ಪ್ರಧಾನ ಮಂತ್ರಿಯವರ ಕಛೇರಿ

2023 ರ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಶುಭ ಹಾರೈಸಿದ ಪ್ರಧಾನ ಮಂತ್ರಿಗಳು 

Posted On: 11 JAN 2023 6:35PM by PIB Bengaluru

ಒಡಿಶಾದಲ್ಲಿ ನಾಳೆ ಆರಂಭವಾಗಲಿರುವ 2023ರ ಹಾಕಿ ವಿಶ್ವಕಪ್‌ನಲ್ಲಿ ಭಾಗವಹಿಸುವ ಎಲ್ಲಾ ತಂಡಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿಗಳು,

"2023 ರ ಹಾಕಿ ವಿಶ್ವಕಪ್ ಒಡಿಶಾದಲ್ಲಿ ನಾಳೆ ಪ್ರಾರಂಭವಾಗಲಿದ್ದು, ಭಾಗವಹಿಸುವ ಎಲ್ಲಾ ತಂಡಗಳಿಗೆ ನನ್ನ ಶುಭಾಶಯಗಳು. ಈ ಪಂದ್ಯಾವಳಿಯು ಕ್ರೀಡಾ ಮನೋಭಾವವನ್ನು ಇನ್ನಷ್ಟು ಬಲಪಡಿಸಲಿ. ಹಾಕಿ ಎಂಬ ಸುಂದರ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲಿ. ಭಾರತವು ಈ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದು ಬಹಳ ಹೆಮ್ಮೆಯ ವಿಷಯ'' ಎಂದಿದ್ದಾರೆ.

***



(Release ID: 1890603) Visitor Counter : 124