ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರು ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ ವಾರ್ಷಿಕೋತ್ಸವದಂದು ಅಭಿನಂದನೆ ಸಲ್ಲಿಸಿದರು
ಪ್ರಕಟಣಾ ದಿನಾಂಕ:
27 JUL 2023 6:14PM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಆರ್ ಪಿ ಎಫ್ ವಾರ್ಷಿಕೋತ್ಸವದ ಸಂದರ್ಭದಲ್ಲಿ ಎಲ್ಲಾ ವೀರ ಸಿಆರ್ ಪಿ ಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದರು ಮತ್ತು ನಮ್ಮ ದೇಶದ ಭದ್ರತೆಗೆ ಅವರಲ್ಲಿರುವ ಅಚಲ ಬದ್ಧತೆ ನಿಜವಾಗಿಯೂ ಶ್ಲಾಘನೀಯ ಎಂದು ಹೇಳಿದರು.
ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದರು:
“ಎಲ್ಲ ವೀರ ಸಿಆರ್ ಪಿ ಎಫ್ ಯೋಧರಿಗೆ ವಾರ್ಷಿಕೋತ್ಸವದ ಶುಭಾಶಯಗಳು! ಅವರ ಧೈರ್ಯ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯನ್ನು ನಮ್ಮ ರಾಷ್ಟ್ರವು ಪ್ರಶಂಸಿಸುತ್ತದೆ. ನಮ್ಮ ದೇಶದ ಭದ್ರತೆಗೆ ಅವರ ಅಚಲ ಬದ್ಧತೆ ನಿಜಕ್ಕೂ ಶ್ಲಾಘನೀಯ. @crpfindia”
***
(ಪ್ರಕಟಣೆ ಐ.ಡಿ.: 1943635)
ವಿಸಿಟರ್ ಕೌಂಟರ್ : 147
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam