ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವಾಮಿ ಆತ್ಮಸ್ಥಾನಂದ ಜನ್ಮ ಶತಮಾನೋತ್ಸವ ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ


ಸ್ವಾಮೀಜಿಯವರ ಉದ್ದೇಶಗಳನ್ನು ಜನತೆಗೆ ತಲುಪಿಸಲು ಛಾಯಾಚಿತ್ರಗಳನ್ನು ಒಳಗೊಂಡ ಜೀವನಚರಿತ್ರೆ ಮತ್ತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ


“ಸನ್ಯಾಸ ಎಂದರೆ ತಾನು ಎಂಬುದನ್ನು ಮೀರಿ ಬೆಳೆದು ಸಮಾಜದ ಏಳಿಗೆಗೆ ದುಡಿಯುವುದು ಮತ್ತು ಸಮಾಜಕ್ಕಾಗಿ ಬದುಕುವುದು ಎಂದರ್ಥ’’


“ಸ್ವಾಮಿ ವಿವೇಕಾನಂದ ಜೀ ಅವರು ಸನ್ಯಾಸತ್ವದ ಶ್ರೇಷ್ಠ ಪರಂಪರೆಗೆ ಆಧುನಿಕ ರೂಪ ನೀಡಿದರು’’


“ರಾಮಕೃಷ್ಣ ಮಿಷನ್ ನ ಆದರ್ಶಗಳೆಂದರೆ ಸಮರೋಪಾದಿಯಲ್ಲಿ ಕೆಲಸ ಮಾಡುವುದು, ಹೊಸ ಸಂಸ್ಥೆಗಳನ್ನು ಹುಟ್ಟುಹಾಕುವುದು ಮತ್ತು ಸಂಸ್ಥೆಗಳನ್ನು ಬಲವರ್ಧನೆಗೊಳಿಸುವುದು’’


“ಭಾರತದ ಸಂತರ ಪರಂಪರೆ ಸದಾ’ಏಕ್ ಭಾರತ್ –ಶ್ರೇಷ್ಠ ಭಾರತ್ ‘ ಪೋಷಿಸುತ್ತಿದೆ’’


“ರಾಮಕೃಷ್ಣ ಮಿಷನ್ ನ ಸಂತರು ದೇಶದಲ್ಲಿ ರಾಷ್ಟ್ರೀಯ ಏಕತೆಯ ನಿರ್ವಾಹಕರೆಂಬುದು
ಎಲ್ಲರಿಗೂ ತಿಳಿದಿದೆ’’


“ಸ್ವಾಮಿ ರಾಮಕೃಷ್ಣ ಪರಮಹಂಸರು, ಮಾತೆ ಕಾಳಿ ದೇವಿಯ ಸ್ಪಷ್ಟ ದೂರದೃಷ್ಟಿ ಹೊಂದಿದ ಅಂತಹ ಸಂತರಲ್ಲೊಬ್ಬರು’’


“ಡಿಜಿಟಲ್ ಪಾವತಿ ವಲಯದಲ್ಲಿ ಭಾರತ ಜಾಗತಿಕ ನಾಯಕನಾಗಿ ಉದಯವಾಗಿದೆ’’.

Posted On: 10 JUL 2022 11:27AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಸಂದೇಶದ ಮೂಲಕ ಸ್ವಾಮಿ ಆತ್ಮಸ್ಥಾನಂದರ ಜನ್ಮಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾಮಿ ಆತ್ಮಸ್ಥಾನಂದ ಜಿ ಅವರೊಂದಿಗೆ ತಾವು ಕಳೆದ ಸಮಯವನ್ನು ಸ್ಮರಿಸುವ ಮೂಲಕ ಪ್ರಧಾನಮಂತ್ರಿ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು “ಈ ಕಾರ್ಯಕ್ರಮವು ಅನೇಕ ಭಾವನೆಗಳು ಮತ್ತು ನೆನಪುಗಳಿಂದ ಕೂಡಿದೆ. ನನಗೆ ಅವರು ಸದಾ ಆಶೀರ್ವಾದ ನೀಡುತ್ತಿದ್ದರು, ಅವರೊಂದಿಗೆ ಕೆಲ ಸಮಯ ಕಳೆಯಲು ನನಗೆ ಅವಕಾಶ ದೊರೆತಿತ್ತು. ಕೊನೆಯ ಕ್ಷಣದವರೆಗೂ ಅವರೊಂದಿಗೆ ಸಂಪರ್ಕ ಹೊಂದಿದ್ದೇ ನನ್ನ ಸೌಭಾಗ್ಯ’’ ಎಂದರು.

ಸ್ವಾಮೀಜಿ ಅವರ ಧ್ಯೇಯೋದ್ದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಛಾಯಾಚಿತ್ರವನ್ನು ಒಳಗೊಂಡ ಜೀವನಚರಿತ್ರೆ ಮತ್ತು ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದ ಕುರಿತು ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಈ ಕಾರ್ಯಕ್ಕಾಗಿ ರಾಮಕೃಷ್ಣ ಮಿಷನ್ ಅಧ್ಯಕ್ಷ ಪೂಜ್ಯ ಸ್ವಾಮಿ ಸ್ಮರಣಾನಂದ ಜಿ ಮಹಾರಾಜ್ ಜಿ ಅವರನ್ನು ಶ್ರೀನರೇಂದ್ರ ಮೋದಿ ಅವರು ಹೃತ್ಪೂರ್ವಕವಾಗಿ ಅಭಿನಂದಿಸಿದರು.

ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಪೂಜ್ಯ ಸ್ವಾಮಿ ವಿಜ್ಞಾನಾನಂದ ಜಿ ಅವರಿಂದ ಸ್ವಾಮಿ ಆತ್ಮಸ್ಥಾನಾನಂದ ಜಿ ಅವರು ದೀಕ್ಷೆಯನ್ನು ಸ್ವೀಕರಿಸಿದ್ದರು ಎಂಬುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸ್ವಾಮಿ ರಾಮಕೃಷ್ಣ ಪರಮಹಂಸರ ಜಾಗೃತ ಸ್ಥಿತಿ ಮತ್ತು ಆಧ್ಯಾತ್ಮಿಕ ಶಕ್ತಿ ಅವರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಉಲ್ಲೇಖಿಸಿದರು. ದೇಶದಲ್ಲಿರುವ ತ್ಯಾಗದ ಶ್ರೇಷ್ಠ ಸಂಪ್ರದಾಯದ ಬಗ್ಗೆಯೂ ಶ್ರೀ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದರು. ವಾನಪ್ರಸ್ಥ ಆಶ್ರಮವೂ ಸನ್ಯಾಸದ ನಿಟ್ಟಿನಲ್ಲಿ ಒಂದು ಹೆಜ್ಜೆ ಎಂದರು. ‘ಸನ್ಯಾಸದ ಅರ್ಥ, ತನ್ನನ್ನು ಮೀರಿ ಬೆಳೆದು ಸಮಾಜಕ್ಕಾಗಿ ದುಡಿಯುವುದು, ಸಮಾಜಕ್ಕಾಗಿ ಬದುಕುವುದು ಎಂಬುದಾಗಿದೆ. ಸಮುದಾಯಕ್ಕಾಗಿ ಸ್ವಯಂ ವಿಸ್ತರಣೆ ಮಾಡಿಕೊಳ್ಳುವುದಾಗಿದೆ. ಸನ್ಯಾಸಿಗೆ, ಜನರ ಸೇವೆಯು ಭಗವಂತನ ಸೇವೆಯಾಗಿದೆ, ಜನರಲ್ಲಿ ಶಿವನನ್ನು ಕಾಣುವುದು ಪರಮೋಚ್ಛವಾಗಿದೆ’. ಸ್ವಾಮಿ ವಿವೇಕಾನಂದರು ಸನ್ಯಾಸಿಯ ಶ್ರೇಷ್ಠ ಸಂಪ್ರದಾಯವನ್ನು ಆಧುನಿಕ ವಿಧಾನದಲ್ಲಿ ರೂಪಿಸಿದ್ದಾರೆ ಎಂದು ಪ್ರಧಾನಿ ಉಲ್ಲೇಸಿದರು. ಸ್ವಾಮಿ ಆತ್ಮಸ್ಥಾನಾನಂದ ಜಿ ಕೂಡ ಈ ರೂಪವನ್ನು ಪುನರ್ ಪ್ರತಿಪಾದಿಸಿದರು ಮತ್ತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅದರಂತೆ ಜೀವನ ನಡೆಸಿದರು. ರಾಮಕೃಷ್ಣ ಮಿಷನ್ ಮತ್ತು ಬೇಲೂರು ಮಠದ ನಿರ್ದೇಶನದ ಮೇರೆಗೆ ಭಾರತದಲ್ಲಿ ಮಾತ್ರವಲ್ಲದೆ ನೇಪಾಳ ಮತ್ತು ಬಾಂಗ್ಲಾದೇಶದಲ್ಲಿಯೂ ನಡೆಸಲಾದ ಅದ್ಬುತ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಮುಖವಾಗಿ ಪ್ರಸ್ತಾಸಿದರು. ಗ್ರಾಮೀಣ ಪ್ರದೇಶದ ಜನರ ಕಲ್ಯಾಣಕ್ಕಾಗಿ ಸ್ವಾಮೀಜಿ ಮಾಡಿದ ಅವಿರತ ಕೆಲಸಗಳನ್ನು ಅವರು ಉಲ್ಲೇಖಿಸಿದರು. ಬಡವರಿಗೆ ಉದ್ಯೋಗ ಮತ್ತು ಜೀವನೋಪಾಯಕ್ಕೆ ನೆರವು ನೀಡಲು ಸ್ವಾಮಿಜಿ ಅವರು ಸ್ಥಾಪಿಸಿದ ಸಂಸ್ಥೆಗಳ ಬಗ್ಗೆಯೂ ಶ್ರೀ ನರೇಂದ್ರ ಮೋದಿ ಅವರು ಉಲ್ಲೇಖಿಸಿದರು.

ಸ್ವಾಮೀಜಿ ಅವರು ಬಡವರ ಸೇವೆ, ಜ್ಞಾನದ ಪ್ರಸಾರ ಮತ್ತು ಅದರ ಕೆಲಸವನೇ ಪೂಜೆ ಎಂದು ಪರಿಗಣಿಸಿದ್ದರೆಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಸಮರೋಪಾದಿಯಲ್ಲಿ ಕೆಲಸ ಮಾಡುವುದು, ಹೊಸ ಸಂಸ್ಥೆಗಳನ್ನು ಸ್ಥಾಪಿಸುವುದು ಮತ್ತು ಸಂಸ್ಥೆಗಳನ್ನು ಬಲವರ್ಧನೆಗೊಳಿಸುವುದು ರಾಮಕೃಷ್ಣ ಮಿಷನ್‌ನ ಆದರ್ಶಗಳು ಎಂದು ಶ್ರೀ ನರೇಂದ್ರ ಮೋದಿ ಅವುಗಳ ಪ್ರಾಮುಖ್ಯತೆಯನ್ನು ವಿವರಿಸಿದರು. ಅಂತಹ ಸಂತರು ಇರುವ ಜಾಗಗಳೆಲ್ಲಾ ಮಾನವೀಯತೆಯ ಸೇವಾ ಕೇಂದ್ರಗಳು ತಾನಾಗಿಯೇ ಉದಯವಾಗುತ್ತವೆ, ಸ್ವಾಮೀಜಿಯವರು ತಮ್ಮ ಸನ್ಯಾಸ ಜೀವನದಿಂದ ಇದನ್ನು ಸಾಬೀತುಪಡಿಸಿದ್ದಾರೆ ಎಂದು ಪ್ರಧಾನಿ ಪ್ರಸ್ತಾಪಿಸಿದರು.

ನೂರಾರು ವರ್ಷಗಳ ಹಿಂದಿನ ಆದಿ ಶಂಕರಾಚಾರ್ಯರಾಗಲಿ ಅಥವಾ ಆಧುನಿಕ ಕಾಲದ ಸ್ವಾಮಿ ವಿವೇಕಾನಂದರಾಗಲಿ, ಭಾರತದ ಸಂತ ಸಂಪ್ರದಾಯವು ಸದಾ ‘ಏಕ ಭಾರತ ಶ್ರೇಷ್ಠ ಭಾರತ’ ವನ್ನು ಸಾರುತ್ತಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ರಾಮಕೃಷ್ಣ ಮಿಷನ್ ಸ್ಥಾಪನೆಯು 'ಏಕ್ ಭಾರತ, ಶ್ರೇಷ್ಠ ಭಾರತ' ಕಲ್ಪನೆಗೆ ಸಂಬಂಧಿಸಿದೆ. ಸ್ವಾಮಿ ವಿವೇಕಾನಂದರ ಕೊಡುಗೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಆ ಸಂಕಲ್ಪಗಳಿಗೆ ಮಠದ ಸ್ವರೂಪ ನೀಡಿ ಅದರಂತೆ ಬದುಕಿದ್ದರು ಎಂದು ಹೇಳಿದರು. ಅವರ ಪ್ರಭಾವವು ದೇಶದ ಎಲ್ಲಾ ಭಾಗಗಳಲ್ಲಿ ಕಾಣಬಹುದಾಗಿದೆ ಮತ್ತು ಅವರ ಪ್ರವಾಸಗಳು ಗುಲಾಮಗಿರಿಯ ಯುಗದಲ್ಲಿ ದೇಶವು ತನ್ನ ಪ್ರಾಚೀನ ರಾಷ್ಟ್ರೀಯ ಪ್ರಜ್ಞೆಯನ್ನು ಅರ್ಥೈಸಿಕೊಳ್ಳುವಂತೆ ಮಾಡಿತು ಮತ್ತು ಅದರಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿತು. ರಾಮಕೃಷ್ಣ ಮಿಷನ್‌ನ ಈ ಸಂಪ್ರದಾಯವನ್ನು ಸ್ವಾಮಿ ಆತ್ಮಸ್ಥಾನಾನಂದ ಜಿ ಅವರು ತಮ್ಮ ಜೀವನವಿಡೀ ಮುನ್ನಡೆಸಿದ್ದರು.

ಸ್ವಾಮೀಜಿಯವರೊಂದಿಗೆ ಕಳೆದ ಸಮಯವನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅವರೊಂದಿಗೆ ಗುಜರಾತಿ ಭಾಷೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿದ್ದಕ್ಕೆ ನಾನೇ ಅದೃಷ್ಟವಂತ ಎಂದು ಹೇಳಿದರು. ಕಛ್ ಭೂಕಂಪದ ಸಮಯದಲ್ಲಿ ಸ್ವಾಮಿಜಿ ಅವರ ಮಾರ್ಗದರ್ಶನದಲ್ಲಿ ಪರಿಹಾರ ಕಾರ್ಯಗಳನ್ನು ನಡೆಸಿದ್ದಾಗಿ ಪ್ರಧಾನಮಂತ್ರಿ ಹೇಳಿದರು. ‘ರಾಮಕೃಷ್ಣ ಮಿಷನ್‌ನ ಸಂತರು ದೇಶದಲ್ಲಿ ರಾಷ್ಟ್ರೀಯ ಏಕತೆಯ ನಿರ್ವಾಹಕರೆಂಬುದು ಎಲ್ಲರಿಗೂ ತಿಳಿದಿದೆ. ಮತ್ತು ಅವರು ವಿದೇಶಕ್ಕೆ ಹೋದಾಗ, ಅವರು ಅಲ್ಲಿ ಭಾರತೀಯತೆಯನ್ನು ಪ್ರತಿನಿಧಿಸುತ್ತಾರೆ’’ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಸ್ವಾಮಿ ರಾಮಕೃಷ್ಣ ಪರಮಹಂಸರು ಕಾಳಿ ಮಾತೆಯ ಸ್ಪಷ್ಟ ದೂರದೃಷ್ಟಿಯನ್ನು ಹೊಂದಿದ್ದಂತಹ ಸಂತರಲ್ಲಿ ಒಬ್ಬರು ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಅವರು ತಮ್ಮ ಸಂಪೂರ್ಣ ಅಸ್ತಿತ್ವವನ್ನುಕಾಳಿ ಮಾತೆಯ ಪಾದಕಮಲಗಳಿಗೆ ಅರ್ಪಿಸಿದ್ದರು ಎಂದರು. ಈ ಇಡೀ ವಿಶ್ವ, ಈ ಚರ ಮತ್ತು ಸ್ಥಿರ, ಎಲ್ಲವೂ ತಾಯಿಯ ಪ್ರಜ್ಞೆಯಿಂದ ಕೂಡಿದೆ. ಈ ಪ್ರಜ್ಞೆಯು ಬಂಗಾಳದ ಕಾಳಿ ಪೂಜೆಯಲ್ಲಿ ಕಂಡುಬರುತ್ತದೆ. ಈ ಪ್ರಜ್ಞೆ ಮತ್ತು ಶಕ್ತಿಯ ಕಿರಣಗಳನ್ನು ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರಂತಹ ಯುಗಪುರುಷರ ರೂಪದಲ್ಲಿ ಬೆಳಗಿಸಿದರು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

ಸ್ವಾಮಿ ವಿವೇಕಾನಂದರು ಕಾಳಿ ಮಾತೆಯ ಬಗ್ಗೆ ಹೊಂದಿದ್ದ ಆಧ್ಯಾತ್ಮಿಕ ದೂರದೃಷ್ಟಿ ಅವರಲ್ಲಿ ಅಸಾಧಾರಣ ಚೈತನ್ಯ ಮತ್ತು ಶಕ್ತಿಯನ್ನು ತುಂಬಿತ್ತು. ಸ್ವಾಮಿ ವಿವೇಕಾನಂದರಂತಹ ಧೀಮಂತ ವ್ಯಕ್ತಿತ್ವ ಜಗನ್ಮಾತೆ ಕಾಳಿಯ ಸ್ಮರಣೆಯ ಭಕ್ತಿಯಲ್ಲಿ ಚಿಕ್ಕ ಮಗುವಿನಂತೆ ಉತ್ಸುಕರಾಗುತ್ತಿದ್ದರು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಸ್ವಾಮಿ ಆತ್ಮಸ್ಥಾನಾನಂದಜಿ ಅವರಲ್ಲಿಯೂ ಅದೇ ಪ್ರಾಮಾಣಿಕ ಭಕ್ತಿ ಮತ್ತು ಅದೇ ಸಾಧನಾ ಶಕ್ತಿಯನ್ನು ನೋಡಬಹುದಾಗಿತ್ತು ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.

ಸ್ವಾಮಿ ಆತ್ಮಸ್ಥಾನಾನಂದಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಮ್ಮ ಋಷಿಮುನಿಗಳು ನಮ್ಮ ಆಲೋಚನೆಗಳು ವಿಶಾಲವಾದಾಗ, ನಮ್ಮ ಪ್ರಯತ್ನಗಳಲ್ಲಿ ನಾವು ಎಂದಿಗೂ ಒಬ್ಬಂಟಿಯಾಗಿರುವುದಿಲ್ಲ ಎಂಬುದನ್ನು ನಮಗೆ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. ಶೂನ್ಯ ಸಂಪನ್ಮೂಲಗಳೊಂದಿಗೆ ಶೃಂಗಸಭೆಯಂತಹ ಸಂಕಲ್ಪಗಳನ್ನು ಪೂರೈಸಿದ ಭರತ ವರ್ಷ ಭೂಮಿಯಲ್ಲಿ ಅಂತಹ ಹಲವು ಸಂತರ ಜೀವನ ಪಯಣವನ್ನು ನೀವು ನೋಡಬಹುದು. ಆತ್ಮಸ್ಥಾನಾನಂದಜಿ ಅವರ ಜೀವನದಲ್ಲಿ ಅದೇ ನಂಬಿಕೆ ಮತ್ತು ಸಮರ್ಪಣೆಯನ್ನು ಕಂಡಿದ್ದಾಗಿ ಎಂದು ಶ್ರೀ ಮೋದಿ ಅವರು ಹೇಳಿದರು. ಭಾರತದ ಒಬ್ಬ ಋಷಿಯು ಇಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾದಾಗ, 130 ಕೋಟಿ ದೇಶವಾಸಿಗಳ ಸಾಮೂಹಿಕ ಸಂಕಲ್ಪದಿಂದ ಸಾಧಿಸಲಾಗದ ಯಾವ ಗುರಿಯೂ ಇಲ್ಲ ಎಂದು ಪ್ರಧಾನಿ ಹೇಳಿದರು.

ಡಿಜಿಟಲ್ ಇಂಡಿಯಾದ ಉದಾಹರಣೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಡಿಜಿಟಲ್ ಪಾವತಿ ವಲಯದಲ್ಲಿ ಭಾರತವು ವಿಶ್ವ ನಾಯಕನಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಭಾರತದ ಜನರಿಗೆ 200 ಕೋಟಿ ಲಸಿಕೆ ಡೋಸ್‌ಗಳನ್ನು ನೀಡುವ ಸಾಧನೆಗಳನ್ನು ಪ್ರಧಾನಮಂತ್ರಿ ಪ್ರಮುಖವಾಗಿ ಉಲ್ಲೇಖಿಸಿದರು. ಆಲೋಚನೆಗಳು ಶುದ್ಧವಾಗಿದಾಗ, ಪ್ರಯತ್ನಗಳು ಸಫಲವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಮತ್ತು ಅಡೆತಡೆಗಳು ನಮಗೆ ದಾರಿ ತೋರಿಸುತ್ತವೆ ಎಂಬ ಅಂಶದ ಸಂಕೇತ ಈ ಉದಾಹರಣೆಗಳಾಗಿವೆ.

ಪೂಜ್ಯ ಸಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು. ಮನುಕುಲದ ಸೇವೆಯ ಉದಾತ್ತ ಕಾರ್ಯದಲ್ಲಿ ಪಾಲ್ಗೊಳ್ಳುವಂತೆ ಪ್ರತಿಯೊಬ್ಬರನ್ನೂ ಉತ್ತೇಜಿಸುವಂತೆ ಶ್ರೀ ನರೇಂದ್ರ ಮೋದಿ ಜನತೆಗೆ ಕರೆ ನೀಡಿದರು. ಶತಮಾನೋತ್ಸವ ವರ್ಷಗಳು ಹೊಸ ಶಕ್ತಿ ಮತ್ತು ಹೊಸ ಸ್ಫೂರ್ತಿಯ ವರ್ಷವಾಗುತ್ತಿವೆ ಎಂದ ಶ್ರೀ ನರೇಂದ್ರ ಮೋದಿ ಪ್ರಮುಖವಾಗಿ ಉಲ್ಲೇಖಿಸಿದರು ಮತ್ತು ಆಜಾದಿ ಕಾ ಅಮೃತ ಮಹೋತ್ಸವವು ದೇಶದಲ್ಲಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಶುಭ ಕೋರಿದರು. ನಮ್ಮೆಲ್ಲರ ಸಾಮೂಹಿಕ ಕೊಡುಗೆ ದೊಡ್ಡ ಬದಲಾವಣೆಯನ್ನು ತರಬಹುದು ಎಂದು ಪ್ರಧಾನಮಂತ್ರಿ ಕರೆ ನೀಡಿದರು.

 

**********

 


(Release ID: 1840636) Visitor Counter : 176