ಪ್ರಧಾನ ಮಂತ್ರಿಯವರ ಕಛೇರಿ

ಎನ್.ಡಿ.ಎ. ಸರ್ಕಾರದ ಪ್ರತಿಯೊಂದು ಉಪಕ್ರಮಗಳು ನಮ್ಮ ನಾರಿ ಶಕ್ತಿಯ ಅಪರಿಮಿತ ಸಾಮರ್ಥ್ಯದ ಮೇಲಿನ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತವೆ: ಪ್ರಧಾನಮಂತ್ರಿ

Posted On: 06 JUN 2023 12:29PM by PIB Bengaluru

ಕಳೆದ 9 ವರ್ಷಗಳಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಕೈಗೊಂಡ ವಿವಿಧ ಕ್ರಮಗಳ ಕುರಿತ ಲೇಖನಗಳು, ಗ್ರಾಫಿಕ್ಸ್ ವಿನ್ಯಾಸಗಳು, ವೀಡಿಯೊಗಳು ಮತ್ತು ಮಾಹಿತಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. 

ಪ್ರಧಾನಮಂತ್ರಿ  ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

"ಎನ್.ಡಿ.ಎ. ಸರ್ಕಾರದ ಪ್ರತಿಯೊಂದು ಉಪಕ್ರಮಗಳು ನಮ್ಮ ನಾರಿ ಶಕ್ತಿಯ ಅಪರಿಮಿತ ಸಾಮರ್ಥ್ಯದ ಮೇಲಿನ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತಿವೆ. ಅವರುಗಳ ಕನಸುಗಳು ಬಲಿಷ್ಠ, ಅಂತರ್ಗತ ಮತ್ತು ಉಜ್ವಲ ಭಾರತವನ್ನು ನಿರ್ಮಿಸುತ್ತಿವೆ. ಮಹಿಳಾ ನೇತೃತ್ವದ ಅಭಿವೃದ್ಧಿಯ 9 ವರ್ಷಗಳ (#9YearsOfWomenLedDevelopment ) ಆಸಕ್ತಿದಾಯಕ ವಿಷಯಗಳನ್ನು ನಮೊ ಅಪ್ಲಿಕೇಶನ್ (NaMo Application) ನಲ್ಲಿ ನೋಡಬಹುದು."

***



(Release ID: 1930233) Visitor Counter : 114