ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಗೇಮ್ಸ್ 2022 ರಲ್ಲಿ ಪುರುಷರ ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇಯಲ್ಲಿ ಕಂಚಿನ ಪದಕದ  ಸಂಭ್ರಮಾಚರಣೆ ಮಾಡಿದ ಪ್ರಧಾನಿ

Posted On: 02 OCT 2023 12:25PM by PIB Bengaluru

ಹಾಂಗ್ ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2022ರಲ್ಲಿ ಪುರುಷರ ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇಯಲ್ಲಿ ಕಂಚಿನ ಪದಕ ಗೆದ್ದ ಆನಂದಕುಮಾರ್ ವೇಲ್ ಕುಮಾರ್, ಸಿದ್ಧಾಂತ್ ರಾಹುಲ್ ಕಾಂಬ್ಳೆ ಮತ್ತು ವಿಕ್ರಮ್ ರಾಜೇಂದ್ರ ಇಂಗಳೆ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ:

"ತಂಡದ ಕೆಲಸ, ನಂಬಲಸಾಧ್ಯವಾದಂತಹ ಪ್ರದರ್ಶನವು ಮತ್ತೊಂದು ಕಂಚಿನ ಪದಕವನ್ನು ಮನೆಗೆ ತಂದಿದೆ!

ಪುರುಷರ ಸ್ಪೀಡ್ ಸ್ಕೇಟಿಂಗ್ 3000 ಮೀಟರ್ ರಿಲೇಯಲ್ಲಿ ಆನಂದ್ ಕುಮಾರ್ ವೇಲ್ ಕುಮಾರ್, ಸಿದ್ಧಾಂತ್ ರಾಹುಲ್ ಕಾಂಬ್ಳೆ, ವಿಕ್ರಮ್ ರಾಜೇಂದ್ರ ಇಂಗಳೆ ಕಂಚಿನ ಪದಕ ಗೆದ್ದಿದ್ದಾರೆ.

ಈ ಸಾಧನೆಯ ಬಗ್ಗೆ ಭಾರತವು ಬಹಳ  ಸಂತೋಷಪಡುತ್ತದೆ ಮತ್ತು ಅಪಾರ ಹೆಮ್ಮೆ ಪಡುತ್ತದೆ" ಎಂದು ಅವರು ಹೇಳಿದ್ದಾರೆ.



(Release ID: 1963303) Visitor Counter : 75