊಂದಿಗೆ ತನ್ನ ಕೊನೆಯ ಹಂತವನ್ನು ಪ್ರವೇಶಿಸುತ್ತಿದೆ. ಈ ವಿಶಾಲ ಭಾರತದ ಕಾರ್ಯಕ್ರಮ (ಪ್ಯಾನ್ ಇಂಡಿಯಾ ಔಟ್ರೀಚ್) ಉಪಕ್ರಮವು ದೇಶದ ಪ್ರತಿ ಮನೆಯನ್ನು ತಲುಪುವ ಗುರಿಯನ್ನು ಹೊಂದಿದೆ. ಮಹತ್ವದ ಸಹಯೋಗದ ಪ್ರಯತ್ನದಲ್ಲಿ, ಅನೇಕ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ನೆಹರು ಯುವ ಕೇಂದ್ರ ಸಂಘಟನೆ, ವಲಯ ಸಾಂಸ್ಕೃತಿಕ ಕೇಂದ್ರಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಭಾರತೀಯ ಅಂಚೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಕಲ್ಲಿದ್ದಲು ಸಚಿವಾಲಯ, ಹಳ್ಳಿಗಳು ಮತ್ತು ಬ್ಲಾಕ್ ಮಟ್ಟಗಳಲ್ಲಿ ಪ್ರತಿ ಮನೆಯಿಂದ ಮಣ್ಣು ಸಂಗ್ರಹಿಸುವ ಸ್ಮಾರಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಜಂಟಿ  ಉಪಕ್ರಮವು ಈ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸುವ ಅವರ ಸಮರ್ಪಣೆಯನ್ನು ಒತ್ತಿ ಹೇಳುತ್ತದೆ. ಸಮುದಾಯ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ತಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದೆ. ಸಂಸ್ಕೃತಿ ಸಚಿವಾಲಯದ ವಲಯ ಸಂಸ್ಕೃತಿ ಕೇಂದ್ರಗಳು ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ತಮ ಪ್ರಚಾರಕ್ಕಾಗಿ ರಾಷ್ಟ್ರದಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. 4419ಕ್ಕೂ ಹೆಚ್ಚು ಬ್ಲಾಕ್ಗಳು ಈಗಾಗಲೇ “ಮೇರಿ ಮಾಟಿ ಮೇರಾ ದೇಶ್ ಕಾರ್ಯಕ್ರಮ” ಆಯೋಜಿಸಿವೆ ಮತ್ತು ಜನಸಾಮಾನ್ಯರ ಭಾಗವಹಿಸುವಿಕೆ ಅಗಾಧವಾಗಿದೆ.

ಮಂಡ್ಯದಲ್ಲಿ ಮೇರಿ ಮಾಟಿ ಮೇರಾ ದೇಶ್ ತಾಲೂಕು ಮಟ್ಟದ ಕಾರ್ಯಕ್ರಮ

ಕದನ ಬ್ಲಾಕ್, ಗುಜರಾತ್

ಕುಮಟಾ, ಕಾರವಾರ

 ಅಸ್ಸಾಂ ರೈಫಲ್ಸ್ ಅರುಣಾಚಲ ಪ್ರದೇಶದ ಡಿಸಿ ಲಾಂಗ್ಡಿಂಗ್ ಜಿಲ್ಲೆಗೆ ಕಲಶವನ್ನು ಹಸ್ತಾಂತರಿಸಿತು

ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ 'ವೀರ್ಸ್' (ವೀರರು) ಎಂದು ಕರೆಯಲ್ಪಡುವ ಕೆಚ್ಚೆದೆಯ ವೀರರನ್ನು ಗೌರವಿಸಲು "ಮೇರಿ ಮಾಟಿ ಮೇರಾ ದೇಶ್" ಎಂಬ ರಾಷ್ಟ್ರವ್ಯಾಪಿ ಅಭಿಯಾನವನ್ನು ಆಗಸ್ಟ್ 9, 2023 ರಂದು ಪ್ರಾರಂಭಿಸಲಾಯಿತು. ಈ ಉಪಕ್ರಮವು ಮಾರ್ಚ್ 12, 2021 ರಂದು ಪ್ರಾರಂಭವಾದ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಮುಕ್ತಾಯವನ್ನು ಸೂಚಿಸುತ್ತದೆ ಮತ್ತು ಭಾರತದಾದ್ಯಂತ 200,000 ಕಾರ್ಯಕ್ರಮಗಳ ಸಂಘಟನೆಯ ಮೂಲಕ ವ್ಯಾಪಕವಾದ ಸಾರ್ವಜನಿಕ ಭಾಗವಹಿಸುವಿಕೆಗೆ (ಜನ್ ಭಾಗಿದರಿ) ಸಾಕ್ಷಿಯಾಗಿದೆ. "ಮೇರಿ ಮಾಟಿ ಮೇರಾ ದೇಶ್" ಅಭಿಯಾನದ ಆರಂಭಿಕ ಹಂತವು ವ್ಯಾಪಕವಾದ ಪ್ರಭಾವ ಮತ್ತು ಗಮನಾರ್ಹ ಸಾರ್ವಜನಿಕ ಭಾಗವಹಿಸುವಿಕೆ ಗಮನಾರ್ಹವಾದ ಯಶಸ್ಸನ್ನು ಸಾಧಿಸಿದೆ,. ಇಲ್ಲಿಯವರೆಗೆ, 36 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ 233,000 ಕ್ಕೂ ಹೆಚ್ಚು ಶಿಲಾಫಲಕಗಳನ್ನು ನಿರ್ಮಿಸಲಾಗಿದೆ. ಹೆಚ್ಚುವರಿಯಾಗಿ, ʼಪಂಚ ಪ್ರಾಣ ಪ್ರತಿಜ್ಞೆʼಯೊಂದಿಗೆ ಸುಮಾರು 40 ದಶಲಕ್ಷ ಸೆಲ್ಫಿಗಳನ್ನು ಜಾಲತಾಣದಲ್ಲಿ  ಅಪ್ಲೋಡ್ ಮಾಡಲಾಗಿದೆ. ಅಭಿಯಾನವು ರಾಷ್ಟ್ರವ್ಯಾಪಿ ಕೆಚ್ದೆದೆಯ ಕಲಿಗಳನ್ನು ಗೌರವಿಸುವ 200,000ಕ್ಕೂ ಹೆಚ್ಚು ಅಭಿನಂದನಾ ಕಾರ್ಯಕ್ರಮಗಳನ್ನು ಆಯೋಜಿಸಿದೆ. ʼವಸುಧಾ ವಂದನ್ʼ ವಿಷಯದ ಅಡಿಯಲ್ಲಿ, 236 ದಶಲಕ್ಷ  ದೇಶೀಯ ಸಸಿಗಳನ್ನು ನೆಡಲಾಗಿದೆ ಮತ್ತು 263,000 ಅಮೃತ ವಾಟಿಕಾಗಳನ್ನು ರಚಿಸಲಾಗಿದೆ.

ಅಮೃತ ಕಲಶ ಯಾತ್ರೆಗಳು 2023 ಅಕ್ಟೋಬರ್ 30 ಮತ್ತು 31, ರಂದು ನಡೆಯುವ ಭವ್ಯ ಸಮಾರಂಭದಲ್ಲಿ ಕರ್ತವ್ಯ ಪಥದಲ್ಲಿ ತನ್ನ ಅಂತಿಮ ಘಟ್ಟವನ್ನು  ತಲುಪಲಿದೆ. ಈ ರಾಷ್ಟ್ರವ್ಯಾಪಿ ಉಪಕ್ರಮದ ಭವ್ಯವಾದ ಪರಾಕಾಷ್ಠೆಯ ಸಮಯದಲ್ಲಿ, ನಮ್ಮ ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಸಂಕೇತಿಸುವ ಸ್ಮಾರಕ ಕಲಶವನ್ನು ಸಂಗ್ರಹಿಸಲಾಗುತ್ತದೆ. ದೇಶದ ಮೂಲೆ ಮೂಲೆಯಿಂದ ಮತ್ತು ಅಮೃತ್ ವಾಟಿಕಾ ಮತ್ತು ಅಮೃತ್ ಮಹೋತ್ಸವ ಸ್ಮಾರಕದಲ್ಲಿ ವಿಧ್ಯುಕ್ತವಾಗಿ ಇರಿಸಲಾಗಿದೆ. ಈ ಭವ್ಯವಾದ ಆಚರಣೆಯನ್ನು ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮನಸೆಳೆಯುವ ಬೆಳಕು ಮತ್ತು ಧ್ವನಿ ಪ್ರದರ್ಶನಗಳೊಂದಿಗೆ ಸಮೃದ್ಧಗೊಳಿಸಲಾಗುವುದು, ಇದರಲ್ಲಿ ಪಾಲ್ಗೊಳ್ಳುವವರಿಗೆ ಶ್ರೀಮಂತ ಅನುಭವವನ್ನು ನೀಡುತ್ತದೆ. ವಿಶೇಷವಾಗಿ ರಚಿಸಲ್ಪಟ್ಟ ಅನುಭವ ವಲಯಗಳು ಭಾಗವಹಿಸುವವರಿಗೆ ಈ ಐತಿಹಾಸಿಕ ಅಭಿಯಾನದ ಸಾರದೊಂದಿಗೆ ಆಳವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ, ರಾಷ್ಟ್ರದ ಸಾಮೂಹಿಕ ಮನೋಭಾವವನ್ನು ಶ್ಲಾಘಿಸುತ್ತದೆ ಮತ್ತು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಗೌರವಿಸಲು ಆಳವಾದ ಮತ್ತು ನಿರಂತರ ಪರಂಪರೆಯನ್ನು ಸ್ಥಾಪಿಸುತ್ತದೆ.

****



(Release ID: 1968432) Visitor Counter : 65