ಪ್ರಧಾನ ಮಂತ್ರಿಯವರ ಕಛೇರಿ
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣದಲ್ಲಿ ಪ್ರಯಾಣಿಕನ ಉತ್ಸಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ
Posted On:
16 FEB 2023 12:18PM by PIB Bengaluru
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ ಖುಷಿ, ಅನುಭವಗಳನ್ನು ಹಂಚಿಕೊಂಡ ಪ್ರಯಾಣಿಕನ ಉತ್ಸಾಹವನ್ನು ಕಂಡು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮೆಚ್ಚಿಕೊಂಡಿದ್ದಾರೆ.
ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿನ ಪ್ರಯಾಣ ಕುರಿತು ಹವ್ಯಾಸಿ ಪ್ರಯಾಣಿಕರೊಬ್ಬರು ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ,
“ಹೌದು, ಈ ಪಯಣದಲ್ಲಿ ಬಹಳ ದೂರ ಸಾಗಿದ್ದೇವೆ ಮತ್ತು ಮುಂದೆಯೂ ಬಹಳ ದೂರ ಸಾಗಬೇಕಾಗಿದೆ. ವಂದೇ ಭಾರತ್ ಎಕ್ಸ್ ಪ್ರೆಸ್ ನಲ್ಲಿ ಪ್ರಯಾಣಿಸಿ ಅದರ ಖುಷಿ, ಅನುಭವಗಳನ್ನು ಹಂಚಿಕೊಂಡ ನಿಮ್ಮ ಉತ್ಸಾಹವನ್ನು ನಾನು ಶ್ಲಾಘಿಸುತ್ತೇನೆ, ಖುಷಿಯಾಗುತ್ತಿದೆ'' ಎಂದು ಬರೆದುಕೊಂಡಿದ್ದಾರೆ.
****
(Release ID: 1899970)
Read this release in:
Assamese
,
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam