ಪ್ರಧಾನ ಮಂತ್ರಿಯವರ ಕಛೇರಿ

20ನೇ ಏಷ್ಯನ್ 'ಯು20' ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿನ ಸಾಧನೆಗಾಗಿ ಕ್ರೀಡಾಪಟುಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿ 

Posted On: 09 JUN 2023 8:05PM by PIB Bengaluru

20ನೇ ಏಷ್ಯನ್ 'ಯು20' ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ ನಲ್ಲಿನ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ಅವರ ಸಾಧನೆಗಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

"ನಮ್ಮ ಕ್ರೀಡಾಪಟುಗಳ ಬಗ್ಗೆ ಹೆಮ್ಮೆಯಿದೆ! ಅವರು 20 ನೇ ಏಷ್ಯನ್ ಯು20 ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಅಸಾಮಾನ್ಯ ಅತ್ಯುತ್ತಮ   ಪ್ರದರ್ಶನ ನೀಡಿದ್ದಾರೆ.! 6 ಚಿನ್ನ ಸೇರಿದಂತೆ 19 ಪದಕಗಳೊಂದಿಗೆ, 45 ರಾಷ್ಟ್ರಗಳ ನಡುವೆ ಭಾರತವಿಂದು 3 ನೇ ಸ್ಥಾನಕ್ಕೆ ಏರಿದೆ. ನಾವು ನಮ್ಮ ಕ್ರೀಡಾಪಟುಗಳ ವಿಜಯವನ್ನು ಆಚರಿಸುತ್ತೇವೆ ಮತ್ತು ಅವರುಗಳ ಭವಿಷ್ಯದ ಪ್ರಯತ್ನಗಳಿಗಾಗಿ ಅವರಿಗೆ ಶುಭ ಹಾರೈಸುತ್ತೇವೆ."

***



(Release ID: 1931474) Visitor Counter : 67