ಪ್ರಧಾನ ಮಂತ್ರಿಯವರ ಕಛೇರಿ
ಜಪಾನ್, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾಕ್ಕೆ ಪ್ರಧಾನಮಂತ್ರಿಯವರ ಭೇಟಿ
Posted On:
16 MAY 2023 5:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 19 ರಿಂದ ಮೇ 21, 2023 ರವರೆಗೆ ಜಪಾನ್ನ ಪ್ರಧಾನ ಮಂತ್ರಿ ಶ್ರೀ ಕಿಶಿಡಾ ಫ್ಯೂಮಿಯೊ ಅವರ ಆಹ್ವಾನದ ಮೇರೆಗೆ ಜಪಾನಿನ ಅಧ್ಯಕ್ಷತೆಯಲ್ಲಿ ನಡೆಯುವ ಜಿ-7 ಶೃಂಗಸಭೆಗಾಗಿ ಹಿರೋಷಿಮಾಕ್ಕೆ ಭೇಟಿ ನೀಡಲಿದ್ದಾರೆ. ಈ ಸಮಾವೇಶದಲ್ಲಿ ಪ್ರಧಾನಮಂತ್ರಿಯವರು ಶಾಂತಿ, ಸ್ಥಿರತೆ, ಆಹಾರ ಮತ್ತು ಇಂಧನ ಭದ್ರತೆ, ಆರೋಗ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಪರಿಸರ, ಪಾಲುದಾರ ರಾಷ್ಟ್ರಗಳೊಂದಿಗೆ ಮೂಲಸೌಕರ್ಯ ಅಭಿವೃದ್ಧಿ ಮುಂತಾದ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಪಾನಿನ ಪ್ರಧಾನಿ ಶ್ರೀ ಕಿಶಿಡಾ ಫ್ಯೂಮಿಯೊ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಸಮಾವೇಶದಲ್ಲಿ ಭಾಗವಹಿಸುವ ಇತರ ಕೆಲವು ನಾಯಕರೊಂದಿಗೆ ಪ್ರಧಾನಮಂತ್ರಿಯವರು ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ.
ನಂತರ 22 ಮೇ 2023 ರಂದು, ಪ್ರಧಾನಮಂತ್ರಿಯವರು ಪಪುವಾ ನ್ಯೂಗಿನಿಯ ಪೋರ್ಟ್ ಮೊರೆಸ್ಬಿಗೆ ಪ್ರಯಾಣಿಸಲಿದ್ದಾರೆ, ಅಲ್ಲಿ ಅವರು ಪಪುವಾ ನ್ಯೂಗಿನಿಯ ಪ್ರಧಾನ ಮಂತ್ರಿ ಶ್ರೀ ಜೇಮ್ಸ್ ಮರಾಪೆ ಅವರೊಂದಿಗೆ ಜಂಟಿಯಾಗಿ ಭಾರತ-ಪೆಸಿಫಿಕ್ ದ್ವೀಪಗಳ ಸಹಕಾರದ ವೇದಿಕೆಯ (ಎಫ್ ಐಪಿಐಸಿ III ಶೃಂಗಸಭೆ) 3 ನೇ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ. 2014 ರಲ್ಲಿ ಪ್ರಾರಂಭಿಸಲಾದ, ಎಫ್ ಐಪಿಐಸಿ ವೇದಿಕೆಯು ಭಾರತ ಮತ್ತು 14 ಪೆಸಿಫಿಕ್ ದ್ವೀಪ ದೇಶಗಳನ್ನು ಒಳಗೊಂಡಿರುತ್ತದೆ, ಅವುಗಳ್ಯಾವುವೆಂದರೆ, ಕುಕ್ ದ್ವೀಪಗಳು, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ, ಫಿಜಿ, ಕಿರಿಬಾಟಿ, ನೌರು, ನಿಯು, ಪಲಾವ್, ಪಪುವಾ ನ್ಯೂ ಗಿನಿ, ರಿಪಬ್ಲಿಕ್ ಮಾರ್ಷಲ್ ದ್ವೀಪಗಳು, ಸಮೋವಾ, ಸೊಲೊಮನ್ ದ್ವೀಪಗಳು, ಟೊಂಗಾ, ಟುವಾಲು ಮತ್ತು ವನವಾಟು.
ಪ್ರಧಾನಮಂತ್ರಿ ಮೋದಿಯವರ ವೇಳಾಪಟ್ಟಿಯಲ್ಲಿ ಪಪುವಾ ನ್ಯೂಗಿನಿಯಲ್ಲಿ ಗವರ್ನರ್ ಜನರಲ್ ಸರ್ ಬಾಬ್ ದಾಡೆ ಮತ್ತು ಪ್ರಧಾನಮಂತ್ರಿ ಜೇಮ್ಸ್ ಮರಾಪೆ ಅವರನ್ನು ಭೇಟಿಯಾಗುವುದು ಸೇರಿದಂತೆ ದ್ವಿಪಕ್ಷೀಯ ಸಭೆಗಳು ಸೇರಿವೆ. ಇದು ಪಪುವಾ ನ್ಯೂಗಿನಿಗೆ ಭಾರತದ ಪ್ರಧಾನಮಂತವರಿಯವರ ಮೊದಲ ಭೇಟಿಯಾಗಿದೆ.
ನಂತರ, ಪ್ರಧಾನಿ ಮೋದಿಯವರು 22-24 ಮೇ 2023 ರಂದು ಆಸ್ಟ್ರೇಲಿಯಾದ ಸಿಡ್ನಿಗೆ ಭೇಟಿ ನೀಡಲಿದ್ದಾರೆ. ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಆಸ್ಟ್ರೇಲಿಯದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ಆಂಥೋನಿ ಅಲ್ಬನೀಸ್ ಅವರ ಆಹ್ವಾನದ ಮೇರೆಗೆ ಅಲ್ಲಿ ಅವರು ಅಮೇರಿಕಾದ ಅಧ್ಯಕ್ಷರಾದ ಶ್ರೀ. ಜೋಸೆಫ್ ಆರ್. ಬಿಡೆನ್ ಜೂನಿಯರ್ ಮತ್ತು ಜಪಾನ್ ದೇಶದ ಪ್ರಧಾನಿ ಶ್ರೀ. ಕಿಶಿದಾ ಫ್ಯೂಮಿಯೊ ಅವರೊಂದಿಗೆ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸುತ್ತಾರೆ.
ಶೃಂಗಸಭೆಯು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಚರ್ಚಿಸಲು ಮತ್ತು ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕಾಗಿ ಅವರ ಉದ್ದೇಶವನ್ನು ಮುನ್ನಡೆಸಲು ನಾಯಕರಿಗೆ ಅವಕಾಶವನ್ನು ಒದಗಿಸುತ್ತದೆ.
ಪ್ರಧಾನಮಂತ್ರಿಯವರು ತಮ್ಮ ಭೇಟಿಯ ಸಮಯದಲ್ಲಿ 24 ಮೇ 2023 ರಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸ್ಟ್ರೇಲಿಯನ್ ಸಿಇಒಗಳು ಮತ್ತು ಪ್ರಮುಖ ಉದ್ಯಮಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು 23 ಮೇ 2023 ರಂದು ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಭಾರತದಿಂದ ವಲಸೆ ಬಂದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
****
(Release ID: 1928505)
Visitor Counter : 122
Read this release in:
English
,
Urdu
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam