ಪ್ರಧಾನ ಮಂತ್ರಿಯವರ ಕಛೇರಿ
ಭಾರತದಲ್ಲಿರುವ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಹಂಚಿಕೊಂಡ ಭಾರತೀಯ ತಿನಿಸುಗಳ ವಿಡಿಯೊ ಹಂಚಿಕೊಂಡು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ
Posted On:
11 JUN 2023 11:31AM by PIB Bengaluru
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಶಿಷ್ಟ ವೀಡಿಯೊವನ್ನು ಹಂಚಿಕೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ, ವಿಡಿಯೊದಲ್ಲಿ ಸುಜುಕಿ ಅವರು ತಮ್ಮ ಪತ್ನಿಯೊಂದಿಗೆ ಭಾರತೀಯ ಪ್ರಖ್ಯಾತ ವೈವಿಧ್ಯಮಯ ತಿನಿಸುಗಳನ್ನು ಸವಿಯುವುದನ್ನು ಕಾಣಬಹುದು.
ಭಾರತದಲ್ಲಿನ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರ ಟ್ವೀಟ್ ನ್ನು ಹಂಚಿಕೊಂಡ ಪ್ರಧಾನಿ ಅವರು ಟ್ವೀಟ್ ಮಾಡಿ:
"ರಾಯಭಾರಿಗಳೇ, ಈ ಒಂದು ವಿಚಾರದಲ್ಲಿ ನೀವು ಸೋತಿದ್ದಕ್ಕೆ ನಿಮಗೆ ಬೇಸರವಾಗದಿರಬಹುದು. ನೀವು ಭಾರತದ ವೈವಿಧ್ಯಮಯ ಆಹಾರ ಪದ್ಧತಿಯನ್ನು ಆಸ್ವಾದಿಸುತ್ತಿರುವುದು ಖುಷಿ ತರುತ್ತಿದ್ದು ನಿಮ್ಮ ಅನುಭವವನ್ನು ನವೀನ ಮಾದರಿಯಲ್ಲಿ ಹಂಚಿಕೊಳ್ಳುತ್ತಿದ್ದೀರಿ. ಇಂತಹ ಇನ್ನಷ್ಟು ವಿಡಿಯೋಗಳು ಬರುತ್ತಿರಲಿ” ಎಂದು ಟ್ವೀಟ್ ಮಾಡಿದ್ದಾರೆ.
***
(Release ID: 1931463)
Visitor Counter : 143
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam