ಪ್ರಧಾನ ಮಂತ್ರಿಯವರ ಕಛೇರಿ

ಬಿಹಾರ ವಿಧಾನಸಭೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ


ಈ ವಿಧಾನ ಸಭಾ ಕಟ್ಟಡದಲ್ಲಿ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ"

ಸಾಮಾಜಿಕ ಜೀವನಕ್ಕೆ ಪ್ರಜಾಪ್ರಭುತ್ವದಲ್ಲಿ ಸಮಾನ ಪಾಲ್ಗೊಳ್ಳುವಿಕೆ ಮತ್ತು ಸಮಾನ ಹಕ್ಕುಗಳನ್ನು ಹೇಗೆ ಅನುಸರಿಸಲಾಗುತ್ತದೆ ಎಂಬುದಕ್ಕೆ ಈ ವಿಧಾನಸಭೆ ಒಂದು ಉದಾಹರಣೆಯಾಗಿದೆ"

ಭಾರತದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯು ಈ ರಾಷ್ಟ್ರ ಮತ್ತು ನಮ್ಮ ಸಂಸ್ಕೃತಿಯಷ್ಟೇ ಪ್ರಾಚೀನವಾಗಿದೆ".

ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ತನ್ನ ಬದ್ಧತೆಯಲ್ಲಿ ಬಿಹಾರವು ಸದಾ ಸ್ಥಿರವಾಗಿದೆ"

ಬಿಹಾರವು ಹೆಚ್ಚು ಸಮೃದ್ಧವಾದಷ್ಟೂ, ಭಾರತದ ಪ್ರಜಾಪ್ರಭುತ್ವವೂ ಹೆಚ್ಚು ಶಕ್ತಿಯುತವಾಗಿರುತ್ತದೆ

ಬಿಹಾರವು ಬಲಿಷ್ಠವಾದಷ್ಟೂ, ಭಾರತವು ಹೆಚ್ಚು ಸಮರ್ಥವಾಗಿರುತ್ತದೆ"

ಪಕ್ಷ-ರಾಜಕೀಯದ ಭೇದವನ್ನು ಮೀರಿ, ನಮ್ಮ ಧ್ವನಿ ದೇಶಕ್ಕಾಗಿ ಒಂದಾಗಿರಬೇಕು"

ನಮ್ಮ ದೇಶದ ಪ್ರಜಾತಾಂತ್ರಿಕ ಪ್ರಬುದ್ಧತೆಯನ್ನು ನಮ್ಮ ನಡವಳಿಕೆಯೇ ಪ್ರದರ್ಶಿಸುತ್ತದೆ"

"ಪ್ರಜಾಪ್ರಭುತ್ವದ ಪ್ರವಚನವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವಾಗ ದೇಶವು ನಿರಂತರವಾಗಿ ಹೊಸ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿದೆ"

"ಮುಂದಿನ 25 ವರ್ಷಗಳು ದೇಶಕ್ಕಾಗಿ ಕರ್ತವ್ಯದ ಹಾದಿಯಲ್ಲಿ ನಡೆಯುವ ವರ್ಷಗಳಾಗಿವೆ"

"ನಮ್ಮ ಕರ್ತವ್ಯಗಳಿಗಾಗಿ ನಾವು ಎಷ್ಟು ಹೆಚ್ಚು ಕೆಲಸ ಮಾಡುತ್ತೇವೆಯೋ, ನಮ್ಮ ಹಕ್ಕುಗಳು ಅಷ್ಟು ಬಲಗೊಳ್ಳುತ್ತವೆ. ನಮ್ಮ ಕರ್ತವ್ಯ ನಿಷ್ಠೆಯೇ ನಮ್ಮ ಹಕ್ಕುಗಳಿಗೆ ಖಾತ್ರಿಯಾಗಿದೆ”

Posted On: 12 JUL 2022 7:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಪಾಟ್ನಾದಲ್ಲಿ ನಡೆದ ಬಿಹಾರ ವಿಧಾನಸಭೆಯ ಶತಮಾನೋತ್ಸವ ಸಮಾರೋಪ ಸಮಾರಂಭವನ್ನುದ್ದೇಶಿಸಿ ಭಾಷಣ ಮಾಡಿದರು. ಬಿಹಾರ ವಿಧಾನಸಭೆಯ 100ನೇ ವರ್ಷದ ನೆನಪಿಗಾಗಿ ನಿರ್ಮಿಸಲಾಗಿರುವ ಶತಾಬ್ದಿ ಸ್ಮೃತಿ ಸ್ತಂಭವನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಅವರು ವಿಧಾನಸೌಧ ವಸ್ತುಸಂಗ್ರಹಾಲಯಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. ವಸ್ತು ಸಂಗ್ರಹಾಲಯದಲ್ಲಿರುವ ವಿವಿಧ ಗ್ಯಾಲರಿಗಳು ಬಿಹಾರದ ಪ್ರಜಾಪ್ರಭುತ್ವದ ಇತಿಹಾಸ ಮತ್ತು ಪ್ರಸ್ತುತ ನಾಗರಿಕ ರಚನೆಯ ವಿಕಸನವನ್ನು ಪ್ರದರ್ಶಿಸುತ್ತವೆ. ಇದು 250ಕ್ಕೂ ಹೆಚ್ಚು ಜನರ ಸಾಮರ್ಥ್ಯದ ಸಮ್ಮೇಳನ ಸಭಾಂಗಣವನ್ನು ಸಹ ಹೊಂದಿರುತ್ತದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿಧಾನಸಭೆಯ ಅತಿಥಿ ಗೃಹಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಬಿಹಾರದ ರಾಜ್ಯಪಾಲ ಶ್ರೀ ಫಗು ಚೌಹಾಣ್ ಮತ್ತು ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಬಿಹಾರವನ್ನು ಪ್ರೀತಿಸುವವರಿಗೆ ಬಿಹಾರವು ಅನೇಕ ಪಟ್ಟು ಪ್ರೀತಿಯನ್ನು ಮರಳಿ ನೀಡುತ್ತದೆ. ಇದು ಬಿಹಾರದ ಸ್ವಭಾವವಾಗಿದೆ ಎಂದು ಹೇಳಿದರು. "ಬಿಹಾರ ವಿಧಾನಸಭೆ ಸಂಕೀರ್ಣಕ್ಕೆ ಭೇಟಿ ನೀಡುತ್ತಿರುವ ದೇಶದ ಮೊದಲ ಪ್ರಧಾನಮಂತ್ರಿ ನಾನು ಎಂಬ ಸುಯೋಗವನ್ನು ಇಂದು ಪಡೆದಿದ್ದೇನೆ. ಈ ವಾತ್ಸಲ್ಯಕ್ಕಾಗಿ ನಾನು ಬಿಹಾರದ ಜನರಿಗೆ ನಮಿಸುತ್ತೇನೆ", ಎಂದು ಅವರು ಹೇಳಿದರು. ಶತಾಬ್ದಿ ಸ್ಮೃತಿ ಸ್ತಂಭವು ಬಿಹಾರದ ಅಸಂಖ್ಯಾತ ಆಕಾಂಕ್ಷೆಗಳಿಗೆ ಸ್ಫೂರ್ತಿ ನೀಡಲಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಬಿಹಾರ ವಿಧಾನಸಭೆಯ ಭವ್ಯ ಇತಿಹಾಸವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಇಲ್ಲಿನ ವಿಧಾನಸಭೆ ಕಟ್ಟಡದಲ್ಲಿ ಒಂದರ ಮೇಲೊಂದರಂತೆ ದೊಡ್ಡ ಮತ್ತು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದರು. ಸ್ವಾತಂತ್ರ್ಯ ಪೂರ್ವದಲ್ಲಿ ರಾಜ್ಯಪಾಲ ಸತ್ಯೇಂದ್ರ ಪ್ರಸನ್ನ ಸಿನ್ಹಾ ಅವರು ಈ ವಿಧಾನಸಭೆಯಿಂದ ಸ್ಥಳೀಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸುವಂತೆ ಮತ್ತು ಸ್ವದೇಶಿ ಚರಕವನ್ನು ತಮ್ಮದಾಗಿಸಿಕೊಳ್ಳುವಂತೆ ಮನವಿ ಮಾಡಿದ್ದರು ಎಂದರು. ಸ್ವಾತಂತ್ರ್ಯಾನಂತರ, ಜಮೀನ್ದಾರಿ ಪದ್ಧತಿ ನಿರ್ಮೂಲನಾ ಕಾಯ್ದೆಯನ್ನು ಈ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಈ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಿ, ನಿತೀಶ್ ಅವರ ಸರ್ಕಾರವು ಬಿಹಾರ ಪಂಚಾಯತ್ ರಾಜ್ ನಂತಹ ಕಾಯ್ದೆಯನ್ನು ಜಾರಿಗೆ ತಂದಿತು, ಇದು ಪಂಚಾಯತ್ ಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡಿದ ಮೊದಲ ರಾಜ್ಯವಾಗಿದೆ ಎಂದು ಅವರು ಸ್ಮರಿಸಿದರು. "ಪ್ರಜಾಪ್ರಭುತ್ವದಲ್ಲಿ ಸಾಮಾಜಿಕ ಜೀವನಕ್ಕೆ ಸಮಾನ ಪಾಲ್ಗೊಳ್ಳುವಿಕೆ ಮತ್ತು ಸಮಾನ ಹಕ್ಕುಗಳನ್ನು ಹೇಗೆ ಅನುಸರಿಸಲಾಗುತ್ತದೆ ಎಂಬುದಕ್ಕೆ ಈ ಸಭೆ ಒಂದು ಉದಾಹರಣೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತೀಯ ಪ್ರಜಾಪ್ರಭುತ್ವದ ಪ್ರಾಚೀನ ಬೇರುಗಳ ಬಗ್ಗೆ ಒತ್ತಿ ಹೇಳಿದ ಪ್ರಧಾನಮಂತ್ರಿಯವರು, "ವಿದೇಶಿ ಆಡಳಿತ ಮತ್ತು ವಿದೇಶಿ ಚಿಂತನೆಯಿಂದಾಗಿ ಭಾರತಕ್ಕೆ ಪ್ರಜಾಪ್ರಭುತ್ವ ದೊರೆತಿದೆ ಎಂದು ಹೇಳಲು ದಶಕಗಳಿಂದ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಯಾವುದೇ ವ್ಯಕ್ತಿಯು ಇದನ್ನು ಹೇಳುವಾಗ, ಆತ ಬಿಹಾರದ ಇತಿಹಾಸ ಮತ್ತು ಬಿಹಾರದ ಪರಂಪರೆಯನ್ನು ಮರೆಮಾಚಲು ಪ್ರಯತ್ನಿಸುತ್ತಾನೆ. ಪ್ರಪಂಚದ ಬಹುಪಾಲು ಭಾಗಗಳು ನಾಗರಿಕತೆ ಮತ್ತು ಸಂಸ್ಕೃತಿಯ ಕಡೆಗೆ ತಮ್ಮ ಮೊದಲ ಹೆಜ್ಜೆಗಳನ್ನು ಇಡುತ್ತಿದ್ದಾಗ, ವೈಶಾಲಿಯಲ್ಲಿ ಅತ್ಯಾಧುನಿಕ ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸುತ್ತಿತ್ತು. ವಿಶ್ವದ ಇತರ ಪ್ರದೇಶಗಳಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ತಿಳಿವಳಿಕೆ ಬೆಳೆಯಲು ಪ್ರಾರಂಭಿಸಿದಾಗ, ಲಿಚ್ಚವಿ ಮತ್ತು ವಜ್ಜಿಸಂಘ್ ನಂತಹ ಗಣರಾಜ್ಯಗಳು ಉತ್ತುಂಗದಲ್ಲಿದ್ದವು. "ಭಾರತದಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯು ಈ ರಾಷ್ಟ್ರವು ನಮ್ಮ ಸಂಸ್ಕೃತಿಯಷ್ಟೇ ಪ್ರಾಚೀನವಾಗಿದೆ. ಭಾರತವು ಪ್ರಜಾಪ್ರಭುತ್ವವನ್ನು ಸಮಾನತೆ ಮತ್ತು ಸಮಾನತೆಯ ಸಾಧನವೆಂದು ಪರಿಗಣಿಸಲಾಗುತ್ತದೆ. ಭಾರತವು ಸಹಬಾಳ್ವೆ ಮತ್ತು ಸಾಮರಸ್ಯದ ಕಲ್ಪನೆಯನ್ನು ನಂಬುತ್ತದೆ. ನಾವು ಸತ್ಯವನ್ನು ನಂಬುತ್ತೇವೆ, ನಾವು ಸಹಕಾರವನ್ನು ನಂಬುತ್ತೇವೆ, ಸಾಮರಸ್ಯದಲ್ಲಿ ನಂಬಿಕೆ ಇಟ್ಟಿದ್ದೇವೆ ಮತ್ತು ಸಮಾಜದ ಒಗ್ಗಟ್ಟಿನ ಶಕ್ತಿಯಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ", ಎಂದು ಪ್ರಧಾನಮಂತ್ರಿ ವಿವರಿಸಿದರು.

ವಿಶ್ವದಲ್ಲಿ ಪ್ರಜಾಪ್ರಭುತ್ವದ ತಾಯಿ ಭಾರತ ಎಂದು ಪ್ರಧಾನಮಂತ್ರಿಯವರು ಪುನರುಚ್ಚರಿಸಿದರು. ಭಾರತವು ಪ್ರಜಾಪ್ರಭುತ್ವದ ತಾಯಿ. ಬಿಹಾರದ ಭವ್ಯ ಪರಂಪರೆ ಮತ್ತು ಪಾಲಿಯಲ್ಲಿರುವ ಐತಿಹಾಸಿಕ ದಾಖಲೆಗಳು ಇದಕ್ಕೆ ಜೀವಂತ ಪುರಾವೆಗಳಾಗಿವೆ. ಬಿಹಾರದ ಈ ವೈಭವವನ್ನು ಯಾರೂ ಅಳಿಸಿಹಾಕಲು ಅಥವಾ ಮರೆಮಾಚಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು. "ಈ ಕಟ್ಟಡವು ಕಳೆದ ನೂರು ವರ್ಷಗಳಿಂದ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ, ಆದ್ದರಿಂದ ಇದು ನಮ್ಮ ಗೌರವಕ್ಕೆ ಅರ್ಹವಾಗಿದೆ. ಈ ಕಟ್ಟಡವು ಗುಲಾಮಗಿರಿಯ ಅವಧಿಯಲ್ಲೂ ಪ್ರಜಾಪ್ರಭುತ್ವದ ಮೌಲ್ಯವನ್ನು ಕಳೆದುಕೊಳ್ಳಲು ಅವಕಾಶ ನೀಡದ ಪ್ರಜ್ಞೆಯೊಂದಿಗೆ ಸಂಬಂಧ ಹೊಂದಿದೆ", ಎಂದು ಅವರು ಹೇಳಿದರು.

ಬ್ರಿಟಿಷರ ವಿರುದ್ಧ ಶ್ರೀ ಬಾಬು ಅವರು ಆಡಳಿತದಲ್ಲಿ ಸ್ವಾತಂತ್ರ್ಯದ ಪ್ರತಿಪಾದನೆಯನ್ನು ಪ್ರಧಾನಮಂತ್ರಿ ಸ್ಮರಿಸಿದರು. ಬಿಹಾರವು ಸದಾ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ರಕ್ಷಿಸುವ ತನ್ನ ಬದ್ಧತೆಯಲ್ಲಿ ಸ್ಥಿರವಾಗಿ ಉಳಿಯಿತು. ಡಾ. ರಾಜೇಂದ್ರ ಪ್ರಸಾದ್ ಅವರ ರೂಪದಲ್ಲಿ ಬಿಹಾರವು ಸ್ವತಂತ್ರ ಭಾರತದ ಮೊದಲ ರಾಷ್ಟ್ರಪತಿಯನ್ನು ನೀಡಿತು ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಲೋಕನಾಯಕ ಜಯಪ್ರಕಾಶ್, ಕರ್ಪೂರಿ ಠಾಕೂರ್ ಮತ್ತು ಬಾಬು ಜಗಜೀವನ್ ರಾಮ್ ಅವರಂತಹ ನಾಯಕರು ಈ ನೆಲದಿಂದ ಬಂದವರು. ದೇಶದಲ್ಲಿ ಸಂವಿಧಾನವನ್ನು ತುಳಿಯುವ ಪ್ರಯತ್ನ ನಡೆದಾಗಲೂ ಬಿಹಾರ ಮುನ್ನೆಲೆಗೆ ಬಂದು ಅದರ ವಿರುದ್ಧ ಪ್ರತಿಭಟನೆಯ ಕಹಳೆ ಮೊಳಗಿಸಿತು. "ಬಿಹಾರವು ಹೆಚ್ಚು ಸಮೃದ್ಧವಾದಷ್ಟೂ, ಭಾರತದ ಪ್ರಜಾಪ್ರಭುತ್ವವು ಹೆಚ್ಚು ಶಕ್ತಿಯುತವಾಗಿರುತ್ತದೆ. ಬಿಹಾರವು ಬಲವಾದಷ್ಟೂ, ಭಾರತವು ಹೆಚ್ಚು ಸಮರ್ಥವಾಗಿರುತ್ತದೆ", ಎಂದು ಪ್ರಧಾನಮಂತ್ರಿ ಗಮನಸೆಳೆದರು.

"ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಬಿಹಾರ ವಿಧಾನಸಭೆಯ 100 ವರ್ಷಗಳ ಈ ಐತಿಹಾಸಿಕ ಸಂದರ್ಭವು ನಮ್ಮೆಲ್ಲರಿಗೂ, ಪ್ರತಿಯೊಬ್ಬ ಸಾರ್ವಜನಿಕ ಪ್ರತಿನಿಧಿಗೆ ಆತ್ಮಾವಲೋಕನ ಮತ್ತು ಸ್ವಯಂ ವಿಶ್ಲೇಷಣೆಯ ಸಂದೇಶವನ್ನು ನೀಡುತ್ತದೆ. ನಾವು ನಮ್ಮ ಪ್ರಜಾಪ್ರಭುತ್ವವನ್ನು ಹೆಚ್ಚು ಬಲಪಡಿಸಿದಷ್ಟೂ, ನಮ್ಮ ಸ್ವಾತಂತ್ರ್ಯ ಮತ್ತು ನಮ್ಮ ಹಕ್ಕುಗಳಿಗಾಗಿ ನಾವು ಹೆಚ್ಚು ಶಕ್ತಿಯನ್ನು ಪಡೆಯುತ್ತೇವೆ" ಎಂದು ಅವರು ಹೇಳಿದರು.

21ನೇ ಶತಮಾನದ ಬದಲಾಗುತ್ತಿರುವ ಅಗತ್ಯಗಳು ಮತ್ತು ಸ್ವಾತಂತ್ರ್ಯದ 75ನೇ ವರ್ಷದಲ್ಲಿ ನವ ಭಾರತದ ಸಂಕಲ್ಪದ ಸಂದರ್ಭದಲ್ಲಿ, "ದೇಶದ ಸಂಸದರಾಗಿ, ರಾಜ್ಯದ ಶಾಸಕರಾಗಿ, ಪ್ರಜಾಪ್ರಭುತ್ವವು ಎದುರಿಸುತ್ತಿರುವ ಪ್ರತಿಯೊಂದು ಸವಾಲನ್ನು ನಾವು ಒಟ್ಟಾಗಿ ಮಣಿಸುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು. ಪಕ್ಷ-ರಾಜಕೀಯದ ಭೇದವನ್ನು ಮೀರಿ, ನಮ್ಮ ಧ್ವನಿ ದೇಶ ಮತ್ತು ಅದರ ಹಿತಾಸಕ್ತಿಗಾಗಿ ಒಂದಾಗಿರಬೇಕು" ಎಂದರು.

"ನಮ್ಮ ದೇಶದ ಪ್ರಜಾತಾಂತ್ರಿಕ ಪ್ರಬುದ್ಧತೆಯು ನಮ್ಮ ನಡವಳಿಕೆಯಿಂದ ಪ್ರದರ್ಶಿತವಾಗಿರುತ್ತದೆ" ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, "ಸದನಗಳು ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಕಾರಾತ್ಮಕ ಸಂವಾದದ ಕೇಂದ್ರವಾಗಲಿ" ಎಂದು ಒತ್ತಿ ಹೇಳಿದರು. ಸಂಸತ್ತಿನ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದ ಅವರು, "ಕಳೆದ ಕೆಲವು ವರ್ಷಗಳಲ್ಲಿ ಸಂಸತ್ತಿನಲ್ಲಿ ಸಂಸದರ ಹಾಜರಾತಿ ಮತ್ತು ಸಂಸತ್ತಿನ ಫಲಪ್ರದತೆಯಲ್ಲಿ ದಾಖಲೆಯ ಹೆಚ್ಚಳವಾಗಿದೆ. ಕಳೆದ ಬಜೆಟ್ ಅಧಿವೇಶನದಲ್ಲೂ ಲೋಕಸಭೆಯ ಉತ್ಪಾದಕತೆ ಶೇ.129ರಷ್ಟಿತ್ತು. ರಾಜ್ಯಸಭೆಯಲ್ಲೂ ಶೇ.99ರಷ್ಟು ಫಲಪ್ರದತೆ ದಾಖಲಾಗಿದೆ. ಅಂದರೆ, ದೇಶವು ನಿರಂತರವಾಗಿ ಹೊಸ ನಿರ್ಣಯಗಳ ಮೇಲೆ ಕೆಲಸ ಮಾಡುತ್ತಿದೆ, ಪ್ರಜಾಪ್ರಭುತ್ವದ ಚರ್ಚೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿದೆ." ಎಂದರು.

21ನೇ ಶತಮಾನವನ್ನು ಭಾರತದ ಶತಮಾನ ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, "ಭಾರತಕ್ಕೆ ಈ ಶತಮಾನವು ಕರ್ತವ್ಯಗಳ ಶತಮಾನವಾಗಿದೆ. ಮುಂದಿನ 25 ವರ್ಷಗಳಲ್ಲಿ ನಾವು ಈ ಶತಮಾನದಲ್ಲಿ ನವ ಭಾರತದ ಸುವರ್ಣ ಗುರಿಯನ್ನು ತಲುಪಬೇಕಾಗಿದೆ. ನಮ್ಮ ಕರ್ತವ್ಯಗಳು ನಮ್ಮನ್ನು ಈ ಗುರಿಗಳಿಗೆ ಕರೆದೊಯ್ಯುತ್ತವೆ. ಆದ್ದರಿಂದ, ಈ 25 ವರ್ಷಗಳು ದೇಶಕ್ಕಾಗಿ ಕರ್ತವ್ಯದ ಹಾದಿಯಲ್ಲಿ ನಡೆದಾಡುವ ವರ್ಷಗಳಾಗಿವೆ" ಎಂದು ಅವರು ಹೇಳಿದರು. "ನಾವು ನಮ್ಮ ಕರ್ತವ್ಯಗಳನ್ನು ನಮ್ಮ ಹಕ್ಕುಗಳಿಂದ ಪ್ರತ್ಯೇಕವೆಂದು ಪರಿಗಣಿಸಬಾರದು" ಎಂದು ಶ್ರೀ ಮೋದಿ ವಿವರಿಸಿದರು. ನಾವು ನಮ್ಮ ಕರ್ತವ್ಯಗಳಿಗಾಗಿ ಹೆಚ್ಚು ಹೆಚ್ಚು ಕೆಲಸ ಮಾಡಿದಷ್ಟೂ, ನಮ್ಮ ಹಕ್ಕುಗಳು ಬಲಗೊಳ್ಳುತ್ತವೆ. ಕರ್ತವ್ಯಕ್ಕೆ ನಮ್ಮ ನಿಷ್ಠೆ ನಮ್ಮ ಹಕ್ಕುಗಳ ಖಾತರಿಯಾಗುತ್ತದೆ." ಎಂದರು.

 

 

**********



(Release ID: 1841329) Visitor Counter : 189