ಪ್ರಧಾನ ಮಂತ್ರಿಯವರ ಕಛೇರಿ

ನಮ್ಮ ಪ್ರಜೆಗಳಿಗೆ ಲಸಿಕೆ ನೀಡಿಕೆ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳಲ್ಲಿ ಇಂದು ಅತ್ಯಂತ ಪ್ರಮುಖ ದಿನ- ಪ್ರಧಾನಮಂತ್ರಿ ಹೇಳಿಕೆ


12ರಿಂದ 14 ವರ್ಷದೊಳಗಿನ ಎಲ್ಲ ಯವಜನತೆ ಮತ್ತು 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಕರೆ

Posted On: 16 MAR 2022 10:12AM by PIB Bengaluru

ನಮ್ಮ ಪ್ರಜೆಗಳಿಗೆ ಲಸಿಕೆ ನೀಡುವ ಭಾರತದ ಪ್ರಯತ್ನಗಳಲ್ಲಿ ಇಂದು ಮಹತ್ವದ ದಿನವಾಗಿದೆ ಎಂದು ಹೇಳಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 12-14 ವಯೋಮಾನದ ಯುವಕರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

 

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿ ಹೀಗೆ ಹೇಳಿದ್ದಾರೆ.

“ನಮ್ಮ ಪ್ರಜೆಗಳೆಲ್ಲರಿಗೂ ಲಸಿಕೆ ನೀಡುವ ಭಾರತದ ಪ್ರಯತ್ನಗಳಲ್ಲಿ ಇಂದು ಅತ್ಯಂತ ಪ್ರಮುಖ ದಿನವಾಗಿದೆ. ಇದೀಗ 12 ರಿಂದ 14 ವಯಸ್ಸಿನ ಪ್ರಾಯದವರು ಲಸಿಕೆ ಪಡೆಯಲು ಅರ್ಹರಾಗಿದ್ದಾರೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಮುನ್ನೆಚ್ಚರಿಕೆ ಡೋಸ್‌ಗಳಿಗೆ ಅರ್ಹರಾಗಿದ್ದು, ಈ ಎರಡು ವಯೋಮಾನದ ಎಲ್ಲರೂ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ನಾನು  ಒತ್ತಾಯಿಸುತ್ತೇನೆ’’

“ಇಡೀ ಭೂಗ್ರಹದ ಬಗ್ಗೆ ಕಾಳಜಿ ವಹಿಸುವ ಭಾರತದ ನೀತಿಗೆ ಅನುಗುಣವಾಗಿ, ಲಸಿಕೆ ಮೈತ್ರಿ ಕಾರ್ಯಕ್ರಮದ ಅಡಿಯಲ್ಲಿ ನಾವು ಹಲವು ರಾಷ್ಟ್ರಗಳಿಗೆ ಲಸಿಕೆಗಳನ್ನು ಪೂರೈಸಿದ್ದೇವೆ. ಭಾರತದ ಲಸಿಕೆ ಪ್ರಯತ್ನಗಳು ಕೋವಿಡ್-19 ವಿರುದ್ಧದ ಜಾಗತಿಕ ಹೋರಾಟವನ್ನು ಬಲಪಡಿಸಿವೆ ಎಂಬುದು ನನಗೆ ಖುಷಿಯ ಸಂಗತಿಯಾಗಿದೆ’’

“ಇಂದು, ಭಾರತವು ‘ಭಾರತದಲ್ಲಿ ತಯಾರಿಸಿದ ಅನೇಕ’ ಲಸಿಕೆಗಳನ್ನು ಹೊಂದಿದೆ. ಸೂಕ್ತ ಮೌಲ್ಯಮಾಪನ ಪ್ರಕ್ರಿಯೆಯ ನಂತರ ನಾವು ಇತರ ಲಸಿಕೆಗಳಿಗೆ ಅನುಮೋದನೆ ನೀಡಿದ್ದೇವೆ. ಈ ಮಾರಣಾಂತಿಕ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾವು ಅತ್ಯುತ್ತಮ ಸ್ಥಿತಿಯಲ್ಲಿದ್ದೇವೆ. ಇದೇ ವೇಳೆ, ನಾವು ಕೋವಿಡ್ ಸಂಬಂಧಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ಮುಂದುವರಿಸಬೇಕು’’

 

****
 



(Release ID: 1806502) Visitor Counter : 172