ಪ್ರಧಾನ ಮಂತ್ರಿಯವರ ಕಛೇರಿ

ಪಾಣಿಪತ್‌ನಲ್ಲಿ 2ಜಿ ಎಥೆನಾಲ್ ಸ್ಥಾವರ ಲೋಕಾರ್ಪಣೆ ಮಾಡಿದ ಪ್ರಧಾನಿ


ಜೈವಿಕ ಇಂಧನವು ಪ್ರಕೃತಿ ರಕ್ಷಿಸುವ ಪರ್ಯಾಯ ಮೂಲವಾಗಿದೆ – ನಮಗಾಗಿ ಜೈವಿಕ ಇಂಧನವು ಹಸಿರು ಮತ್ತು ಪರಿಸರ ಉಳಿಸುವ ಇಂಧನವಾಗಿದೆ

.
"ರಾಜಕೀಯ ಸ್ವಾರ್ಥ ಮತ್ತು ಅಡ್ಡಮಾರ್ಗಗಳ ರಾಜಕಾರಣ ಎಂದಿಗೂ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯವಿಲ್ಲ"


"ಉಚಿತ ಕೊಡುಗೆಗಳ ಸ್ವಾರ್ಥ ಘೋಷಣೆಗಳು ದೇಶವು ಸ್ವಾವಲಂಬಿಯಾಗುವುದನ್ನು ತಡೆಯುತ್ತದೆ, ಪ್ರಾಮಾಣಿಕ ತೆರಿಗೆದಾರರ ಮೇಲೆ ಹೊರೆ ಹೆಚ್ಚಿಸುತ್ತದೆ, ಹೊಸ ತಂತ್ರಜ್ಞಾನಗಳಲ್ಲಿ ಹೂಡಿಕೆಯನ್ನು ತಡೆಯುತ್ತದೆ"


"ಮುಂದಿನ ಕೆಲವು ವರ್ಷಗಳಲ್ಲಿ, ದೇಶದ ಶೇಕಡ 75ಕ್ಕಿಂತ ಹೆಚ್ಚಿನ ಕುಟುಂಬಗಳು ಪೈಪ್ ಲೈನ್ ಅನಿಲ ಪಡೆಯಲಿವೆ"

Posted On: 10 AUG 2022 6:20PM by PIB Bengaluru

ವಿಶ್ವ ಜೈವಿಕ ಇಂಧನ ದಿನದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರ್ಯಾಣದ ಪಾಣಿಪತ್‌ನಲ್ಲಿರುವ 2ನೇ ಪೀಳಿಗೆಯ  (2G) ಎಥೆನಾಲ್ ಸ್ಥಾವರವನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಹರಿಯಾಣದ ರಾಜ್ಯಪಾಲ ಶ್ರೀ ಬಂಡಾರು ದತ್ತಾತ್ರೇಯ, ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್, ಶ್ರೀ ಹರ್ದೀಪ್ ಸಿಂಗ್ ಪುರಿ, ಶ್ರೀ ರಾಮೇಶ್ವರ್ ತೇಲಿ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಜೈವಿಕ ಇಂಧನ ದಿನದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಜನತೆಗೆ ಶುಭಾಶಯ ಕೋರಿದರು. ಎಥೆನಾಲ್ ಸ್ಥಾವರ ಇದು ಕೇವಲ ಆರಂಭ ಎಂದು ಹೆಸರಿಸಿದ ಅವರು, ಈ ಘಟಕವು ದೆಹಲಿ, ಹರಿಯಾಣ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶಗಳಲ್ಲಿ (ಎನ್‌ಸಿಆರ್‌) ಮಾಲಿನ್ಯ ಕಡಿಮೆ ಮಾಡಲಿದೆ ಎಂದು ಹೇಳಿದರು. ಕಾಮನ್ ವೆಲ್ತ್ ಕ್ರೀಡಾಕೂಟ – 2022ರಲ್ಲಿ ಹರಿಯಾಣದ ಹೆಣ್ಣು ಮತ್ತು ಗಂಡು ಮಕ್ಕಳು ತೋರಿದ ಅದ್ಭುತ ಪ್ರದರ್ಶನಕ್ಕಾಗಿ ಅವರು ಹರಿಯಾಣ ರಾಜ್ಯವನ್ನು ಅಭಿನಂದಿಸಿದರು.
ಪ್ರಕೃತಿ ಆರಾಧಿಸುವ ನಮ್ಮಂತಹ ದೇಶದಲ್ಲಿ ಜೈವಿಕ ಇಂಧನವು ಪ್ರಕೃತಿ ರಕ್ಷಿಸುವ ಪರ್ಯಾಯ ಇಂಧನ ಮೂಲವಾಗಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ರೈತ ಸಹೋದರ ಸಹೋದರಿಯರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಮಗೆ ಜೈವಿಕ ಇಂಧನ ಎಂದರೆ ಹಸಿರು ಇಂಧನ, ಪರಿಸರ ಉಳಿಸುವ ಇಂಧನ. ಈ ಆಧುನಿಕ ಸ್ಥಾವರ ಸ್ಥಾಪನೆಯೊಂದಿಗೆ, ಅಕ್ಕಿ ಮತ್ತು ಗೋಧಿಯನ್ನು ಹೇರಳವಾಗಿ ಬೆಳೆಯುವ ಹರಿಯಾಣದ ರೈತರು ಬೆಳೆಯ ಅವಶೇಷವನ್ನು(ಭತ್ತ ಮತ್ತು ಗೋಧಿಯ ಹುಲ್ಲು) ಬಳಸುವ ಮತ್ತೊಂದು ಲಾಭದಾಯಕ ಮಾರ್ಗವನ್ನು ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಪಾಣಿಪತ್‌ನ ಜೈವಿಕ ಇಂಧನ ಸ್ಥಾವರದಿಂದ ಪೈರಿನ ಕೂಳೆಯನ್ನು ಸುಡದೆ ಹೊರತೆಗೆದು ಇಂಧನ ಉತ್ಪಾದನೆಗೆ ಬಳಸಲು ಸಾಧ್ಯವಾಗುತ್ತದೆ. ಇದು ಅನೇಕ ಪ್ರಯೋಜನಗಳಿಗೆ ಕಾರಣವಾಗುತ್ತದೆ ಎಂದು ಪ್ರಧಾನಿ ತಿಳಿಸಿದರು. ಮೊದಲ ಪ್ರಯೋಜನವೆಂದರೆ ಕೂಳೆ ಸುಡುವುದರಿಂದ  ಭೂಮಿ ತಾಯಿಗೆ ಎದುರಾಗುವ ಉರಿಯ ನೋವಿನಿಂದ ಮುಕ್ತಗೊಳಿಸುವುದು. ಎರಡನೇ ಪ್ರಯೋಜನವೆಂದರೆ, ಹುಲ್ಲು ಕತ್ತರಿಸಲು ಮತ್ತು ಅದರ ವಿಲೇವಾರಿಗೆ ಹೊಸ ವ್ಯವಸ್ಥೆಗಳು, ಸಾರಿಗೆಗೆ ಹೊಸ ಸೌಲಭ್ಯಗಳು. ಹೊಸ ಜೈವಿಕ ಇಂಧನ ಸ್ಥಾವರವು ಎಲ್ಲಾ ಹಳ್ಳಿಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಮೂರನೆಯ ಅನುಕೂಲವೆಂದರೆ ರೈತರಿಗೆ ಹೊರೆಯಾಗಿರುವ ಮತ್ತು ಕಳವಳಕ್ಕೆ ಕಾರಣವಾದ ಕಸ ಕಡ್ಡಿ ಕೂಳೆಗಳು ಅವರಿಗೆ ಹೆಚ್ಚುವರಿ ಆದಾಯದ ಮೂಲವಾಗಿ ಪರಿಣಮಿಸುತ್ತವೆ. ನಾಲ್ಕನೆಯ ಅನುಕೂಲವೆಂದರೆ ಮಾಲಿನ್ಯ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆಯಲ್ಲಿ ರೈತರ ಕೊಡುಗೆ ಮತ್ತಷ್ಟು ಹೆಚ್ಚಲಿದೆ. ಐದನೇ ಪ್ರಯೋಜನವೆಂದರೆ ದೇಶವು ಪರ್ಯಾಯ ಇಂಧನವನ್ನು ಸಹ ಪಡೆಯುತ್ತದೆ. ದೇಶದ ವಿವಿಧ ಪ್ರದೇಶಗಳಿಂದ ಇಂತಹ ಪೈರಿನ ಬೇರು ಹಾಗೂ ಹುಲ್ಲು ಬರುತ್ತಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.
ರಾಜಕೀಯ ಸ್ವಾರ್ಥಕ್ಕಾಗಿ ಅಡ್ಡಮಾರ್ಗಗಳನ್ನು ಅಳವಡಿಸಿಕೊಂಡು ಸಮಸ್ಯೆಗಳನ್ನು ತಪ್ಪಿಸುವ ಪ್ರವೃತ್ತಿ ಹೊಂದಿರುವ ಜನರು ಎಂದಿಗೂ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಅಡ್ಡಮಾರ್ಗಗಳನ್ನು ಅಳವಡಿಸಿಕೊಂಡವರು ಸ್ವಲ್ಪ ಸಮಯದವರೆಗೆ ಚಪ್ಪಾಳೆ ಗಿಟ್ಟಿಸಬಹುದು ಮತ್ತು ರಾಜಕೀಯ ಲಾಭ ಪಡೆಯಬಹುದು. ಆದರೆ ಅದು ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಅಡ್ಡ ಮಾರ್ಗ ಅಥವಾ ಶಾರ್ಟ್-ಕಟ್ ಅಳವಡಿಸಿಕೊಳ್ಳುವುದು ಖಂಡಿತವಾಗಿಯೂ ಶಾರ್ಟ್-ಸರ್ಕ್ಯೂಟ್|ಗೆ ಕಾರಣವಾಗುತ್ತದೆ. ಶಾರ್ಟ್‌ಕಟ್‌ಗಳನ್ನು ಅನುಸರಿಸುವ ಬದಲು, ನಮ್ಮ ಸರ್ಕಾರವು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ತೊಡಗಿಸಿಕೊಂಡಿದೆ. ಹಲವು ವರ್ಷಗಳಿಂದ ವಿವಿಧ ಬೆಳೆಗಳ ಕೂಳೆ ಸುಡುತ್ತಿರುವ ಸಮಸ್ಯೆಗಳ ಬಗ್ಗೆ ಬಹಳಷ್ಟು ಕೇಳಿದ್ದೇವೆ. ಆದರೆ ಶಾರ್ಟ್ ಕಟ್ ಮನಸ್ಥಿತಿ ಇರುವವರು ಇದನ್ನು ಪರಿಹರಿಸಲು ಸಾಧ್ಯವಿಲ್ಲ ಎಂದರು.
ಸಮಸ್ಯೆಗಳ ಸಮಗ್ರ ರೀತಿಯಲ್ಲಿ ಪರಿಹರಿಸುವ ಗುರಿ ಹೊಂದಿರುವ ನಾನಾ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ‘ಪರಾಲಿ’(ಭತ್ತ ಮತ್ತು ಗೋಧಿಯ ಹುಲ್ಲು ಮತ್ತು ಬೇರು ಕೂಳೆ ಕಡ್ಡಿ ಇತ್ಯಾದಿಗಳನ್ನು ಯಂತ್ರಗಳಿಂದ ತೆಗೆಯಲು)ಗಾಗಿ ರೈತ ಉತ್ಪಾದಕ ಸಂಸ್ಥೆಗಳಿಗೆ (ಎಫ್‌ಪಿಒ) ಆರ್ಥಿಕ ನೆರವು ನೀಡಲಾಗಿದ್ದು, ಬೆಳೆ ಅವಶೇಷಗಳನ್ನು ಕೀಳುವ ಆಧುನಿಕ ಯಂತ್ರೋಪಕರಣಗಳ ಮೇಲೆ ಶೇಕಡ 80ರಷ್ಟು ಸಹಾಯಧನ ನೀಡಲಾಗಿದೆ. ಯಂತ್ರಗಳ ಸಹಾಯದಿಂದ ಭೂಮಿಯಿಂದ ಹೊರತೆಗೆದ ಈ ಆಧುನಿಕ ಸಸ್ಯವು ಬೆಂಕಿಯಿಂದ ಸುಡುವ  ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ಸಹಾಯ ಮಾಡುತ್ತಿದೆ. "ಪರಾಲಿ ದಹನದಿಂದ ಕೆಟ್ಟ ಹೆಸರು ಪಡೆದ ರೈತರು ಈಗ ಜೈವಿಕ ಇಂಧನ ಉತ್ಪಾದನೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಿದ ಹೆಮ್ಮೆ ಅನುಭವಿಸಲಿದ್ದಾರೆ". ಪ್ರಧಾನ ಮಂತ್ರಿ ಅವರು ಗೋಬರ್ಧನ್ ಯೋಜನೆಯನ್ನು ರೈತರಿಗೆ ಪರ್ಯಾಯ ಆದಾಯದ ಮಾರ್ಗವೆಂದು ಉಲ್ಲೇಖಿಸಿದರು.

ದೇಶದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವುದನ್ನು ಮುಂದುವರಿಸಲಾಗುತ್ತಿದೆ ಎಂದ ಪ್ರಧಾನಮಂತ್ರಿ ಅವರು, ಹೊಸ ರಸಗೊಬ್ಬರ ಸಸ್ಯಗಳು, ನ್ಯಾನೊ ಗೊಬ್ಬರಗಳು, ಖಾದ್ಯ ತೈಲಕ್ಕಾಗಿ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ ಎಂದರು.
ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣ ಮಾಡಿದ್ದರಿಂದ ಕಳೆದ 7-8 ವರ್ಷಗಳಲ್ಲಿ ದೇಶದ ಸುಮಾರು 50 ಸಾವಿರ ಕೋಟಿ ರೂಪಾಯಿ ಹಣ ವಿದೇಶಕ್ಕೆ ಹೋಗದಂತೆ ಉಳಿತಾಯವಾಗಿದೆ ಎಂದು ಪ್ರಧಾನಿ ಗಮನ ಸೆಳೆದರು. ಎಥೆನಾಲ್ ಮಿಶ್ರಣದಿಂದಾಗಿ ನಮ್ಮ ದೇಶದ ರೈತರಿಗೆ ಅದೇ ಹಣ ಹೋಗಿದೆ. 8 ವರ್ಷಗಳ ಹಿಂದೆ ದೇಶದಲ್ಲಿ ಕೇವಲ 40 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲಾಗುತ್ತಿತ್ತು; ಈಗ ಈ ಉತ್ಪಾದನೆಯು ಸುಮಾರು 400 ಕೋಟಿ ಲೀಟರ್ ಗೆ ಹೆಚ್ಚಾಗಿದೆ ಎಂದರು.

2014ರ ವರೆಗೆ ದೇಶದಲ್ಲಿ ಕೇವಲ 14 ಕೋಟಿ ಎಲ್‌ಪಿಜಿ ಗ್ಯಾಸ್ ಸಂಪರ್ಕಗಳಿದ್ದವು. ದೇಶದ ಅರ್ಧದಷ್ಟು ಜನಸಂಖ್ಯೆ, ತಾಯಂದಿರು ಮತ್ತು ಸಹೋದರಿಯರು ಅಡುಗೆ ಮನೆಯ ಹೊಗೆ ಕುಡಿಯುತ್ತಿದ್ದರು.  ಸಹೋದರಿಯರು ಮತ್ತು ಹೆಣ್ಣುಮಕ್ಕಳ ಅನಾರೋಗ್ಯ ಮತ್ತು ಅನನುಕೂಲತೆಗಳು ಮತ್ತು ಹಾನಿಗಳ ಬಗ್ಗೆ ಮೊದಲು ಕಾಳಜಿ ವಹಿಸಲಿಲ್ಲ. ಉಜ್ವಲ ಯೋಜನೆಯಿಂದ ಬಡ ಮಹಿಳೆಯರಿಗೆ 9 ಕೋಟಿಗೂ ಹೆಚ್ಚು ಅನಿಲ ಸಂಪರ್ಕಗಳನ್ನು ತಲುಪಿಸಲಾಗಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಈಗ ನಾವು ದೇಶದಲ್ಲಿ 100% ಎಲ್ಪಿಜಿ ವ್ಯಾಪ್ತಿ ತಲುಪಿದ್ದೇವೆ. ಇಂದು ದೇಶದಲ್ಲಿ ಅನಿಲ ಸಂಪರ್ಕ 14 ಕೋಟಿಯಿಂದ ಸುಮಾರು 31 ಕೋಟಿಗೆ ಹೆಚ್ಚಳವಾಗಿದೆ ಎಂದರು.
8 ವರ್ಷಗಳ ಹಿಂದೆ ಇದ್ದ ಕೇವಲ 800 ಸಿಎನ್‌ಜಿ ಸ್ಟೇಷನ್‌ಗಳ ಸಂಖ್ಯೆ ಈಗ  4.5 ಸಾವಿರಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಏರಿಕೆ ಆಗಿವೆ. ಒಂದು ಕೋಟಿಗೂ ಹೆಚ್ಚು ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ ತಲುಪುತ್ತಿದೆ. "ಇಂದು, ನಾವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸುತ್ತಿರುವಾಗ, ಮುಂದಿನ ಕೆಲವು ವರ್ಷಗಳಲ್ಲಿ, ದೇಶದ 75 ಪ್ರತಿಶತಕ್ಕೂ ಹೆಚ್ಚು ಕುಟುಂಬಗಳು ಪೈಪ್ಡ್ ಗ್ಯಾಸ್ ಪಡೆಯುವ ಗುರಿಯೊಂದಿಗೆ ದೇಶವು ಕೆಲಸ ಮಾಡುತ್ತಿದೆ" ಎಂದು ಪ್ರಧಾನಿ ಹೇಳಿದರು.
ರಾಜಕಾರಣದಲ್ಲಿ ಸ್ವಾರ್ಥವಿದ್ದರೆ ಯಾರು ಬೇಕಾದರೂ ಉಚಿತವಾಗಿ ಪೆಟ್ರೋಲ್, ಡೀಸೆಲ್ ನೀಡುವುದಾಗಿ ಘೋಷಿಸಬಹುದು. ಇಂತಹ ಕ್ರಮಗಳು ನಮ್ಮ ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ, ದೇಶವು ಸ್ವಾವಲಂಬಿಯಾಗುವುದನ್ನು ತಡೆಯುತ್ತದೆ. ಇಂತಹ ಸ್ವಾರ್ಥ ನೀತಿಗಳಿಂದಾಗಿ ದೇಶದ ಪ್ರಾಮಾಣಿಕ ತೆರಿಗೆದಾರರ ಮೇಲಿನ ಹೊರೆಯೂ ಹೆಚ್ಚಾಗಲಿದೆ ಎಂದು ಪ್ರಧಾನಿ ಟೀಕಿಸಿದರು. ದೇಶದ ಮುಂದಿರುವ ಸವಾಲುಗಳನ್ನು ಎದುರಿಸಲು, ಅದಕ್ಕೆ ಸ್ಪಷ್ಟ ಉದ್ದೇಶಗಳು ಮತ್ತು ಬದ್ಧತೆಯ ಅಗತ್ಯವಿದೆ. ಇದಕ್ಕೆ ಕಠಿಣ ಪರಿಶ್ರಮ, ನೀತಿ ಮತ್ತು ದೊಡ್ಡ ಹೂಡಿಕೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಸರ್ಕಾರದ ಬಳಿ ಹಣವಿಲ್ಲದಿದ್ದರೆ ಎಥೆನಾಲ್, ಬಯೋಗ್ಯಾಸ್ ಮತ್ತು ಸೋಲಾರ್ ಸ್ಥಾವರಗಳು ಸಹ ಮುಚ್ಚುತ್ತವೆ. “ನಾವು ಅಲ್ಲಿಲ್ಲದಿದ್ದರೂ, ಈ ರಾಷ್ಟ್ರವು ಯಾವಾಗಲೂ ಇರುತ್ತದೆ, ಅದರಲ್ಲಿ ವಾಸಿಸುವ ಮಕ್ಕಳು ಯಾವಾಗಲೂ ಇರುತ್ತಾರೆ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರೂ ಚಿರಂತನ ಚೇತನದೊಂದಿಗೆ ಕೆಲಸ ಮಾಡಿದ್ದಾರೆ.... ಒಂದು ದೇಶವಾಗಿ ನಾವು ಇಂತಹ ಪ್ರವೃತ್ತಿಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಸಂಕಲ್ಪ ತೊಡಬೇಕಾಗಿದೆ. ಇದು ದೇಶದ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ  ಒತ್ತಿ ಹೇಳಿದರು.
ಅಮೃತ ಮಹೋತ್ಸವ ಸಂದರ್ಭದಲ್ಲಿ ಇಡೀ ದೇಶವನ್ನು ತ್ರಿವರ್ಣ ಧ್ವಜದ ಬಣ್ಣದಲ್ಲಿ ಚಿತ್ರಿಸಿದಾಗ, ಒಂದು ಘಟನೆಯ ಬಗ್ಗೆ ದೇಶದ ಗಮನ ಸೆಳೆಯಲು ನಾನು ಬಯಸುತ್ತೇನೆ.  ನಮ್ಮ ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸುವ, ಈ ಪವಿತ್ರ ಸಂದರ್ಭದಲ್ಲಿ ಮಾನಹಾನಿ ಮಾಡುವ ಪ್ರಯತ್ನ ನಡೆದಿದೆ. ಅಂಥವರ ಮನಸ್ಥಿತಿ ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ನಮ್ಮ ದೇಶದಲ್ಲೂ ಕೆಲವರು ನಕಾರಾತ್ಮಕತೆಯ ಸುಳಿಯಲ್ಲಿ ಸಿಲುಕಿ ಹತಾಶೆಯಲ್ಲಿ ಮುಳುಗಿದ್ದಾರೆ ಎಂದು ಪ್ರಧಾನಿ ವಾಗ್ದಾಳಿ ನಡೆಸಿದರು. ಸರ್ಕಾರದ ವಿರುದ್ಧ ಸುಳ್ಳು ಹೇಳಿದರೂ ಸಾರ್ವಜನಿಕರು ಅಂಥವರನ್ನು ನಂಬಲು ಸಿದ್ಧರಿಲ್ಲ. ಅಂತಹ ಹತಾಶೆಯಲ್ಲಿ, ಈ ಜನರು ಮಾಟಮಂತ್ರದ ಕಡೆಗೆ ತಿರುಗುತ್ತಿರುವುದು ಕಂಡುಬರುತ್ತಿದೆ. ಕಪ್ಪು ಮಾಂತ್ರಿಕ ಮನಸ್ಥಿತಿಯನ್ನು ಹರಡುವ ಪ್ರಯತ್ನ ನಡೆದಾಗ ಆಗಸ್ಟ್ 5ರ ಘಟನೆಗಳನ್ನು ಪ್ರಧಾನ ಮಂತ್ರಿ ಎತ್ತಿ ತೋರಿಸಿದರು. ಕಪ್ಪು ಬಟ್ಟೆಯನ್ನು ಧರಿಸುವುದರಿಂದ ತಮ್ಮ ಹತಾಶೆಯ ಅವಧಿ ಕೊನೆಗೊಳ್ಳುತ್ತದೆ ಎಂದು ಭಾವಿಸುವವರು ಕಪ್ಪು ಮಾಂತ್ರಿಕತೆ ಮತ್ತು ಮೂಢನಂಬಿಕೆ ಬಿಡದಿದ್ದರೆ ಸಾರ್ವಜನಿಕರ ನಂಬಿಕೆಯನ್ನು ಎಂದಿಗೂ ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡುವ ಮೂಲಕ ಪ್ರಧಾನ ಮಂತ್ರಿ ತಮ್ಮ ಮಾತುಗಳನ್ನು ಮುಗಿಸಿದರು.

ಹಿನ್ನೆಲೆ

ರಾಷ್ಟ್ರಕ್ಕೆ ಜೈವಿಕ ಇಂಧನ ಸ್ಥಾವರ ಸಮರ್ಪಣೆಯು ದೇಶದಲ್ಲಿ ಜೈವಿಕ ಇಂಧನಗಳ ಉತ್ಪಾದನೆ ಮತ್ತು ಬಳಕೆ ಹೆಚ್ಚಿಸಲು ಹಲವು ಸರ್ಕಾರವು ವರ್ಷಗಳಿಂದ ತೆಗೆದುಕೊಂಡ ಕ್ರಮಗಳ ದೀರ್ಘ ಸರಣಿಯ ಭಾಗವಾಗಿದೆ. ಇಂಧನ ಕ್ಷೇತ್ರವನ್ನು ಹೆಚ್ಚು ಕೈಗೆಟುಕುವ, ಲಭ್ಯವಾಗಬಹುದಾದ, ದಕ್ಷತೆಯ ಮತ್ತು ಸಮರ್ಥನೀಯವಾಗಿ ಸುಸ್ಥಿರವಾಗಿ ಪರಿವರ್ತಿಸುವ ಪ್ರಧಾನ ಮಂತ್ರಿ ಅವರ ನಿರಂತರ ಪ್ರಯತ್ನಕ್ಕೆ ಇದು ಅನುಗುಣವಾಗಿದೆ.
ಭಾರತೀಯ ತೈಲ ನಿಗಮ ನಿಯಮಿತವು ಅಂದಾಜು 900 ಕೋಟಿ ರೂ. ವೆಚ್ಚದಲ್ಲಿ 2ಜಿ ಎಥೆನಾಲ್ ಸ್ಥಾವರವನ್ನು ನಿರ್ಮಿಸಿದೆ. ಇದು ಪಾಣಿಪತ್ ರಿಫೈನರಿಗೆ ಸಮೀಪದಲ್ಲಿದೆ. ಅತ್ಯಾಧುನಿಕ ಸ್ವದೇಶಿ ತಂತ್ರಜ್ಞಾನದ ಆಧಾರದ ಮೇಲೆ, ಯೋಜನೆಯು ವಾರ್ಷಿಕವಾಗಿ ಸುಮಾರು 3 ಕೋಟಿ ಲೀಟರ್ ಎಥೆನಾಲ್ ಉತ್ಪಾದಿಸಲು ವಾರ್ಷಿಕ ಸುಮಾರು 2 ಲಕ್ಷ ಟನ್ ಭತ್ತದ ಹುಲ್ಲು (ಪರಾಲಿ) ಬಳಸುವ ಮೂಲಕ ಭಾರತದ ತ್ಯಾಜ್ಯದಿಂದ ಸಂಪತ್ತು ಗಳಿಸುವ ಪ್ರಯತ್ನಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ.
ಕೃಷಿ ಬೆಳೆಯ ಅವಶೇಷಗಳ ಅಂತಿಮ ಬಳಕೆಯು ರೈತರನ್ನು ಸಬಲಗೊಳಿಸುತ್ತದೆ ಮತ್ತು ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಒದಗಿಸುತ್ತದೆ. ಯೋಜನೆಯು ಸ್ಥಾವರ ಕಾರ್ಯಾಚರಣೆಯಲ್ಲಿ ತೊಡಗಿರುವ ಜನರಿಗೆ ನೇರ ಉದ್ಯೋಗ ಒದಗಿಸುತ್ತದೆ ಮತ್ತು ಭತ್ತದ ಹುಲ್ಲು ಕತ್ತರಿಸುವುದು, ನಿರ್ವಹಣೆ, ಸಂಗ್ರಹಣೆ ಇತ್ಯಾದಿ ಪೂರೈಕೆ ಸರಪಳಿಯಲ್ಲಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ.
ಯೋಜನೆಯು ಭತ್ತದ ಒಣಹುಲ್ಲು (ಪರಾಲಿ) ಸುಡುವುದನ್ನು ಕಡಿಮೆ ಮಾಡುವ ಮೂಲಕ, ವಾರ್ಷಿಕವಾಗಿ ಸುಮಾರು 3 ಲಕ್ಷ ಟನ್‌ ಕಾರ್ಬನ್ ಡೈಆಕ್ಸೈಡ್ ಗೆ ಸಮಾನವಾದ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ದೇಶದ ರಸ್ತೆಗಳಲ್ಲಿ ವಾರ್ಷಿಕ ಸುಮಾರು 63,000 ಕಾರುಗಳಿಗೆ ಪರ್ಯಾಯ ಇಂಧನ ಒದಗಿಸುತ್ತದೆ.

 

 

*********



(Release ID: 1850802) Visitor Counter : 191