ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರಿಡ್ಜ್ ವಾಟರ್ ಅಸೋಸಿಯೇಟ್ಸ್ ನ ಸಹ ಸಂಸ್ಥಾಪಕ ಶ್ರೀ ರೇ ಡಾಲಿಯೊ ಅವರೊಂದಿಗೆ ಪ್ರಧಾನಮಂತ್ರಿ ಅವರ ಸಭೆ

प्रविष्टि तिथि: 21 JUN 2023 8:28AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕದ ನ್ಯೂಯಾರ್ಕ್ ನಲ್ಲಿ ಬ್ರಿಡ್ಜ್ ವಾಟರ್ ಅಸೋಸಿಯೇಟ್ಸ್ ಎಂಬ ಹೆಡ್ಜ್ ಫಂಡ್ ನ ಸಹ ಸಂಸ್ಥಾಪಕ, ಅಮೆರಿಕದ ಹೂಡಿಕೆದಾರ, ಲೇಖಕ ಮತ್ತು ಸಹ ಸಂಸ್ಥಾಪಕ ಶ್ರೀ ರೇ ಡಾಲಿಯೊ ಅವರನ್ನು ಭೇಟಿ ಮಾಡಿದರು.

ಶ್ರೀ ಡಾಲಿಯೊ ಅವರೊಂದಿಗಿನ ತಮ್ಮ ಸಂಭಾಷಣೆಯಲ್ಲಿ ಪ್ರಧಾನಮಂತ್ರಿ ಅವರು, ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಸರ್ಕಾರ ಕೈಗೊಂಡ ಸುಧಾರಣೆಗಳ ಬಗ್ಗೆ ಬೆಳಕು ಚೆಲ್ಲಿದರು, ಇದರಲ್ಲಿ ಅನುಸರಣೆಗಳನ್ನು ಕಡಿಮೆ ಮಾಡುವುದು ಮತ್ತು ಹೆಚ್ಚಿನ ಸಂಖ್ಯೆಯ ಕಾನೂನು ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸುವುದು ಸೇರಿದೆ. ಭಾರತದಲ್ಲಿ ಮತ್ತಷ್ಟು ಹೂಡಿಕೆ ಮಾಡುವಂತೆ ಪ್ರಧಾನಮಂತ್ರಿ ಅವರು ಶ್ರೀ ಡಾಲಿಯೊ ಅವರನ್ನು ಆಹ್ವಾನಿಸಿದರು.

****


(रिलीज़ आईडी: 1933905) आगंतुक पटल : 156
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Manipuri , Assamese , Punjabi , Gujarati , Odia , Tamil , Telugu , Malayalam