ಪ್ರಧಾನ ಮಂತ್ರಿಯವರ ಕಛೇರಿ

ನಾಗರಿಕರ ನಿರೂಪಣೆಯೊಂದಿಗೆ ಹೊಸ ಸಂಸತ್ತಿನ ವೀಡಿಯೊವನ್ನು ಹಂಚಿಕೊಂಡ ಪ್ರಧಾನಮಂತ್ರಿ

Posted On: 27 MAY 2023 1:46PM by PIB Bengaluru

ಪ್ರಧಾನಮಂತ್ರಿಯವರ ಕೋರಿಕೆಯಂತೆ ನಾಗರಿಕರು ತಮ್ಮ ಆಲೋಚನೆಗಳನ್ನು ತಿಳಿಸುವ ಹೊಸ ನಿರೂಪಣೆಯನ್ನು ಹೊಂದಿರುವ ಹೊಸ ಸಂಸತ್ತಿನ ವೀಡಿಯೊವನ್ನು ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.

ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ನಿರೂಪಣೆಯ ವೀಡಿಯೊವನ್ನೂ ಕೂಡಾ ಪ್ರಧಾನಮಂತ್ರಿಯವರು  ಹಂಚಿಕೊಂಡಿದ್ದಾರೆ. 

ತಮ್ಮ ಟ್ವಿಟ್ಟರ್ ಹ್ಯಾಂಡಲ್ ಮೂಲಕ ವೀಡಿಯೊಗಳನ್ನು ರಿಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು:

"#MyParliamentMyPride ಬಗ್ಗೆ ಹಲವಾರು ಜನರು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಅತ್ಯಂತ ಭಾವನಾತ್ಮಕ ನಿರೂಪಣೆಗಳ ಮೂಲಕ ನಾಗರೀಕರು ನಮ್ಮ ರಾಷ್ಟ್ರದ ಹೊಸ ಸಂಸತ್ತನ್ನು ಸ್ವಾಗತಿಸಿ ಹೆಮ್ಮೆಯ ಮನೋಭಾವವನ್ನು ವ್ಯಕ್ತಪಡಿಸುತ್ತಿದ್ದಾರೆ. ನಮ್ಮ ಹೊಸ ಸಂಸತ್ತು ಜನರ ಆಕಾಂಕ್ಷೆಗಳನ್ನು ಪೂರೈಸಲು ಹೆಚ್ಚಿನ ಹುರುಪಿನಿಂದ ಕೆಲಸ ಮಾಡುತ್ತಲೇ ಇರುತ್ತದೆ" ಎಂದು ಹೇಳಿದ್ದಾರೆ.

"ಪ್ರಜಾಪ್ರಭುತ್ವದ ಈ ಪುಣ್ಯಸ್ಥಾನವು ಭಾರತದ ಅಭಿವೃದ್ಧಿಯ ಪಥವನ್ನು ಬಲಪಡಿಸುವುದರೊಂದಿಗೆ ಲಕ್ಷಾಂತರ ಜನರ ಸಬಲೀಕರಣವನ್ನು ಮುಂದುವರಿಸಲಿ. #MyParliamentMyPride."

 

*****(Release ID: 1927750) Visitor Counter : 131