ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಲ್ಫಾಬೆಟ್ ಇಂಕ್ ಮತ್ತು ಗೂಗಲ್‌ ಸಂಸ್ಥೆ ಸಿಇಒ ಸುಂದರ್ ಪಿಚೈ ಅವರೊಂದಿಗೆ ಪ್ರಧಾನ ಮಂತ್ರಿ ಮೋದಿ ಮಾತುಕತೆ

Posted On: 24 JUN 2023 7:27AM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ಅಂದರೆ ಜೂನ್ 23ರಂದು ವಾಷಿಂಗ್ಟನ್ ಡಿಸಿಯಲ್ಲಿ ಆಲ್ಫಾಬೆಟ್ ಇಂಕ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಭೇಟಿಯಾದರು.

ಭಾರತದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಫಿನ್ ಟೆಕ್, ಸೈಬರ್ ಭದ್ರತೆ ಉತ್ಪನ್ನಗಳು ಮತ್ತು ಸೇವೆಗಳು ಹಾಗೂ ಮೊಬೈಲ್ ಸಾಧನಗಳ ತಯಾರಿಕೆಯಲ್ಲಿ ಹೆಚ್ಚಿನ ಸಹಯೋಗದ ಮಾರ್ಗಗಳನ್ನು ಅನ್ವೇಷಿಸುವಂತೆ ಪ್ರಧಾನ ಮಂತ್ರಿಗಳು ಪಿಚ್ಚೈ ಅವರನ್ನು ಕೇಳಿಕೊಂಡರು.

ಸಂಶೋಧನೆ ಮತ್ತು ಅಭಿವೃದ್ಧಿ(R &D) ಮತ್ತು ಕೌಶಲ್ಯಾಭಿವೃದ್ಧಿಯನ್ನು ಅಭಿವೃದ್ಧಿಪಡಿಸಲು ಗೂಗಲ್ ಮತ್ತು ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗದ ಕುರಿತು ಸಹ ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳು ಸುಂದರ್ ಪಿಚ್ಚೈ ಅವರ ಜೊತೆ ಚರ್ಚಿಸಿದರು.

****


(Release ID: 1935030) Visitor Counter : 119