ಪ್ರಧಾನ ಮಂತ್ರಿಯವರ ಕಛೇರಿ
ಕಳ್ಳಸಾಗಣೆಯಾದ ಕಲಾಕೃತಿಗಳನ್ನು ಹಿಂದಿರುಗಿಸಿದ್ದಕ್ಕೆ ಅಮೆರಿಕಕ್ಕೆ ಧನ್ಯವಾದ ಹೇಳಿದ ಪ್ರಧಾನಿ ಮೋದಿ
ಭಾರತದ ವೈವಿಧ್ಯಮಯ ಪ್ರದೇಶಗಳು ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ ಕಳ್ಳಸಾಗಣೆ ಮಾಡಿದ 105 ಪ್ರಾಚೀನ ವಸ್ತುಗಳು ಯುಎಸ್ ಎಯಿಂದ ಮರಳಿ ಭಾರತಕ್ಕೆ
Posted On:
19 JUL 2023 12:43PM by PIB Bengaluru
ಭಾರತದ ವೈವಿಧ್ಯಮಯ ಪ್ರದೇಶಗಳು ಮತ್ತು ಸಂಪ್ರದಾಯಗಳನ್ನು ಪ್ರತಿನಿಧಿಸುವ ಕಳ್ಳತನವಾಗಿದ್ದ 105 ಪುರಾತನ ವಸ್ತುಗಳು ಅಮೇರಿಕಾದಿಂದ ಸ್ವದೇಶಕ್ಕೆ ಮರಳಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಯುಎಸ್ಎಗೆ ಧನ್ಯವಾದ ಹೇಳಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿನ ಭಾರತದ ರಾಯಭಾರ ಕಚೇರಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಗಳು,
“ಇದು ಪ್ರತಿಯೊಬ್ಬ ಭಾರತೀಯರಿಗೆ ಸಂತೋಷದ ವಿಷಯವಾಗಿದೆ. ಇದಕ್ಕಾಗಿ ಅಮೆರಿಕಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಅಮೂಲ್ಯ ಕಲಾಕೃತಿಗಳು ಭಾರತದ ಅದ್ವಿತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿವೆ. ಇವುಗಳು ತಮ್ಮ ಸ್ವಸ್ಥಾನಕ್ಕೆ ಮರಳಿರುವುದು ಭಾರತದ ಪರಂಪರೆ ಮತ್ತು ಶ್ರೀಮಂತ ಇತಿಹಾಸವನ್ನು ಸಂರಕ್ಷಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ.'' ಎಂದು ಬರೆದುಕೊಂಡಿದ್ದಾರೆ.
***
(Release ID: 1940698)
Visitor Counter : 128
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam