ಪ್ರಧಾನ ಮಂತ್ರಿಯವರ ಕಛೇರಿ

ರೋಶ್ ಹಶ್ನಾ ಅಂಗವಾಗಿ ವಿಶ್ವಾದ್ಯಂತ ಇರುವ ಯಹೂದಿ ಜನರಿಗೆ ಪ್ರಧಾನಮಂತ್ರಿ ಶುಭಾಶಯ 

Posted On: 25 SEP 2022 6:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಸ್ರೇಲ್‌ ಪ್ರಧಾನಮಂತ್ರಿ ಯೇರ್ ಲ್ಯಾಪಿಡ್, ಇಸ್ರೇಲ್‌ನ ಸ್ನೇಹಮಯ ಜನತೆ ಮತ್ತು ವಿಶ್ವಾದ್ಯಂತ ಇರುವ ಯಹೂದಿ ಜನರಿಗೆ ರೋಶ್ ಹಶ್ನಾ ಸಂದರ್ಭದಲ್ಲಿ ಆತ್ಮೀಯ ಶುಭಾಶಯಗಳನ್ನು ಕೋರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ; 
 

"ನನ್ನ ಸ್ನೇಹಿತ @ಯೇರ್ ಲ್ಯಾಪಿಡ್, ಇಸ್ರೇಲ್‌ನ ಸ್ನೇಹಮಯ ಜನತೆ ಮತ್ತು ವಿಶ್ವಾದ್ಯಂತ ಇರುವ ಯಹೂದಿ ಸಮುದಾಯಕ್ಕೆ ರೋಶ್ ಹಶ್ನಾ ಅಂಗವಾಗಿ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧಿ ತರಲಿ. ಶಾನಾ ತೋವಾ!" ಎಂದು ಹಾರೈಸಿದ್ದಾರೆ.
 

********







(Release ID: 1862248) Visitor Counter : 115