ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮರುಬಳಕೆಯ ಉಪಯೋಗಕ್ಕಾಗಿ ಬೆಂಗಳೂರು ಮೂಲದ ಹೃದ್ರೋಗ ತಜ್ಞ ಮತ್ತು ಅವರ ಮಗನ ಪ್ರಯತ್ನಗಳನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು

Posted On: 07 MAR 2023 2:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಮರುಬಳಕೆ ಮತ್ತು 'ತ್ಯಾಜ್ಯದಿಂದ ಸಂಪತ್ತಿನೆಡೆಗೆ' ಕುರಿತು ಜಾಗೃತಿ ಮೂಡಿಸುತ್ತಿರುವ ಬೆಂಗಳೂರಿನ ಹಿರಿಯ ಹೃದ್ರೋಗ ತಜ್ಞರಾದ ಡಾ. ದೀಪಕ್ ಕೃಷ್ಣಮೂರ್ತಿ ಮತ್ತು ಅವರ ಪುತ್ರನ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.

ಮರುಬಳಕೆ ಮತ್ತು 'ತ್ಯಾಜ್ಯದಿಂದ ಸಂಪತ್ತಿನೆಡೆಗೆ' ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಇದೇ ರೀತಿಯ ಪ್ರಯತ್ನಗಳನ್ನು ಇತರರು ಕೂಡಾ ಪಾಲಿಸುವಂತೆ ಶ್ರೀ ಮೋದಿಯವರು ಜನತೆಯನ್ನು ಒತ್ತಾಯಿಸಿದರು.

ಪ್ರತಿ ಶೈಕ್ಷಣಿಕ ವರ್ಷದ ಕೊನೆಯಲ್ಲಿ ತನ್ನ ಮಗ ಶ್ರದ್ಧೆಯಿಂದ ತನ್ನ ಹಳೆಯ ನೋಟ್ ಬುಕ್ ಗಳಿಂದ ಖಾಲಿ ಕಾಗದದ ಹಾಳೆಗಳನ್ನು ಹೊರತೆಗೆಯುತ್ತಾನೆಂದೂ ಅವುಗಳನ್ನು ತಾವು ಒಟ್ಟಿಗೆ ಕಟ್ಟಿಹಾಕಿ ಬೈಂಡಿಂಗ್ ಮಾಡಿಸಿ ತಮ್ಮ ಕಚ್ಚಾ ಕೆಲಸ ಮತ್ತು ಅಭ್ಯಾಸ ಕೆಲಸಕ್ಕಾಗಿ ಬಳಸುತ್ತೇನೆಂದೂ ವೈದ್ಯರು ಮಾಹಿತಿ ನೀಡಿದ್ದಾರೆ.

ಮೇಲೆ ತಿಳಿಸಿದಂತೆ ವೈದ್ಯರ ಟ್ವೀಟ್ ಗೆ ಪ್ರತ್ಯುತ್ತರವಾಗಿ, ಪ್ರಧಾನಮಂತ್ರಿಯವರು;

"ಸುಸ್ಥಿರ ಜೀವನದ ದೊಡ್ಡ ಸಂದೇಶದೊಂದಿಗೆ ಇದು ತಂಡದ ಉತ್ತಮ ಪ್ರಯತ್ನವಾಗಿದೆ. ನಿಮ್ಮ ಮಗನಿಗೆ ಮತ್ತು ನಿಮಗೆ ಅಭಿನಂದನೆಗಳು. 

ಮರುಬಳಕೆ ಮತ್ತು 'ತ್ಯಾಜ್ಯದಿಂದ ಸಂಪತ್ತಿನೆಡೆಗಿನ' ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಇದೇ ರೀತಿಯ ತಮ್ಮ ಪ್ರಯತ್ನಗಳನ್ನು ಹಂಚಿಕೊಳ್ಳಲು ಇತರರನ್ನು ಒತ್ತಾಯಿಸುತ್ತೇನೆ" ಟ್ವೀಟ್ ಮಾಡಿದ್ದಾರೆ

****


(Release ID: 1905103) Visitor Counter : 136