ಪ್ರಧಾನ ಮಂತ್ರಿಯವರ ಕಛೇರಿ
ಭಾರತದ ಸ್ವಾತಂತ್ರ್ಯದ 75ನೇ ವರ್ಷದ ಸ್ಮರಣಾರ್ಥ ʻಆಜಾದಿ ಕಾ ಅಮೃತ ಮಹೋತ್ಸವ’ ಆಚರಿಸುತ್ತಿರುವ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾವ್ ಇಂದರ್ ಜಿತ್ ಸಿಂಗ್
ಪ್ರಕಟಣಾ ದಿನಾಂಕ:
28 JUN 2022 8:08PM by PIB Bengaluru
ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು (ಎಂ.ಒ.ಎಸ್.ಪಿ.ಐ) 2022ರ ಜೂನ್ 27ರಿಂದ ಸರಣಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ʻಆಜಾದಿ ಕಾ ಅಮೃತ ಮಹೋತ್ಸವʼ ಸಪ್ತಾಹವನ್ನು ಆಚರಿಸುತ್ತಿದೆ. ಈ ಆಚರಣೆಯ ಭಾಗವಾಗಿ, ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ಯೋಜನೆ (ʻಎಂ.ಪಿ.ಎಲ್.ಎಡಿ.ಎಸ್ʼ) ಮತ್ತು ʻಐ.ಪಿ.ಎಂʼ ವಿಭಾಗವು 2022ರ ಜೂನ್ 28ರಂದು ನವದೆಹಲಿಯ ʻಎನ್.ಡಿ.ಎಂ.ಸಿ. ಕನ್ವೆನ್ಷನ್ ಸೆಂಟರ್‌ನಲ್ಲಿ ಅರ್ಧ ದಿನದ ಕಾರ್ಯಕ್ರಮವನ್ನು ಆಯೋಜಿಸಿತು.
ಅಂಕಿ-ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಸಹಾಯಕ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ರಾವ್ ಇಂದರ್ ಜಿತ್ ಸಿಂಗ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದೀರ್ಘ ಬಾಳಿಕೆಯ ಸಮುದಾಯ ಸ್ವತ್ತುಗಳ ಅಭಿವೃದ್ಧಿಯಲ್ಲಿ ʻಎಂ.ಪಿ.ಎಲ್.ಎ.ಡಿ. ಯೋಜನೆಯ ವೈಶಿಷ್ಟ್ಯಗಳು, ಪಾತ್ರ ಮತ್ತು ಕೊಡುಗೆಯನ್ನುಕಿರು ಸಾಕ್ಷ್ಯಚಿತ್ರ ಮತ್ತು ವಸ್ತು ಪ್ರದರ್ಶನದ ಮೂಲಕ ಈ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
******
(ಪ್ರಕಟಣೆ ಐ.ಡಿ.: 1837831)
ವಿಸಿಟರ್ ಕೌಂಟರ್ : 154
ಪ್ರಕಟಣೆಯನ್ನು ಇದರಲ್ಲಿ ಓದಿ:
Tamil
,
English
,
Urdu
,
Marathi
,
हिन्दी
,
Manipuri
,
Assamese
,
Punjabi
,
Gujarati
,
Odia
,
Telugu
,
Malayalam