ಪ್ರಧಾನ ಮಂತ್ರಿಯವರ ಕಛೇರಿ

ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ ಅವರಿಗೆ ಪ್ರಧಾನಮಂತ್ರಿ ಅವರಿಂದ ಅಭಿನಂದನೆ.

Posted On: 15 SEP 2022 4:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಗೊಂಡ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ ಅವರನ್ನು ಅಭಿನಂದಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು ಅದರಲ್ಲಿ ,

"ಅಂಗೋಲಾದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಗೌರವಾನ್ವಿತ ಜೊವಾವೊ ಮ್ಯಾನುಯೆಲ್ ಗೊನ್ಕಾಲ್ವೆಸ್ ಲೌರೆಂಕೊ @jlprdeangola ಅವರಿಗೆ ಅಭಿನಂದನೆಗಳು. ನಮ್ಮ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಲು ಪರಸ್ಪರ ನಿಕಟವಾಗಿ ಕೆಲಸ ಮಾಡುವುದನ್ನು  ನಾನು ಎದುರು ನೋಡುತ್ತಿದ್ದೇನೆ”ಎಂದು ಹೇಳಿದ್ದಾರೆ. 

 

*****
 

 



(Release ID: 1859615) Visitor Counter : 107