ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಸನ್ ಅಲ್ಲಂ ಹೋಲ್ಡಿಂಗ್ ಕಂಪನಿಯ ಸಿಇಒ ಶ್ರೀ ಹಸನ್ ಅಲ್ಲಂ ಅವರನ್ನು ಪ್ರಧಾನಮಂತ್ರಿಯವರು ಭೇಟಿ ಮಾಡಿದರು

Posted On: 25 JUN 2023 5:22AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 24 ಜೂನ್ 2023 ರಂದು ಕೈರೋದಲ್ಲಿ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಈಜಿಪ್ಟ್ನ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಹಾಸನ ಅಲ್ಲಂ ಹೋಲ್ಡಿಂಗ್ ಕಂಪನಿಯ ಸಿಇಒ ಶ್ರೀ ಹಸನ್ ಅಲ್ಲಂ ಅವರನ್ನು ಭೇಟಿ ಮಾಡಿದರು.

ನವೀಕರಿಸಬಹುದಾದ ಇಂಧನ, ಹಸಿರು ಜಲಜನಕ, ಮೂಲಸೌಕರ್ಯ ಮತ್ತು ನಿರ್ಮಾಣ ಕ್ಷೇತ್ರಗಳಲ್ಲಿ ಭಾರತೀಯ ಕಂಪನಿಗಳೊಂದಿಗೆ ನಿಕಟ ಸಹಕಾರವನ್ನು ರೂಪಿಸುವ ಸಾಧ್ಯತೆಗಳ ಕುರಿತು ಅವರು ಚರ್ಚಿಸಿದರು.

*****


(Release ID: 1935232) Visitor Counter : 155