ಪ್ರಧಾನ ಮಂತ್ರಿಯವರ ಕಛೇರಿ
ಮಹರ್ಷಿ ದಯಾನಂದ ಸರಸ್ವತಿಯ 200ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ವರ್ಷವಿಡೀ ಆಚರಣೆ, ಫೆಬ್ರವರಿ 12ರಂದು ಪ್ರಧಾನ ಮಂತ್ರಿ ಉದ್ಘಾಟನೆ
ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಸಮಾಜ ಸುಧಾರಕರಾದ ಮಹರ್ಷಿ ದಯಾನಂದ ಸರಸ್ವತಿ ಅವರು 1875 ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು.
ಆರ್ಯ ಸಮಾಜವು ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ
ವಿಶೇಷವಾಗಿ ಭಾರತ ಮಟ್ಟದಲ್ಲಿ ಸಮಾಜ ಸುಧಾರಣೆಗೆ ಕೊಡುಗೆ ನೀಡಿದ ವ್ಯಕ್ತಿಗಳಿಗೆ ಇದುವರೆಗೆ ಸಿಗಬೇಕಾದ ಗೌರವ ಮನ್ನಣೆ ಸಿಗದಿದ್ದವರ ಜನ್ಮ ದಿನವನ್ನು ಆಚರಿಸಲು, ಭಾರತ ಸರಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಸಮಾಜ ಸುಧಾರಕರು ಮತ್ತು ಪ್ರಮುಖ ವ್ಯಕ್ತಿಗಳ ದಿನವನ್ನು ಆಚರಿಸಲು ಬದ್ಧವಾಗಿದೆ,
Posted On:
11 FEB 2023 10:40AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹರ್ಷಿ ದಯಾನಂದ ಸರಸ್ವತಿ ಅವರ 200ನೇ ಜನ್ಮದಿನದ ಸ್ಮರಣಾರ್ಥ ವರ್ಷಪೂರ್ತಿ ನಡೆಯುವ ಆಚರಣೆಗೆ ದೆಹಲಿಯ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಾಳೆ ಅಂದರೆ 12 ಫೆಬ್ರವರಿ 2023 ರಂದು ಬೆಳಿಗ್ಗೆ 11 ಗಂಟೆಗೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಕಾರ್ಯಕ್ರಮದಲ್ಲಿ ನೆರೆದವರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
1824 ರ ಫೆಬ್ರವರಿ 12 ರಂದು ಜನಿಸಿದ ಮಹರ್ಷಿ ದಯಾನಂದ ಸರಸ್ವತಿ ಅವರು ಸಮಾಜ ಸುಧಾರಕರಾಗಿದ್ದರು, ಅವರು 1875 ರಲ್ಲಿ ಆರ್ಯ ಸಮಾಜವನ್ನು ಸ್ಥಾಪಿಸಿದರು. ಆರ್ಯ ಸಮಾಜವು ಸಾಮಾಜಿಕ ಸುಧಾರಣೆಗಳು ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಸಾಂಸ್ಕೃತಿಕ ಮತ್ತು ಸಾಮಾಜಿಕ ಜಾಗೃತಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಸಮಾಜ ಸುಧಾರಕರು ಮತ್ತು ಪ್ರಮುಖ ವ್ಯಕ್ತಿಗಳ ಜನ್ಮ ದಿನವನ್ನು ಆಚರಿಸಲು ಸರ್ಕಾರವು ಬದ್ಧವಾಗಿದೆ, ವಿಶೇಷವಾಗಿ ಅವರ ಕೊಡುಗೆಗಳನ್ನು ಇನ್ನೂ ಭಾರತ ಮಟ್ಟದಲ್ಲಿ ಪರಿಚಯಿಸದಿದ್ದವರ, ಸರಿಯಾದ ಗೌರವ ಮನ್ನಣೆ ಸಿಗದವರ ದಿನಾಚರಣೆಗಳನ್ನು ನಡೆಸಲು ಸರ್ಕಾರ ಬದ್ಧವಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಜಂಜಾತಿಯ ಗೌರವ ದಿನ ಎಂದು ಘೋಷಿಸುವುದರಿಂದ ಹಿಡಿದು ಶ್ರೀ ಅರಬಿಂದೋ ಅವರ 150ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸುವವರೆಗೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂತಹ ಉಪಕ್ರಮಗಳನ್ನು ಮುಂದಾಳತ್ವದಿಂದ ಮುನ್ನಡೆಸುತ್ತಿದ್ದಾರೆ.
*****
(Release ID: 1898394)
Visitor Counter : 168
Read this release in:
Odia
,
Assamese
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam