ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಿ.ಡಬ್ಲ್ಯೂ.ಜಿ -2022 ರಲ್ಲಿ ಕಂಚಿನ ಪದಕ ಗೆದ್ದಿರುವ ಶ್ರೀಕಾಂತ್ ಕಿಡಂಬಿ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಇದು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಅವರ ನಾಲ್ಕನೇ ಪದಕ. ಅವರ ಕೌಶಲ್ಯ ಮತ್ತು ಸ್ಥಿರತೆಯನ್ನು ಇದು ತೋರಿಸುತ್ತದೆ : ಪ್ರಧಾನಮಂತ್ರಿ

Posted On: 08 AUG 2022 8:25AM by PIB Bengaluru

ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಸಿ.ಡಬ್ಲ್ಯೂ.ಜಿ 2022 ಕ್ರೀಡಾಕೂಟದ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದಿರುವ ಶ್ರೀಕಾಂತ್ ಕಿಡಂಬಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ಸಿ.ಡಬ್ಲ್ಯೂ.ಜಿ ಯಲ್ಲಿ ಶ್ರೀಕಾಂತ್ ಕಿಡಂಬಿ ನಾಲ್ಕನೇ ಪದಕ ಗೆದ್ದಿರುವ ಬಗ್ಗೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

 

ಈ ಕುರಿತು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

 

“@ಶ್ರೀಕಿಡಂಬಿ ಭಾರತೀಯ ಬ್ಯಾಡ್ಮಿಂಟನ್ ನ ದಿಗ್ಗಜರಲ್ಲಿ ಒಬ್ಬರಾಗಿದ್ದು, ಸಿ.ಡಬ್ಲ್ಯೂ.ಜಿಯ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದು ಸಿ.ಡಬ್ಲ್ಯೂ.ಜಿ ಕ್ರೀಡಾಕೂಟದಲ್ಲಿ ಅವರ ನಾಲ್ಕನೇ ಪದಕವಾಗಿದ್ದು, ಅವರ ಕೌಶಲ್ಯ ಮತ್ತು ಸ್ಥಿರತೆಯನ್ನು ಇದು ತೋರಿಸುತ್ತದೆ. ಅವರಿಗೆ ಶುಭವಾಗಲಿ. ಕಿಡಂಬಿ ಶ್ರೀಕಾಂತ್ ಉದಯೋನ್ಮುಖ ಕ್ರೀಡಾಪಟುಗಳಿಗೆ ಸ್ಪೂರ್ತಿ ನೀಡಲಿ ಹಾಗೂ ಭಾರತವನ್ನು ಇನ್ನಷ್ಟು ಹೆಮ್ಮೆಪಡುವಂತೆ ಮಾಡಲಿ. #ಚೀಯರ್ ಫಾರ್ ಇಂಡಿಯಾ” ಎಂದು ಹೇಳಿದ್ದಾರೆ.

*******


(Release ID: 1850056) Visitor Counter : 121