ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಏಷ್ಯನ್ ಗೇಮ್ಸ್, 25 ಮೀಟರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಮಹಿಳಾ ತಂಡಕ್ಕೆ ಚಿನ್ನದ ಪದಕ : ಪ್ರಧಾನಿ ಅಭಿನಂದನೆ

ಪ್ರಕಟಣಾ ದಿನಾಂಕ: 27 SEP 2023 4:31PM by PIB Bengaluru

ಹಾಂಗ್ ಝೋ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ 25 ಮೀಟರ್ ಪಿಸ್ತೋಲ್ ವಿಭಾಗದಲ್ಲಿ ಭಾರತ ವನಿತೆಯರ ತಂಡ ಚಿನ್ನದ ಪದಕ ಗೆದ್ದಿದೆ. ಈ ಸಾಧನೆ ಮಾಡಿದ ಮನು ಭಕೇರ್, ರಿದಮ್ ಸಂಗ್ವಾನ್ ಮತ್ತು ಇಶಾ ಸಿಂಗ್ ಮಹಿಳಾ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. 

ಈ ಕುರಿತು ಟ್ವೀಟ್ ಮಾಡಿರುವ ಅವರು”

“ಭಾರತಕ್ಕೆ ಅತ್ಯುತ್ತಮ ಪದಕ.

ಮನು ಭಕೇರ್, ರಿದಮ್ ಸಂಗ್ವಾನ್ ಮತ್ತು ಇಶಾ ಸಿಂಗ್ ಅವರನ್ನೊಳಗೊಂಡ 25 ಮೀಟರ್ ಪಿಸ್ತೋಲ್ ಮಹಿಳಾ ತಂಡದ ಅಭೂತಪೂರ್ವ ವಿಜಯಕ್ಕೆ ಅಭಿನಂದನೆಗಳು.

ಅವರ ತಂಡದ ಗಮನಾರ್ಹ ಪ್ರಯತ್ನ ಅಮೋಘ ಫಲಗಳನ್ನು ಕೊಟ್ಟಿದೆ. ಅವರ ಭವಿಷ್ಯದ ಪ್ರಯತ್ನಗಳಿಗೆ ಶುಭ ಹಾರೈಕೆಗಳು” ಎಂದಿದ್ದಾರೆ.

 

***


(ಪ್ರಕಟಣೆ ಐ.ಡಿ.: 1961474) ವಿಸಿಟರ್ ಕೌಂಟರ್ : 112