ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಮಹತ್ವದ ನಿರ್ಧಾರವೊಂದರಲ್ಲಿ, ಆಯುಷ್ಮಾನ್ ಭಾರತ್-ಪಿಎಂಜೆವೈ ಅಡಿಯಲ್ಲಿ ತೃತೀಯಲಿಂಗಿ ವ್ಯಕ್ತಿಗಳಿಗೆ ಸಂಯೋಜಿತ ಆರೋಗ್ಯ ಪ್ಯಾಕೇಜ್ ಒದಗಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನಡುವೆ ತಿಳಿವಳಿಕೆ ಒಪ್ಪಂದ


ಸರ್ಕಾರದ ಈ ನಿರ್ಣಾಯಕ ಕ್ರಮದಿಂದ ಮೂಲಭೂತ ಸಾಮಾಜಿಕ ಪರಿವರ್ತನೆಯಲ್ಲಿ ಇಂದು ಮಹತ್ವದ ದಿನವಾಗಿದೆ: ಡಾ. ಮನ್ಸುಖ್ ಮಾಂಡವೀಯ 

“ಈ ಕ್ರಮವು ಸಮಾನತೆಯನ್ನು ಖಾತರಿಪಡಿಸುವುದನ್ನೂ ಮೀರಿದೆ; ಒಪ್ಪಂದವು ತೃತೀಯಲಿಂಗಿ ಸಮುದಾಯಕ್ಕೆ ವಿಶೇಷ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ” 

"ಸರ್ಕಾರ ಮತ್ತು ಸಮಾಜದ ಸಹಯೋಗದೊಂದಿಗೆ ಹಿಂದುಳಿದ ಸಮುದಾಯಗಳು ಘನತೆ ಮತ್ತು ಸ್ವಾವಲಂಬನೆಯೊಂದಿಗೆ ಪ್ರಗತಿ ಸಾಧಿಸಬಹುದು" 

ಶಿಕ್ಷಣ, ಘನತೆಯ ಜೀವನ, ಆರೋಗ್ಯ ಬೆಂಬಲ, ಜೀವನೋಪಾಯಕ್ಕಾಗಿ ಅವಕಾಶಗಳು ಮತ್ತು ಕೌಶಲ್ಯ ವರ್ಧನೆ: ಈ ಐದು ಭರವಸೆಗಳೊಂದಿಗೆ ಸಮಾಜದಲ್ಲಿ ಬದಲಾವಣೆಯನ್ನು ತರಲು ಭಾರತ ಸರ್ಕಾರವು ಬದ್ಧವಾಗಿದೆ: ಡಾ. ವೀರೇಂದ್ರ ಕುಮಾರ್

Posted On: 24 AUG 2022 1:13PM by PIB Bengaluru

ಇಂದು ಮಹತ್ವದ ನಿರ್ಧಾರವೊಂದರಲ್ಲಿ, ಆಯುಷ್ಮಾನ್ ಭಾರತ್-ಪಿಎಂಜೆವೈ ಅಡಿಯಲ್ಲಿ ತೃತೀಯಲಿಂಗಿ ವ್ಯಕ್ತಿಗಳಿಗೆ ಸಮಗ್ರ ಆರೋಗ್ಯ ಪ್ಯಾಕೇಜ್ ಒದಗಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ಎಚ್‌ಎ) ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಮನ್ಸುಖ್ ಮಾಂಡವೀಯ ಮತ್ತು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಡಾ. ವೀರೇಂದ್ರ ಕುಮಾರ್ ಅವರ ಸಮ್ಮುಖದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ (ಎನ್‌ಎಚ್‌ಎ) ಸಿಇಒ ಡಾ. ಆರ್.ಎಸ್.ಶರ್ಮಾ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯದರ್ಶಿ ಶ್ರೀ ಆರ್. ಸುಬ್ರಮಣ್ಯಂ ಅವರು ಈ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದರು. 

 


 

ಇದೊಂದು ಮಹತ್ವದ ದಿನ ಎಂದು ಬಣ್ಣಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವೀಯ, ಈ ತಿಳಿವಳಿಕೆ ಒಪ್ಪಂದವು ದೇಶದಲ್ಲೇ ಒಂದು ಅಪರೂಪದ್ದಾಗಿದೆ ಎಂದು ಬಣ್ಣಿಸಿದರು, ಇದು ಎಬಿ-ಪಿಎಂಜೆಎವೈ ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ತೃತೀಯಲಿಂಗಿ ಸಮುದಾಯಕ್ಕೆ ಸೂಕ್ತವಾದ ಮತ್ತು ಗೌರವದ ಸ್ಥಾನವನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ಈ ಒಪ್ಪಂದವು ಸಮಾಜದಲ್ಲಿ ಮಹತ್ವದ ಪರಿವರ್ತನೆಯ ಸುಧಾರಣೆಗೆ ಅಡಿಪಾಯ ಹಾಕಿದೆ. ತೃತೀಯಲಿಂಗಿ ಸಮುದಾಯಕ್ಕೆ ವಿಶೇಷ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಕ್ರಮವು ಹಿಂದುಳಿದ ಸಮುದಾಯಕ್ಕೆ ಸಮಾನತೆಯನ್ನು ಖಾತ್ರಿಪಡಿಸುವುದನ್ನೂ ಮೀರಿದೆ ಎಂದು ಅವರು ಹೇಳಿದರು. ತೃತೀಯಲಿಂಗಿ ಸಮುದಾಯವು ಕಳಂಕ ಅನುಭವಿಸುತ್ತದೆ ಮತ್ತು ಸಾಮಾಜಿಕವಾಗಿ ಪ್ರತ್ಯೇಕತೆಗೆ ಒಳಗಾಗುತ್ತಿದೆ ಎಂದು ಅವರು, ಎಬಿ-ಪಿಎಂಜೆಎವೈ ಅಡಿಯಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುವುದು ಎಲ್ಲರನ್ನೂ ಒಳಗೊಳ್ಳುವ ಸಮಾಜದತ್ತ ಮಹತ್ವದ ಮತ್ತು ದೃಢವಾದ ಹೆಜ್ಜೆಯಾಗಿದೆ ಎಂದು ಒತ್ತಿ ಹೇಳಿದರು. ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಇಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ, ಏಕೆಂದರೆ ಅವರು ದೇಶದ ಎಲ್ಲ ಜನರ ಸಮಾನತೆ ಹಾಗು ಸಮಗ್ರ ಸಮಾಜಕ್ಕಾಗಿ ಹೋರಾಡಿದವರು" ಎಂದು ಡಾ ಮಾಂಡವೀಯ ಹೇಳಿದರು.

 


ಸೇವೆಗಳ ವಿತರಣಾ ಸರಪಳಿಯಲ್ಲಿ ಕೊನೆಯ ವ್ಯಕ್ತಿಗೆ ಸರ್ಕಾರದ ನಿರ್ಧಾರಗಳು ಮತ್ತು ಕಾರ್ಯಗಳ ಪ್ರಯೋಜನಗಳು ದೊರೆಯುವ ಅಂತ್ಯೋದಯದ  ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಬದ್ಧತೆ ಮತ್ತು ಸಮರ್ಪಣೆಯನ್ನು ಅವರು ಪುನರುಚ್ಚರಿಸಿದರು, ತೃತೀಯಲಿಂಗಿ ಸಮುದಾಯದ ಹಕ್ಕುಗಳನ್ನು ಗುರುತಿಸಲು ಸರ್ಕಾರವು ನಿರ್ಣಾಯಕ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಮಾತ್ರವಲ್ಲದೆ, ಅವರ ಕಲ್ಯಾಣಕ್ಕಾಗಿ ಹಲವಾರು ವ್ಯವಸ್ಥಿತ ಕ್ರಮಗಳನ್ನು ಕೈಗೊಂಡಿದೆ ಎಂದು ಡಾ.ಮಾಂಡವೀಯ ಒತ್ತಿ ಹೇಳಿದರು. ತೃತೀಯಲಿಂಗಿ ಸಮುದಾಯಕ್ಕಾಗಿ “ತೃತೀಯಲಿಂಗಿ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯಿದೆ, 2019", ಗರಿಮಾ ಗ್ರೆಹ್, ಪಿಎಂ ದಕ್ಷ್ ಕಾರ್ಯಕ್ರಮ ಹಾಗೂ ಇನ್ನಿತರ ಅಥವಾ ಇತರ ಯೋಜನೆಗಳು/ಉಪಕ್ರಮಗಳನ್ನು ತೆಗೆದುಕೊಂಡ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವನ್ನು ಅವರು ಅಭಿನಂದಿಸಿದರು. ಗೌರವಾನ್ವಿತ ಪ್ರಧಾನಿಯವರ "ನವ ಭಾರತ" ದ ದೃಷ್ಟಿಯ ಅಡಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಮಾಜದ ಕಡೆಗೆ ಸರ್ಕಾರದ ಪ್ರಯತ್ನಗಳೊಂದಿಗೆ ಕೈಜೋಡಿಸಲು ಸಮಾಜದ ಎಲ್ಲಾ ವರ್ಗಗಳನ್ನು ಅವರು ಒತ್ತಾಯಿಸಿದರು. "ಸರ್ಕಾರ ಮತ್ತು ಸಮಾಜದ" ಸಹಯೋಗದೊಂದಿಗೆ ಹಿಂದುಳಿದ ಸಮುದಾಯಗಳು ಘನತೆ ಮತ್ತು ಸ್ವಾವಲಂಬನೆಯೊಂದಿಗೆ ಪ್ರಗತಿ ಹೊಂದಬಹುದು ಎಂದು ಅವರು ಹೇಳಿದರು.

 


ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್‌ ಹೆಚ್‌ ಎ) ಹಾಗು ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಸಚಿವಾಲಯ ನಡುವಿನ ಇಂದಿನ ತಿಳಿವಳಿಕಾ ಒಪ್ಪಂದವು ದೇಶಾದ್ಯಂತ ತೃತೀಯಲಿಂಗಿಗಳಿಗೆ (ತೃತೀಯಲಿಂಗಿ ವ್ಯಕ್ತಿಗಳಿಗಾಗಿ ರಾಷ್ಟ್ರೀಯ ಪೋರ್ಟಲ್ ನೀಡಿದ ತೃತೀಯಲಿಂಗಿ ಪ್ರಮಾಣಪತ್ರವನ್ನು ಹೊಂದಿರುವವರಿಗೆ) ಎಲ್ಲ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಡಾ. ಮಾಂಡವೀಯ ಹೇಳಿದರು. ಸಾಮಾಜಿಕ ನ್ಯಾಯ ಮತ್ತು ಉದ್ಯೋಗ ಸಚಿವಾಲಯ ಪ್ರತಿ ತೃತೀಯಲಿಂಗಿ ಫಲಾನುಭವಿಗೆ ವರ್ಷಕ್ಕೆ ರೂ.5 ಲಕ್ಷ ವಿಮಾ ರಕ್ಷಣೆಯನ್ನು ನೀಡುತ್ತದೆ. ಅಸ್ತಿತ್ವದಲ್ಲಿರುವ ಎಬಿ-ಪಿಎಂಜೆವೈ ಪ್ಯಾಕೇಜ್‌ಗಳು ಮತ್ತು ತೃತೀಯಲಿಂಗಿಗಳಿಗಾಗಿ ನಿರ್ದಿಷ್ಟ ಪ್ಯಾಕೇಜ್‌ಗಳು (ಲಿಂಗ ಮರುವಿನ್ಯಾಸ ಶಸ್ತ್ರಚಿಕಿತ್ಸೆ (ಎಸ್‌ ಆರ್‌ ಎಸ್) ಮತ್ತು ಚಿಕಿತ್ಸೆ) ಸೇರಿದಂತೆ ತೃತೀಯಲಿಂಗಿ ವರ್ಗಕ್ಕಾಗಿ ಸಮಗ್ರ ಪ್ಯಾಕೇಜ್ ಅನ್ನು ಸಿದ್ಧಪಡಿಸಲಾಗುತ್ತಿದೆ. ಅವರು ದೇಶಾದ್ಯಂತ ಯಾವುದೇ ಎಬಿ-ಪಿಎಂಜೆವೈ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅರ್ಹರಾಗಿರುತ್ತಾರೆ, ಅಲ್ಲಿ ನಿರ್ದಿಷ್ಟ ಪ್ಯಾಕೇಜ್‌ಗಳು ಲಭ್ಯವಿರುತ್ತವೆ. ಈ ಯೋಜನೆಯು ಇತರ ಕೇಂದ್ರ/ರಾಜ್ಯ ಪ್ರಾಯೋಜಿತ ಯೋಜನೆಗಳಿಂದ ಅಂತಹ ಪ್ರಯೋಜನಗಳನ್ನು ಪಡೆಯದ ಎಲ್ಲಾ ತೃತೀಯಲಿಂಗಿ ವ್ಯಕ್ತಿಗಳಿಗೂ ಲಭ್ಯವಿರುತ್ತದೆ. 
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಡಾ. ವೀರೇಂದ್ರ ಕುಮಾರ್ ಮಾತನಾಡಿ, ಬಲವಾದ ರಾಜಕೀಯ ಇಚ್ಛಾಶಕ್ತಿಯೊಂದಿಗೆ ದೇಶದಲ್ಲಿ ಬದಲಾವಣೆಯಾಗುತ್ತಿದೆ ಎಂದರು. ಶಿಕ್ಷಣ, ಘನತೆಯೊಂದಿಗೆ ಜೀವನ, ಆರೋಗ್ಯ ಬೆಂಬಲ, ಜೀವನೋಪಾಯಕ್ಕಾಗಿ ಅವಕಾಶಗಳು ಮತ್ತು ಕೌಶಲ್ಯ ವರ್ಧನೆ: ಈ ಐದು ಭರವಸೆಗಳ ಪ್ಯಾಕೇಜ್ ಅನ್ನು ಅನುಷ್ಠಾನಗೊಳಿಸಲು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ  ತೆಗೆದುಕೊಂಡ ಹಲವಾರು ಕ್ರಮಗಳನ್ನು ಅವರು ವಿವರಿಸಿದರು. ವಂಚಿತ ಮತ್ತು ಹಿಂದುಳಿದ ವರ್ಗಗಳಿಗೆ ಗೌರವಯುತ ಜೀವನ ಮತ್ತು ಜೀವನೋಪಾಯವನ್ನು ಒದಗಿಸುವ ಮೂಲಕ ನಿರ್ಬಂಧಿತ ಸಾಮಾಜಿಕ ವ್ಯವಸ್ಥೆಯಿಂದ ಹೊರಬರಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಎರಡು ಸಚಿವಾಲಯಗಳ ಹಿರಿಯ ಅಧಿಕಾರಿಗಳು ಮತ್ತು ತೃತೀಯಲಿಂಗಿ ಸಮುದಾಯದ ಸದಸ್ಯರು, ಮತ್ತಿತರರು ಉಪಸ್ಥಿತರಿದ್ದರು.

 

************


(Release ID: 1854134) Visitor Counter : 226