ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಸಿಂಹ ದಿನದ ಹಿನ್ನೆಲೆಯಲ್ಲಿ ಸಿಂಹಗಳ ಆವಾಸಸ್ಥಾನಗಳ ಸಂರಕ್ಷಣೆಗಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಪ್ರಧಾನ ಮಂತ್ರಿಗಳು ಅಭಿನಂದನೆ ಸಲ್ಲಿಸಿದ್ದಾರೆ

Posted On: 10 AUG 2023 10:00AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಿಂಹಗಳ ಆವಾಸಸ್ಥಾನಗಳ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ವಿಶ್ವ ಸಿಂಹ ದಿನವನ್ನು ಸಮರ್ಪಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಪ್ರಧಾನ ಮಂತ್ರಿಗಳು,

"ವಿಶ್ವ ಸಿಂಹ ದಿನವು ಸಿಂಹದ ಅಗಾಧ ಶಕ್ತಿ ಹಾಗೂ ಗಾಂಭೀರ್ಯವನ್ನು ಮನಪೂರಕವಾಗಿ ಆಚರಿಸುವ ಸಂದರ್ಭವಾಗಿದೆ. ಭಾರತವು ಏಷ್ಯಾ ಸೀಮೆಯ ಸಿಂಹಗಳ ತವರು ಎಂಬ ಹೆಗ್ಗಳಿಕೆ ಗಳಿಸಿರುವ ಜತೆಗೆ ಕೆಲವು ವರ್ಷಗಳಿಂದ ಭಾರತದಲ್ಲಿ ಸಿಂಹಗಳ ಜನಸಂಖ್ಯೆಯಲ್ಲಿ ಸ್ಥಿರವಾದ ಏರಿಕೆಯಾಗುತ್ತಿರುವುದು ಆಶಾದಾಯಕವಾಗಿದೆ. ಈ ಸಂದರ್ಭದಲ್ಲಿ ನಾನು ಸಿಂಹಗಳ ಆವಾಸಸ್ಥಾನವನ್ನು ರಕ್ಷಿಸಲು ಶ್ರಮಿಸುತ್ತಿರುವ ಎಲ್ಲರ ಪ್ರಯತ್ನವನ್ನೂ ಶ್ಲಾಘಿಸುತ್ತೇನೆ. ನಾವು ಅವುಗಳ ಸಂರಕ್ಷಣೆ ಕಾರ್ಯವನ್ನು ಮುಂದುವರಿಸುವ ಮೂಲಕ ಮುಂದಿನ ಪೀಳಿಗೆಗೆ ಪ್ರವರ್ಧಮಾನಕ್ಕೆ ಬರಲು ಉತ್ತೇಜಿಸೋಣ,ʼʼ ಎಂದು ಆಶಿಸಿದ್ದಾರೆ.

*****

 



(Release ID: 1947500) Visitor Counter : 85