ಪ್ರಧಾನ ಮಂತ್ರಿಯವರ ಕಛೇರಿ
ಬೆಂಗಳೂರಿನಲ್ಲಿ ನಡೆದ `ಬಾಷ್ ಸ್ಮಾರ್ಟ್ ಕ್ಯಾಂಪಸ್’ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳ ಭಾಷಣದ ಪಠ್ಯರೂಪ
Posted On:
30 JUN 2022 12:55PM by PIB Bengaluru
ʻಬಾಷ್ ಇಂಡಿಯಾʼ ತಂಡದ ಎಲ್ಲಾ ಸದಸ್ಯರೇ,
ಪ್ರಿಯ ಸ್ನೇಹಿತರೇ, ನಮಸ್ಕಾರ!
100 ವರ್ಷಗಳನ್ನು ಪೂರೈಸಿದ ʻಬಾಷ್ ಇಂಡಿಯಾʼಗೆ ಅಭಿನಂದನೆಗಳು. ಇದು ಭಾರತ ಮತ್ತು ʻಬಾಷ್ ಇಂಡಿಯಾʼ ಎರಡಕ್ಕೂ ವಿಶೇಷ ವರ್ಷವಾಗಿದೆ. ನಮ್ಮ ರಾಷ್ಟ್ರವು ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸುತ್ತಿದೆ. ಇದೇ ವೇಳೆ, ನೀವು ಭಾರತದಲ್ಲಿ ನಿಮ್ಮ ಉಪಸ್ಥಿತಿಯ ಶತಮಾನೋತ್ಸವ ಆಚರಿಸುತ್ತಿದ್ದೀರಿ. ʻಬಾಷ್ ಸ್ಮಾರ್ಟ್ ಕ್ಯಾಂಪಸ್ʼ ಉದ್ಘಾಟಿಸಲು ನನಗೆ ಸಂತೋಷವಾಗಿದೆ. ಈ ಕ್ಯಾಂಪಸ್ ಖಂಡಿತವಾಗಿಯೂ ಭವಿಷ್ಯ ಸನ್ನದ್ಧ ಉತ್ಪನ್ನಗಳನ್ನು ಹೊರತರುವಲ್ಲಿ ಹಾಗೂ ಭಾರತ ಮತ್ತು ವಿಶ್ವಕ್ಕಾಗಿ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂದಾಳತ್ವ ವಹಿಸಲಿದೆ. ಅಕ್ಟೋಬರ್ 2015ರಲ್ಲಿ, ಚಾನ್ಸಲರ್ ಮರ್ಕೆಲ್ ಅವರೊಂದಿಗೆ ಬೆಂಗಳೂರಿನ ಬಾಷ್ ಘಟಕಕ್ಕೆ ಭೇಟಿ ನೀಡುವ ಅವಕಾಶ ನನಗೆ ಸಿಕ್ಕಿತು. ಅಲ್ಲಿ ನಡೆಯುತ್ತಿರುವ ಸಂಶೋಧನೆಯ ಕೆಲಸವನ್ನು ನಾನು ಪ್ರತ್ಯಕ್ಷವಾಗಿ ನೋಡಿದೆ. ಯುವಕರನ್ನು ಕೌಶಲ್ಯಗೊಳಿಸಲು ಬಾಷ್ ಬಳಸುವ ಅವಳಿ ಶಿಕ್ಷಣ ವಿಧಾನವು ಅಷ್ಟೇ ಸಂತೋಷಕರವಾದುದು.
ಸ್ನೇಹಿತರೇ,
ಇದು ತಂತ್ರಜ್ಞಾನದ ಯುಗ. ಶತಮಾನದ ಅತಿದೊಡ್ಡ ಸಾಂಕ್ರಾಮಿಕದ ವಿರುದ್ಧ ಜಗತ್ತು ಹೋರಾಡುತ್ತಿದ್ದಾಗ, ಕಳೆದ ಎರಡು ವರ್ಷಗಳಲ್ಲಿ ನಾವೆಲ್ಲರೂ ತಂತ್ರಜ್ಞಾನದ ಪ್ರಯೋಜನಗಳನ್ನು ನೋಡಿದ್ದೇವೆ. ಆದ್ದರಿಂದ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಇನ್ನೂ ಹೆಚ್ಚಿನ ಹೂಡಿಕೆ ಮಾಡುವುದು ಮುಖ್ಯ. ʻಬಾಷ್ ಇಂಡಿಯಾʼ ಕೇವಲ ಆವಿಷ್ಕಾರದ ಮೇಲೆ ಮಾತ್ರವಲ್ಲ, ಅದಕ್ಕೆ ತಕ್ಕ ಅಗಾಧತೆ ನೀಡುವಲ್ಲಿಯೂ ಕೆಲಸ ಮಾಡಿದೆ ಎಂಬುದು ಸಂತೋಷದ ವಿಷಯ. ಇದರಲ್ಲಿ ಒಂದು ಪ್ರಮುಖ ಆಧಾರ ಸ್ತಂಭವೆಂದರೆ ಸುಸ್ಥಿರತೆ. ಕಳೆದ 8 ವರ್ಷಗಳಲ್ಲಿ ಸೌರಶಕ್ತಿಯ ಸ್ಥಾಪಿತ ಸಾಮರ್ಥ್ಯವು ಸುಮಾರು 20 ಪಟ್ಟು ಹೆಚ್ಚಾಗುವುದರೊಂದಿಗೆ ಭಾರತದ ಬೆಳವಣಿಗೆಯು ಸಮೃದ್ಧಿಯತ್ತ ಸಾಗುತ್ತಿದೆ. ಬಾಷ್ ಇಂಡಿಯಾವು ಭಾರತ ಮತ್ತು ಹೊರಗೆ ಇಂಗಾಲದ ತಟಸ್ಥತೆಯನ್ನು ಸಾಧಿಸಿದೆ ಎಂದು ನಾನು ಕೇಳಲ್ಪಟ್ಟೆ. ಇದು ತುಂಬಾ ಸ್ಫೂರ್ತಿದಾಯಕ ವಿಚಾರ.
ಸ್ನೇಹಿತರೇ,
ಇಂದು, ಭಾರತವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿದೆ. ಕಳೆದ ಎರಡು ವರ್ಷಗಳಲ್ಲಿ ಹೂಡಿಕೆಗಳು ಹೆಚ್ಚಾಗಿದೆ. ನಮ್ಮ ಯುವಕರಿಗೆ ಧನ್ಯವಾದಗಳು, ನಮ್ಮ ನವೋದ್ಯಮ ಪರಿಸರ ವ್ಯವಸ್ಥೆಯು ವಿಶ್ವದ ಅತಿದೊಡ್ಡ ಪರಿಸರ ವ್ಯವಸ್ಥೆಗಳಲ್ಲಿ ಒಂದಾಗಿದೆ. ತಂತ್ರಜ್ಞಾನ ಜಗತ್ತಿನಲ್ಲಿಯೇ ಅನೇಕ ಅವಕಾಶಗಳಿವೆ. ಪ್ರತಿ ಹಳ್ಳಿಗೂ ಹೈಸ್ಪೀಡ್ ಇಂಟರ್ನೆಟ್ ಒದಗಿಸಲು ಭಾರತ ಸರಕಾರ ಕಾರ್ಯೋನ್ಮುಖವಾಗಿದೆ. ಸರಕಾರದ ಪ್ರತಿಯೊಂದು ವಿಭಾಗದಲ್ಲೂ ತಂತ್ರಜ್ಞಾನದ ಸಂಯೋಜನೆಯು ನಮ್ಮ ʻಡಿಜಿಟಲ್ ಇಂಡಿಯಾʼ ಆಶಯದ ಭಾಗವಾಗಿದೆ. ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ನಮ್ಮ ರಾಷ್ಟ್ರದಲ್ಲಿ ಹೂಡಿಕೆ ಮಾಡುವಂತೆ ನಾನು ಜಗತ್ತನ್ನು ಒತ್ತಾಯಿಸುತ್ತೇನೆ.
ಸ್ನೇಹಿತರೇ,
ಮೈಲಿಗಲ್ಲುಗಳು ಮುಖ್ಯ. ಅವುಗಳು ಆಚರಣೆ ಮತ್ತು ಮುನ್ನೋಟದ ಸಂದರ್ಭಗಳಾಗಿರುತ್ತವೆ. ಭಾರತದಲ್ಲಿ ಇನ್ನಷ್ಟು ಕೆಲಸಗಳನ್ನು ಮಾಡುವ ಬಗ್ಗೆ ಯೋಚಿಸುವಂತೆ ನಾನು ʻಬಾಷ್ ಅನ್ನು ಒತ್ತಾಯಿಸುತ್ತೇನೆ. ಮುಂದಿನ 25 ವರ್ಷಗಳಲ್ಲಿ ನಿಮ್ಮ ತಂಡ ಏನು ಮಾಡಬಲ್ಲದು ಎಂಬ ಗುರಿಯನ್ನು ಇಟ್ಟುಕೊಳ್ಳಿ. 100 ವರ್ಷಗಳ ಹಿಂದೆ, ʻಬಾಷ್ʼ ಒಂದು ಜರ್ಮನ್ ಕಂಪನಿಯಾಗಿ ಭಾರತಕ್ಕೆ ಬಂದಿತು. ಆದರೆ ಇಂದು ಅದು ಜರ್ಮನ್‌ನಷ್ಟೇ ಭಾರತೀಯವೂ ಆಗಿದೆ. ಇದು ಜರ್ಮನ್ ಎಂಜಿನಿಯರಿಂಗ್ ಮತ್ತು ಭಾರತೀಯ ಶಕ್ತಿಗೆ ಉತ್ತಮ ಉದಾಹರಣೆಯಾಗಿದೆ. ಈ ಸಂಬಂಧವು ಬಲಗೊಳ್ಳುತ್ತಲೇ ಇರುತ್ತದೆ.
ಮತ್ತೊಮ್ಮೆ, ನಾನು ʻಬಾಷ್ ಇಂಡಿಯಾʼದ ಇಡೀ ಕುಟುಂಬವನ್ನು ಅಭಿನಂದಿಸುತ್ತೇನೆ
ಮತ್ತು
ನಿಮಗೆ ಶುಭ ಹಾರೈಸುತ್ತೇನೆ.
*****
(Release ID: 1838220)
Visitor Counter : 137
Read this release in:
Bengali
,
English
,
Urdu
,
Hindi
,
Marathi
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam