ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ


ಅಭಿಯಾನದಲ್ಲಿ ಪ್ರಧಾನಿಯವರಿಗೆ ಕೈಜೋಡಿಸಿದ ಅಂಕಿತ್ ಬೈಯನ್‌ಪುರಿಯಾ 

प्रविष्टि तिथि: 01 OCT 2023 2:31PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಘೋಷಣೆಯ ಮೇರೆಗೆ ಇಂದು ರಾಷ್ಟ್ರವು ಸ್ವಚ್ಛತಾ ಅಭಿಯಾನವನ್ನು ಆಚರಿಸುತ್ತಿದೆ. ಪ್ರತಿಯೊಬ್ಬರೂ ಒಂದು ಗಂಟೆಯನ್ನು ಸ್ವಚ್ಛತೆಗೆ ಮೀಸಲಿಡುವ ಕಾರ್ಯಕ್ರಮ ಇದಾಗಿದ್ದು, ದೇಶದ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಂಕಿತ್ ಬೈಯನ್ ಪುರಿಯಾ ಅವರೊಂದಿಗೆ ಈ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ಅಂಕಿತ್ ಓರ್ವ ಫಿಟ್ನೆಸ್ ಪ್ರಭಾವಿ ಯುವಕ. 

ನಮ್ಮ ದೈನಂದಿನ ಜೀವನದಲ್ಲಿ ಸ್ವಚ್ಛತೆ ಮತ್ತು ದೇಹದ ಸದೃಢತೆ ಪ್ರಾಮುಖ್ಯತೆಯ ಕುರಿತು ಇಬ್ಬರ ನಡುವೆ ನಡೆದ ಸಂಭಾಷಣೆಯನ್ನು ಪ್ರಧಾನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಮಂತ್ರಿ ಅವರು ತಮ್ಮ ದೈನಂದಿನ ಜೀವನದ ದಿನಚರಿಯ ಬಗ್ಗೆ ಇದರಲ್ಲಿ ಮಾತನಾಡಿದ್ದಾರೆ. ಅಂಕಿತ್ ಬಳಿ ದೇಹದ ಸದೃಢತೆ ಅಂಶ ಬಗ್ಗೆ ಕೇಳಿ ಮಾಹಿತಿ ಪಡೆದುಕೊಂಡರು. 

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ, ಇಂದು, ರಾಷ್ಟ್ರವು ಸ್ವಚ್ಛತೆಯತ್ತ ಗಮನಹರಿಸುತ್ತಿರುವಾಗ, ಅಂಕಿತ್ ಬೈಯನ್‌ಪುರಿಯ ಮತ್ತು ನಾನು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದೆವು! ಕೇವಲ ಶುಚಿತ್ವದ ಹೊರತಾಗಿ, ಆರೋಗ್ಯಕ್ಕೆ ನಾವು ದೇಹರ್ದಾಢ್ಯತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳಬೇಕು. ಇದು ಸ್ವಚ್ಛ ಮತ್ತು ಸ್ವಸ್ತ ಭಾರತ ಉತ್ಸಾಹವನ್ನು ತೋರಿಸುತ್ತದೆ ಎಂದು ಬರೆದು @baiyanpuria ಅವರಿಗೆ ಟ್ಯಾಗ್ ಮಾಡಿದ್ದಾರೆ.


(रिलीज़ आईडी: 1962790) आगंतुक पटल : 151
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam