ಪ್ರಧಾನ ಮಂತ್ರಿಯವರ ಕಛೇರಿ
ಆಂಧ್ರಪ್ರದೇಶದ ಮಂಗಳಗಿರಿಯ ಏಮ್ಸ್ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
05 APR 2023 11:13AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 10 ಲಕ್ಷ ಹೊರರೋಗಿಗಳ ಸಮಾಲೋಚನೆಗಳನ್ನು ದಾಟಿದ ಆಂಧ್ರಪ್ರದೇಶದ ಮಂಗಳಗಿರಿಯ ಏಮ್ಸ್ ಸಾಧನೆಯನ್ನು ಶ್ಲಾಘಿಸಿದ್ದಾರೆ. ಇತ್ತೀಚೆಗೆ ನಡೆದ ಮನ್ ಕಿ ಬಾತ್ ಕಾರ್ಯಕ್ರಮವೊಂದರಲ್ಲಿ ವೈದ್ಯರೊಂದಿಗೆ ಸಂವಾದ ಮತ್ತು ಟೆಲಿ ಸಮಾಲೋಚನೆಯಿಂದ ಪ್ರಯೋಜನ ಪಡೆದವರೊಂದಿಗೆ ಸಂವಾದ ಸೇರಿದಂತೆ ಈ ವಿಷಯದ ಬಗ್ಗೆ ತಾವು ಚರ್ಚಿಸಿರುವುದಾಗಿ ಶ್ರೀ ಮೋದಿ ತಿಳಿಸಿದರು.
ಆಂಧ್ರಪ್ರದೇಶದ ಎಐಐಎಂಎಸ್ ಮಂಗಳಗಿರಿಯಲ್ಲಿ ಸುಮಾರು 10 ಲಕ್ಷ ಹೊರರೋಗಿಗಳ ಸಮಾಲೋಚನೆಗಳು ನಡೆದಿವೆ ಎಂಬ ಟ್ವೀಟ್ ಗೆ ಪ್ರಧಾನಿ ಉತ್ತರಿಸಿದ್ದಾರೆ.
"ಸಂಸ್ಥೆಯಿಂದ ಉತ್ತಮ ಸಾಧನೆಯಾಗಿದೆ. ಇತ್ತೀಚಿನ #MannKiBaat ಕಾರ್ಯಕ್ರಮವೊಂದರಲ್ಲಿ ನಾನು ವೈದ್ಯರೊಂದಿಗೆ ಸಂವಹನ ಮತ್ತು ಟೆಲಿ-ಸಮಾಲೋಚನೆಗಳಿಂದ ಪ್ರಯೋಜನ ಪಡೆದ ವ್ಯಕ್ತಿಯೊಂದಿಗೆ ಸಂವಹನ ಸೇರಿದಂತೆ ಈ ವಿಷಯವನ್ನು ಚರ್ಚಿಸಿದ್ದೇನೆ ಎಂದಿದ್ದಾರೆ."
***
(ಪ್ರಕಟಣೆ ಐ.ಡಿ.: 1926824)
ವಿಸಿಟರ್ ಕೌಂಟರ್ : 135
ಪ್ರಕಟಣೆಯನ್ನು ಇದರಲ್ಲಿ ಓದಿ:
Bengali
,
English
,
Urdu
,
Marathi
,
हिन्दी
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam