ಪ್ರಧಾನ ಮಂತ್ರಿಯವರ ಕಛೇರಿ

ಅಸಂಖ್ಯಾತ ಭಾರತೀಯರಿಗೆ ತಮ್ಮ ಉದ್ಯಮಶೀಲತೆಯ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಉದ್ಯೋಗ ಸೃಷ್ಟಿಕರ್ತರಾಗಲು ಮುದ್ರಾ ಯೋಜನೆಯು ಅವಕಾಶವನ್ನು ನೀಡಿದೆ: ಪ್ರಧಾನಮಂತ್ರಿ

Posted On: 08 APR 2022 6:31PM by PIB Bengaluru

ಪ್ರಧಾನಮಂತ್ರಿ ಮುದ್ರಾ ಯೋಜನೆ ಪ್ರಾರಂಭವಾದಾಗಿನಿಂದ, ಈ ಯೋಜನೆಯು ಅಸಂಖ್ಯಾತ ಭಾರತೀಯರಿಗೆ ತಮ್ಮ ಉದ್ಯಮಶೀಲತೆಯ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಏಳು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಕರ್ತರಾಗಲು ಅವಕಾಶಗಳನ್ನು ಒದಗಿಸಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.  ಈ ಏಳು ವರ್ಷಗಳಲ್ಲಿ ಮುದ್ರಾ ಯೋಜನೆಯು ಸಮೂಲಾಗ್ರ ಬದಲಾವಣೆಯನ್ನು ತಂದಿದೆ, ಹಾಗೂ ಘನತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.


ಮೈಗೌಇಂಡಿಯಾ ಮಾಡಿದ ಟ್ವೀಟ್‌ ಗೆ ಸ್ಪಂದಿಸಿ ಪ್ರತಿಕ್ರಿಯೆಯಾಗಿ, ಪ್ರಧಾನಮಂತ್ರಿ ಅವರು ಈ ರೀತಿಯ ಸಂದೇಶ ಟ್ವೀಟ್  ಮಾಡಿದ್ದಾರೆ;

"ಸಾಲ ಪಡೆಯಲಾಗದವರಿಗೆ ಸಾಲದ ಸಹಾಯ ಎನ್ನುವ #ಫಂಡಿಂಗ್ ದ ಅನ್ ಫಂಡೆಡ್  ತತ್ವದಿಂದ ಮಾರ್ಗದರ್ಶಿತವಾದ ಮುದ್ರಾ ಯೋಜನೆಯು ಅಸಂಖ್ಯಾತ ಭಾರತೀಯರಿಗೆ ತಮ್ಮ ಉದ್ಯಮಶೀಲತೆಯ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಉದ್ಯೋಗ ಸೃಷ್ಟಿಕರ್ತರಾಗಲು ಅವಕಾಶವನ್ನು ಕಲ್ಪಿಸಿದೆ. ನಾವು ಈ ಯೋಜನೆಯ ಏಳು ವರ್ಷಗಳ ಸಾಧನೆಗಳನ್ನು #7ಈಯರ್ಸ್ ಆಫ್ ಪಿ.ಎಂ.ಎಂ.ವೈ. ಎಂದು ಗುರುತಿಸಿಕೊಳ್ಳುವಾಗ ,  ಈ ಯೋಜನೆಯು ಎಲ್ಲಡೆ ಸಮೂಲಾಗ್ರ ಬದಲಾವಣೆ ಹಾಗೂ ಘನತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಿರುವುದನ್ನು ಕಾಣಬಹುದು."


 ***



(Release ID: 1815180) Visitor Counter : 160