ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಜಿ20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯಲ್ಲಿ ಭಾಗವಹಿಸಲು ಯುವಜನರನ್ನು ಆಹ್ವಾನಿಸಿದ ಪ್ರಧಾನಮಂತ್ರಿ


ಕಾರ್ಯಕ್ರಮ ಕುರಿತು ಲಿಂಕ್ಡ್ ಇನ್ ಖಾತೆಯಲ್ಲಿ ಹಂಚಿಕೊಂಡರು

Posted On: 24 SEP 2023 8:43PM by PIB Bengaluru

ಈ ತಿಂಗಳ 26, (ಸೆಪ್ಟೆಂಬರ್ 26, 2023) ರಂದು ನಡೆಯಲಿರುವ ಜಿ20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯುವ ಜನತೆಗೆ ಕರೆ ನೀಡಿದ್ದಾರೆ.

"ಜಿ20 ಯೂನಿವರ್ಸಿಟಿ ಕನೆಕ್ಟ್ - ನಮ್ಮ ಯುವ ಶಕ್ತಿಯನ್ನು ಪ್ರೋತ್ಸಾಹಿಸುವುದು" ಎಂಬ ಶೀರ್ಷಿಕೆಯ ಲಿಂಕ್ಡ್ಇನ್ ಖಾತೆಯ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ:

"ನನ್ನ ಯುವ ಸ್ನೇಹಿತರೇ,    

ಈ ತಿಂಗಳ 26, (ಸೆಪ್ಟೆಂಬರ್ 26, 2023) ರಂದು ನಡೆಯಲಿರುವ ಜಿ20 ಯೂನಿವರ್ಸಿಟಿ ಕನೆಕ್ಟ್ ಫಿನಾಲೆಯಲ್ಲಿ ನೀವೆಲ್ಲರೂ ಭಾಗವಹಿಸಲು ನಾನು ಬಯಸುತ್ತೇನೆ. ಕಳೆದ ಒಂದು ವರ್ಷದಲ್ಲಿ, ಭಾರತದ ಜಿ-20 ಅಧ್ಯಕ್ಷತೆಯ ಆದ್ಯತೆಯ ಕ್ಷೇತ್ರಗಳನ್ನು ಹೈಲೈಟ್ ಮಾಡಲು ಜಿ20 ಯೂನಿವರ್ಸಿಟಿ ಕನೆಕ್ಟ್ ಒಂದು ಉತ್ತಮ ವೇದಿಕೆಯಾಗಿ ಹೊರಹೊಮ್ಮಿದೆ.

ನಿಮ್ಮ ವೈವಿಧ್ಯಮಯ ವಿಷಯಗಳ ಕುರಿತು ಆಲೋಚನೆಗಳು ಮತ್ತು ಚಿಂತನೆಗಳ ವಿನಿಮಯಕ್ಕಾಗಿ ನಾನು ಎದುರು ನೋಡುತ್ತಿದ್ದೇನೆ.
 
https://www.linkedin.com/pulse/g20-university-connect-encouraging-our-yuva-shakti-narendra-modi/?published=t. "
 
 

***


(Release ID: 1960307) Visitor Counter : 109