ಪ್ರಧಾನ ಮಂತ್ರಿಯವರ ಕಛೇರಿ
ಮಾರ್ಚ್ 29 ರಂದು ಮಧ್ಯಪ್ರದೇಶದಲ್ಲಿ ಪಿಎಂಎವೈ-ಜಿಯ 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ 'ಗೃಹ ಪ್ರವೇಶ'ದಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ
ದೇಶದ ಪ್ರತಿ ನಿರ್ಗತಿಕ ಕುಟುಂಬಕ್ಕೆ ಪಕ್ಕಾ ಮನೆ ಒದಗಿಸುವ ಪ್ರಧಾನಮಂತ್ರಿ ಅವರ ಪ್ರಯತ್ನಕ್ಕೆ ಇದು ಮತ್ತೊಂದು ಹೆಜ್ಜೆಯಾಗಿದೆ
प्रविष्टि तिथि:
28 MAR 2022 2:00PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಧ್ಯಪ್ರದೇಶದಲ್ಲಿ ಮಾರ್ಚ್ 29 ರಂದು ಮಧ್ಯಾಹ್ನ 12:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ್‌ನ ಸುಮಾರು 5.21 ಲಕ್ಷ ಫಲಾನುಭವಿಗಳ ‘ಗೃಹ ಪ್ರವೇಶ’ದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶದ ಪ್ರತಿ ನಿರ್ಗತಿಕ ಕುಟುಂಬಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆಯನ್ನು ಒದಗಿಸುವುದು ಪ್ರಧಾನಿ ಅವರ ನಿರಂತರ ಪ್ರಯತ್ನವಾಗಿದೆ. ಇದು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆಯನ್ನು ಸೂಚಿಸುತ್ತದೆ.
ಈ ಸಮಾರಂಭವು ಮಧ್ಯಪ್ರದೇಶದಾದ್ಯಂತ ಹೊಸ ಮನೆಗಳಲ್ಲಿ ಶಂಖ, ದೀಪ, ಹೂವುಗಳು ಮತ್ತು ರಂಗೋಲಿಯೊಂದಿಗೆ ಸಾಂಪ್ರದಾಯಿಕ ಆಚರಣೆಗಳಿಗೆ ಸಾಕ್ಷಿಯಾಗಲಿದೆ.
ಮಧ್ಯಪ್ರದೇಶದಲ್ಲಿ PMAY-G ಅನುಷ್ಠಾನವು ಮಹಿಳಾ ಮೇಸ್ತ್ರಿಗಳು ಸೇರಿದಂತೆ ಸಾವಿರಾರು ಮೇಸ್ತ್ರಿಗಳಿಗೆ ತರಬೇತಿ ನೀಡುವುದು, ಹಾರು ಬೂದಿ ಇಟ್ಟಿಗೆಗಳನ್ನು ಬಳಸುವುದು, ಮಹಿಳಾ ಸ್ವ-ಸಹಾಯ ಗುಂಪುಗಳನ್ನು (ಎಸ್‌ಎಚ್‌ಜಿ) ಕೇಂದ್ರೀಕರಿಸಲು ಸಾಲವನ್ನು ಒದಗಿಸುವ ಮೂಲಕ ಸಬಲೀಕರಣದಂತಹ ಅನೇಕ ವಿಶಿಷ್ಟ ಮತ್ತು ನವೀನ ಹಂತಗಳಿಗೆ ಯೋಜನೆಗಳ ಉತ್ತಮ ಕಾರ್ಯಗತಗೊಳಿಸಲು ಮತ್ತು ಮೇಲ್ವಿಚಾರಣೆಗಾಗಿ ತಂತ್ರಜ್ಞಾನವನ್ನು ಬಳಸುವುದು ಸಾಕ್ಷಿಯಾಗಿದೆ.
***
(रिलीज़ आईडी: 1810495)
आगंतुक पटल : 219
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam