ಪ್ರಧಾನ ಮಂತ್ರಿಯವರ ಕಛೇರಿ
ಸ್ವಾತಂತ್ರ್ಯವನ್ನು ಘೋಷಿಸಿದ 75 ವರ್ಷಗಳ ಹಳೆಯ ಪತ್ರಿಕೆಯನ್ನು ಉಳಿಸಿದ ಡಾ. ಎಚ್.ವಿ. ಹಂದೆ ಅವರ ಉತ್ಸಾಹವನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.
ಪ್ರಕಟಣಾ ದಿನಾಂಕ:
14 AUG 2022 10:18PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 75 ವರ್ಷಗಳಷ್ಟು ಹಳೆಯದಾದ ಪತ್ರಿಕೆಯು ಸ್ವಾತಂತ್ರ್ಯವನ್ನು ಘೋಷಿಸುತ್ತಿರುವುದನ್ನು ತೋರಿಸಿ ಟ್ವೀಟ್ ಮಾಡಿದ ಡಾ. ಎಚ್.ವಿ. ಹಂದೆ ಅವರ ಶಕ್ತಿ ಮತ್ತು ಉತ್ಸಾಹವನ್ನುಶ್ಲಾಘಿಸಿದರು. ಡಾ. ಎಚ್.ವಿ. ಹಂದೆ ಜೀ ಅವರಂತಹ ವ್ಯಕ್ತಿಗಳು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು ಎಂದು ಪ್ರಧಾನಮಂತ್ರಿ ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವದ ಬಗ್ಗೆ ಡಾ. ಎಚ್.ವಿ. ಹಂದೆ ಅವರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಅವರು ಟ್ವೀಟ್ ಮಾಡಿದ್ದಾರೆ.
"ಡಾ.ಎಚ್.ವಿ.ಹಂದೆ ಅವರಂತಹ ವ್ಯಕ್ತಿಗಳು ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಾಧಾರಣ ವ್ಯಕ್ತಿಗಳು. ಅವರ ಹುರುಪು ಮತ್ತು ಉತ್ಸಾಹವನ್ನು ನೋಡಿ ಸಂತೋಷವಾಗಿದೆ. @DrHVHande1" ಎಂದಿದ್ದಾರೆ.
*********
(ಪ್ರಕಟಣೆ ಐ.ಡಿ.: 1851926)
ವಿಸಿಟರ್ ಕೌಂಟರ್ : 190
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam