ಪ್ರಧಾನ ಮಂತ್ರಿಯವರ ಕಛೇರಿ
ಜಪಾನಿನ ಪ್ರಮುಖ ವ್ಯಕ್ತಿಗಳೊಂದಿಗೆ ಪ್ರಧಾನ ಮಂತ್ರಿಯವರ ಸಂವಾದ
Posted On:
20 MAY 2023 12:06PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಿ-7 ಶೃಂಗಸಭೆಗಾಗಿ ಹಿರೋಷಿಮಾಗೆ ಭೇಟಿ ನೀಡಿರುವ ಸಂದರ್ಭದಲ್ಲಿ ತಮ್ಮ ವೃತ್ತಿಯಲ್ಲಿ ಉನ್ನತ ಸಾಧನೆ ಮಾಡಿರುವ ಜಪಾನ್‌ನ ಪ್ರಮುಖ ವ್ಯಕ್ತಿಗಳಾದ ಡಾ. ಟೊಮಿಯೊ ಮಿಜೋಕಾಮಿ ಮತ್ತು ಶ್ರೀಮತಿ ಹಿರೋಕೊ ಟಕಯಾಮಾ ಅವರನ್ನು ಭೇಟಿಯಾದರು.
ಒಸಾಕಾ ವಿಶ್ವವಿದ್ಯಾನಿಲಯದ ಗ್ರಾಜುಯೇಟ್ ಸ್ಕೂಲ್ ಆಫ್ ಫಾರಿನ್ ಸ್ಟಡೀಸ್‌ನಲ್ಲಿ ಪ್ರೊಫೆಸರ್ ಎಮೆರಿಟಸ್ ಡಾ. ಟೊಮಿಯೊ ಮಿಜೊಕಾಮಿ ಅವರು ಹೆಸರಾಂತ ಲೇಖಕ ಮತ್ತು ಭಾಷಾಶಾಸ್ತ್ರಜ್ಞರಾಗಿದ್ದಾರೆ ಮತ್ತು ಹಿಂದಿ ಮತ್ತು ಪಂಜಾಬಿ ಭಾಷೆಗಳಲ್ಲಿ ಪ್ರವೀಣರಾಗಿದ್ದಾರೆ. ಜಪಾನ್‌ನಲ್ಲಿ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರಕ್ಕೆ ನೀಡಿದ ಕೊಡುಗೆಗಾಗಿ ಅವರಿಗೆ 2018 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. ಅವರು ಜಪಾನ್‌ನಲ್ಲಿ ಹಿಂದಿ ಕಲಿಕೆಯ ಅಡಿಪಾಯವನ್ನು ಹಾಕಿದ ಜಪಾನಿನ ವಿದ್ವಾಂಸರ ಸಮೂಹ ಸಂಕಲಿಸಿದ 1980 ರ ದಶಕದ ಬರಹಗಳ ಸಂಕಲನ "ಜ್ವಾಲಾಮುಖಿ" ಎಂಬ ವ್ಯಾಪಕವಾಗಿ ಮೆಚ್ಚುಗೆ ಪಡೆದ ಪುಸ್ತಕವನ್ನು ಪ್ರಧಾನಿಯವರಿಗೆ ನೀಡಿದರು.
ಹಿರೋಷಿಮಾದಲ್ಲಿ ಜನಿಸಿದ ಶ್ರೀಮತಿ ಹಿರೋಕೊ ಟಕಯಾಮಾ ಅವರು ಪಾಶ್ಚಿಮಾತ್ಯ ಶೈಲಿಯ ವರ್ಣಚಿತ್ರಕಾರರಾಗಿದ್ದಾರೆ, ಅವರ ಕೃತಿಗಳು ಎರಡು ದಶಕಗಳ ಭಾರತದೊಂದಿಗಿನ ಗಾಢವಾದ ಒಡನಾಟದಿಂದ ಪ್ರಭಾವಿತವಾಗಿವೆ. ಅವರು ಭಾರತದಲ್ಲಿ ಹಲವಾರು ಕಾರ್ಯಾಗಾರಗಳನ್ನು ನಡೆಸಿದ್ದಾರೆ ಮತ್ತು ಪ್ರದರ್ಶನಗಳನ್ನು ನಡೆಸಿದ್ದಾರೆ ಮತ್ತು ಕೆಲಕಾಲ ವಿಶ್ವ ಭಾರತಿ ವಿಶ್ವವಿದ್ಯಾಲಯ, ಶಾಂತಿ ನಿಕೇತನದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರು ತಮ್ಮ ಪ್ರಮುಖ ಕೃತಿಗಳಲ್ಲಿ ಒಂದಾದ 2022 ರಲ್ಲಿ ರಚಿಸಲಾದ ಭಗವಾನ್ ಬುದ್ಧನ ತೈಲ ವರ್ಣಚಿತ್ರವನ್ನು ಪ್ರಧಾನಿಯವರಿಗೆ ನೀಡಿದರು.
ಇಂತಹ ಸಂವಾದಗಳು ನಮ್ಮ ದೇಶಗಳ ನಡುವೆ ಪರಸ್ಪರ ತಿಳುವಳಿಕೆ, ಗೌರವ ಮತ್ತು ಬಲವಾದ ಬಾಂಧವ್ಯವನ್ನು ಸೃಷ್ಟಿಸಲು ಸಹಾಯ ಮಾಡುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ದಾರಿ ಮಾಡಿಕೊಡುವ ಇಂತಹ ಉತ್ಕೃಷ್ಟ ವಿನಿಮಯಗಳ ಮತ್ತಷ್ಟು ಅವಕಾಶಗಳನ್ನು ತಾವು ಎದುರು ನೋಡುತ್ತಿರುವುದಾಗಿ ಪ್ರಧಾನಿ ಹೇಳಿದರು.
******
(Release ID: 1925980)
Visitor Counter : 144
Read this release in:
Gujarati
,
English
,
Urdu
,
Marathi
,
Hindi
,
Assamese
,
Manipuri
,
Bengali
,
Punjabi
,
Odia
,
Tamil
,
Telugu
,
Malayalam