ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಏಷ್ಯನ್ ಗೇಮ್ಸ್ 2022ರಲ್ಲಿ ಮಹಿಳಾ ಬಿಲ್ಲುಗಾರಿಕೆ ಸಂಯುಕ್ತ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ: ಪ್ರಧಾನ ಮಂತ್ರಿ ಸಂತಸ

प्रविष्टि तिथि: 05 OCT 2023 11:21AM by PIB Bengaluru

2022 ರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಬಿಲ್ಲುಗಾರಿಕೆ ಸಂಯುಕ್ತ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಜ್ಯೋತಿ ಸುರೇಖಾ ವೆನ್ನಮ್, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

“ಭಾರತದ ಮಹಿಳಾ ಬಿಲ್ಲುಗಾರರು ಸಂಯುಕ್ತ ತಂಡ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಜ್ಯೋತಿ ಸುರೇಖಾ ವೆನ್ನಂ, ಪರ್ನೀತ್ ಕೌರ್ ಮತ್ತು ಅದಿತಿ ಗೋಪಿಚಂದ್ ಗೆದ್ದಿದ್ದಾರೆ, ಅವರಿಗೆ ಅಭಿನಂದನೆಗಳು! ಅವರ ದೋಷರಹಿತ ಕಾರ್ಯಕ್ಷಮತೆ, ಗಮನ ಮತ್ತು ಸಮರ್ಪಣೆ ಭಾವದಿಂದ ನಮ್ಮ ರಾಷ್ಟ್ರವನ್ನು ನಂಬಲಾಗದಷ್ಟು ಹೆಮ್ಮೆಪಡುವಂತೆ ಮಾಡಿದೆ. ಈ ಗೆಲುವು ಅವರ ಅಸಾಧಾರಣ ಕೌಶಲ್ಯ ಮತ್ತು ತಂಡದಲ್ಲಿ ಸಾಧಿಸಿ ತೋರಿಸಿರುವುದಕ್ಕೆ ಸಾಕ್ಷಿಯಾಗಿದೆ.'' ಎಂದು ಬರೆದುಕೊಂಡಿದ್ದಾರೆ.

***


(रिलीज़ आईडी: 1964660) आगंतुक पटल : 133
इस विज्ञप्ति को इन भाषाओं में पढ़ें: Punjabi , Malayalam , English , Urdu , Marathi , हिन्दी , Bengali , Manipuri , Assamese , Gujarati , Odia , Tamil , Telugu