ಪ್ರಧಾನ ಮಂತ್ರಿಯವರ ಕಛೇರಿ
ಭಾರತೀಯ ನೌಕಾಪಡೆಗೆ 11 ಅತ್ಯಾಧುನಿಕ ಕರಾವಳಿ ಗಸ್ತು ಹಡಗುಗಳು ಮತ್ತು 6 ಅತ್ಯಾಧುನಿಕ ಕ್ಷಿಪಣಿ ಹಡಗುಗಳನ್ನು ಹೊಂದಲು ರಕ್ಷಣಾ ಸಚಿವಾಲಯವು ಭಾರತೀಯ ಹಡಗು ನಿರ್ಮಾಣ ಸಂಸ್ಥೆಗಳೊಂದಿಗೆ 19,600 ಕೋಟಿ ರೂಪಾಯಿಗಳ ಒಪ್ಪಂದಗಳಿಗೆ ಸಹಿ ಹಾಕಿದೆ.
ಇದು ಭಾರತೀಯ ನೌಕಾಪಡೆಯನ್ನು ಬಲಪಡಿಸುತ್ತದೆ ಮತ್ತು ಆತ್ಮನಿರ್ಭರದ ನಮ್ಮ ಧ್ಯೇಯದೆಡೆಗೆ ವೇಗವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದ್ದಾರೆ
Posted On:
31 MAR 2023 9:11AM by PIB Bengaluru
ರಕ್ಷಣಾ ಮಂತ್ರಿ ಕಚೇರಿಯ ಟ್ವೀಟ್ನಲ್ಲಿ, ರಕ್ಷಣಾ ಸಚಿವಾಲಯವು ಮಾರ್ಚ್ 30, 2023 ರಂದು 19,600 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭಾರತೀಯ ನೌಕಾಪಡೆಗೆ 11 ಅತ್ಯಾಧುನಿಕ ಕರಾವಳಿ ಗಸ್ತು ಹಡಗುಗಳು ಮತ್ತು 6 ಅತ್ಯಾಧುನಿಕ ಕ್ಷಿಪಣಿ ಹಡಗುಗಳನ್ನು ಹೊಂದಲು ರಕ್ಷಣಾ ಸಚಿವಾಲಯವು ಭಾರತೀಯ ಹಡಗು ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿದೆ ಎಂದು ತಿಳಿಸಿದೆ.
ರಕ್ಷಣಾ ಮಂತ್ರಿಯವರ ಕಚೇರಿಯ ಟ್ವೀಟ್ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿರುವರು:
"ಇದು ಭಾರತೀಯ ನೌಕಾಪಡೆಯನ್ನು ಬಲಪಡಿಸುತ್ತದೆ ಮತ್ತು ನಮ್ಮ ಆತ್ಮನಿರ್ಭರದ ನಮ್ಮ ಧ್ಯೇಯದೆಡೆಗೆ ವೇಗವನ್ನು ನೀಡುತ್ತದೆ"
*****
(Release ID: 1914101)
Visitor Counter : 111
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam