ಪ್ರಧಾನ ಮಂತ್ರಿಯವರ ಕಛೇರಿ

ಹೊಸ ದಿಲ್ಲಿಯ ಕಾರಿಯಪ್ಪ ಮೈದಾನದಲ್ಲಿ ಎನ್.ಸಿ.ಸಿ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 28 JAN 2022 3:22PM by PIB Bengaluru

ದೇಶದ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಜೀ, ಎನ್.ಸಿ.ಸಿ. ಡಿ.ಜಿ. ಲೆಫ್ಟಿನೆಂಟ್ ಜನರಲ್ ಗುರ್ಬೀರ್ ಪಾಲ್ ಸಿಂಗ್ ಜೀ, ಇಲ್ಲಿ ಹಾಜರಿರುವ ಎಲ್ಲಾ ಗೌರವಾನ್ವಿತರೇ ಮತ್ತು ಅಧಿಕಾರಿಗಳೇ, ಗಣರಾಜ್ಯೋತ್ಸವ ದಿನದ ಪರೇಡ್ ನಲ್ಲಿ ಭಾಗವಹಿಸಿರುವ ಕಲಾವಿದರೇ ಮತ್ತು ಎನ್.ಎಸ್.ಎಸ್.-ಎನ್.ಸಿ.ಸಿ.ಸಂಗಾತಿಗಳೇ!

ದೇಶವು ಈಗ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಮತ್ತು ಯುವ ದೇಶವು ಇಂತಹ ಚಾರಿತ್ರಿಕ ಸಂದರ್ಭವನ್ನು ಸಾಕ್ಷೀಕರಿಸುವಾಗ, ಅದರ ಆಚರಣೆಯಲ್ಲಿ ಅಲ್ಲೊಂದು ವಿಭಿನ್ನವಾದ ಉತ್ಸಾಹವು ಕಾಣಬರುತ್ತದೆ. ಕಾರಿಯಪ್ಪ ಮೈದಾನದಲ್ಲಿಯೂ ನಾನು ಅಂತಹದೇ ಉತ್ಸಾಹವನ್ನು ಕಾಣುತ್ತಿದ್ದೇನೆ. ನಮ್ಮ ದೃಢ ನಿರ್ಧಾರಗಳನ್ನು ಈಡೇರಿಸುವ ಮತ್ತು 2047ರಲ್ಲಿ ಭಾರತ ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವಾಗ 2047 ಭವ್ಯ ಭಾರತವನ್ನು ನಿರ್ಮಾಣ ಮಾಡುವ ಭಾರತದ ಯುವ ಶಕ್ತಿಯ ಒಳನೋಟ ಇದರಲ್ಲಿದೆ.

ನಾನು ಕೂಡಾ ನಿಮ್ಮಂತೆ ಎನ್.ಸಿ.ಸಿ. ಸಕ್ರಿಯ ಕೆಡೆಟ್ ಆಗಿದ್ದೆ ಎಂಬುದು ನನಗೆ ಹೆಮ್ಮೆಯ ಸಂಗತಿ. ಆದರೆ ನನಗೆ ನಿಮ್ಮಷ್ಟು ಅದೃಷ್ಟ, ಸವಲತ್ತುಗಳು ಇರಲಿಲ್ಲ. ನಾನು ದೇಶಕ್ಕೆ ಸಂಬಂಧಿಸಿದ ನನ್ನ ಜವಾಬ್ದಾರಿಗಳನ್ನು ನಿಭಾಯಿಸುವಾಗ ಎನ್.ಸಿ.ಸಿ.ಯಲ್ಲಿ ತರಬೇತಿ ಮತ್ತು ರೂಪಿಸುವಿಕೆಯಿಂದಾಗಿ ಭಾರೀ ಪ್ರೇರಣೆಯನ್ನು, ಉತ್ಸಾಹವನ್ನು ಪಡೆಯುತ್ತಿದ್ದೇನೆ. ಇತ್ತೀಚೆಗೆ ನಾನು ಎನ್.ಸಿ.ಸಿ. ಹಿರಿಯ ಕೆಡೆಟ್ ಸದಸ್ಯತ್ವದ ಕಾರ್ಡ್  ಪಡೆದಿದ್ದೇನೆ. ಆದುದರಿಂದ ಭಾರತದ ಪ್ರಧಾನ ಮಂತ್ರಿ ಜೊತೆ ರೀತಿಯಲ್ಲಿ ನಾನು ನಿಮ್ಮೊಂದಿಗೂ ಜೋಡಿಸಲ್ಪಟ್ಟಿದ್ದೇನೆ. ಸಂದರ್ಭದಲ್ಲಿ ಎನ್.ಸಿ.ಸಿ. ಎಲ್ಲಾ ಸಹಚರ ಕೆಡೆಟ್ ಗಳಿಗೆ ಮತ್ತು ಪದಾಧಿಕಾರಿಗಳಿಗೆ ನಾನು ನಮನಗಳನ್ನು ಸಲ್ಲಿಸುತ್ತೇನೆ. ಇಂದು ಪ್ರಶಸ್ತಿ ಗಳಿಸಿದ ಕೆಡೆಟ್ ಗಳಿಗೆ ಶುಭಾಶಯಗಳನ್ನು ಹೇಳುತ್ತೇನೆ. ಇವತ್ತಿನ ದಿನ ಸ್ವಾತಂತ್ರ್ಯ ಹೋರಾಟಗಾರ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಜೀ ಅವರ ಜನ್ಮದಿನ. ಇಂದು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಜನ್ಮ ದಿನ ಕೂಡಾ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸಿರುವದೇಶದ ವೀರ, ಧೀರ ಪುತ್ರರಿಗೆ ನಾನು ಶಿರಬಾಗಿ  ಗೌರವದ ನಮನಗಳನ್ನು ಸಲ್ಲಿಸುತ್ತೇನೆ

ಸ್ನೇಹಿತರೇ,

ಇಂದು, ದೇಶವು ಹೊಸ ದೃಢ ನಿರ್ಧಾರಗಳೊಂದಿಗೆ ಮುನ್ನಡೆಯುತ್ತಿರುವಾಗ, ಎನ್.ಸಿ.ಸಿ.ಯನ್ನು ಬಲಪಡಿಸಲು ನಮ್ಮ ಪ್ರಯತ್ನಗಳೂ ಚಾಲ್ತಿಯಲ್ಲಿವೆ. ನಿಟ್ಟಿನಲ್ಲಿ ಉನ್ನತ ಮಟ್ಟದ ಪರಿಶೀಲನ ಸಮಿತಿಯನ್ನು ರಚಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ದೇಶದ ಗಡಿ ಭಾಗಗಳಲ್ಲಿ ನಾವು ಒಂದು ಲಕ್ಷ ಹೊಸ ಕೆಡೆಟ್ ಗಳನ್ನು ರೂಪಿಸಿದ್ದೇವೆ. ಎನ್.ಸಿ.ಸಿ. ಕೆಡೆಟ್ ಗಳ ತರಬೇತಿಯಲ್ಲಿ ಸಿಮ್ಯುಲೇಷನ್ನಿನಂತಹ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುತ್ತಿರುವುದು ನನಗೆ ಸಂತೋಷದ ಸಂಗತಿಯಾಗಿದೆ. ಎನ್.ಸಿ.ಸಿ. ಜೊತೆಗೆ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಬೆಸೆಯಲು ದೇಶವು ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸ್ವ-ಹೂಡಿಕೆ ಯೋಜನೆ ಅಡಿಯಲ್ಲಿ ದೇಶದ ಕಾಲೇಜುಗಳಲ್ಲಿ ಒಂದು ಲಕ್ಷ ಕೆಡೆಟ್ ಗಳನ್ನು ರೂಪಿಸಲಾಗಿದೆ. ಈಗ ಶಾಲೆಗಳಲ್ಲಿಯೂ ಒಂದು ಲಕ್ಷ ಕೆಡೆಟ್ ಗಳನ್ನು ತಯಾರು ಮಾಡಲು ಇಂತಹ ಪ್ರಯತ್ನಗಳು ಚಾಲ್ತಿಯಲ್ಲಿವೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ, 90 ವಿಶ್ವವಿದ್ಯಾಲಯಗಳು ಎನ್.ಸಿ.ಸಿ.ಯನ್ನು ಆಯ್ಕೆ ವಿಷಯವನ್ನಾಗಿ ಆರಂಭ ಮಾಡಿವೆ. ನಾನಿಂದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಕೆಡೆಟ್ ಗಳನ್ನು ನೋಡುತ್ತಿದ್ದೇನೆ. ಇದು ಮನೋಸ್ಥಿತಿಯ ಚೌಕಟ್ಟು ಬದಲಾಗುತ್ತಿರುವುದರ ಸಂಕೇತ. ದೇಶಕ್ಕೆ ಇಂದು ನಿಮ್ಮ ವಿಶೇಷ ಕೊಡುಗೆಯ ಅವಶ್ಯಕತೆ ಇದೆಇಂದು ನಿಮಗೆ ದೇಶದಲ್ಲಿ ಬಹಳಷ್ಟು ಅವಕಾಶಗಳು ಇವೆ. ಈಗ ದೇಶದ ಹೆಣ್ಣು ಮಕ್ಕಳು ಸೈನಿಕ ಶಾಲೆಗಳಿಗೆ ದಾಖಲಾಗುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಸೇನೆಯಲ್ಲಿ ಭಾರೀ ಜವಾಬ್ದಾರಿಗಳು ಲಭಿಸುತ್ತಿವೆ. ದೇಶದ ಹೆಣ್ಣು ಮಕ್ಕಳು ವಾಯು ಪಡೆಯಲ್ಲಿ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಆದುದರಿಂದ ನಾವು ಹೆಣ್ಣು ಮಕ್ಕಳನ್ನು ಎನ್.ಸಿ.ಸಿ.ಯಲ್ಲಿ ಹೆಚ್ಚು ಒಳಗೊಳ್ಳುವಂತೆ ಮಾಡಲು ಪ್ರಯತ್ನಗಳನ್ನು ನಡೆಸಬೇಕು. ಎನ್.ಸಿ.ಸಿ.ಗೆ ಸೇರಿರುವ ಹೆಣ್ಣು ಮಕ್ಕಳು ನಿಟ್ಟಿನಲ್ಲಿ ಪ್ರೇರಣೆಯಾಗಬಲ್ಲರು.

ಸ್ನೇಹಿತರೇ,

ದೇಶದ ಪ್ರಖ್ಯಾತ ಕವಿ ಮಕ್ಕನ್ ಲಾಲ್ ಚತುರ್ವೇದಿ ಅವರು ಬರೆದಿದ್ದಾರೆ--

भूखंड बिछा, आकाश ओढ़, नयनोदक ले, मोदक प्रहार,

ब्रह्मांड हथेली पर उछाल, अपने जीवन-धन को निहार।

ಸಾಲುಗಳು ಶಕ್ತಿಯ ಪರಾಕಾಷ್ಟೆಯನ್ನು ವಿವರಿಸುತ್ತವೆ. ಶಕ್ತಿಯು ಭೂಮಿಯನ್ನು ವ್ಯಾಪಿಸಿ, ಆಕಾಶವನ್ನು ಕ್ರಮಿಸಿ ಮತ್ತು ಇಡೀ ವಿಶ್ವವನ್ನು ಅಂಗೈಯಲ್ಲಿಡುತ್ತದೆ!. ಅತ್ಯಂತ ಕಠಿಣ ಮತ್ತು ಕಷ್ಟದ ಪರಿಸ್ಥಿತಿಗಳನ್ನು ನಗು ಮುಖದೊಂದಿಗೆ ಮತ್ತು ಧೈರ್ಯದಿಂದ ಎದುರಿಸಲು ಶಕ್ತಿಯು ಸಹಕಾರಿಯಾಗುತ್ತದೆ. ಇಂದು ಭಾರತ ಮಾತೆಯು ಭಾರತದ ಯುವಜನತೆಗೆ ಕರೆಯನ್ನು ನೀಡುತ್ತಿದ್ದಾಳೆ.

भूखंड बिछा, आकाश ओढ़, नयनोदक ले, मोदक प्रहार,

ब्रह्मांड हथेली पर उछाल, अपने जीवन-धन को निहार।

 

ಮುಂದಿನ 25 ವರ್ಷಗಳ ಅಮೃತ ಕಾಲ (ಪುಣ್ಯ ಕಾಲದೇಶಪ್ರೇಮದ ಹೆದ್ದೆರೆಯ ಕಾಲ. ಮತ್ತು ಇಂದಿನ ಸವಾಲು ಎಂದರೆ ಜಗತ್ತಿನಲ್ಲಿರುವ ಯಾರಾದರೂ ಇದನ್ನು ಪರಿಗಣಿಸುತ್ತಾರೋ ಅಥವಾ ಇಲ್ಲವೋ ಎಂಬುದರದಲ್ಲ. ಇಂದು ಪ್ರಸ್ತುತವಾದುದೇನೆಂದರೆ ಬಹಳಷ್ಟು ವಿಶ್ವಾಸದಿಂದ ಮತ್ತು ಭರವಸೆಯಿಂದ ಜಗತ್ತು ಭಾರತದತ್ತ ನೋಡುತ್ತಿರುವಾಗ ಭಾರತವು ತನ್ನ ಪ್ರಯತ್ನಗಳಲ್ಲಿ ದುರ್ಬಲಗೊಳ್ಳಬಾರದು!.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತವು ಕೈಗೊಳ್ಳುವ ಆಂದೋಲನಗಳು ಮತ್ತು ದೃಢ ನಿರ್ಧಾರಗಳಿಗೆ ಶಕ್ತಿ ತುಂಬುವ ಬಹಳ ದೊಡ್ಡ ಜವಾಬ್ದಾರಿ ನಮ್ಮ ದೇಶದ ಯುವಜನತೆಯ ಮೇಲಿದೆ. ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಗಳಲ್ಲಿರುವ ಬಹುತೇಕ ಯುವಕರು ಮತ್ತು ಯುವತಿಯರು ಶತಮಾನದಲ್ಲಿ ಜನಿಸಿದವರು. ನೀವು 2047 ರವರೆಗೆ ಭಾರತವನ್ನು ಬಹಳ ಹೆಮ್ಮೆಯಿಂದ ಮುಂದೆ ಕೊಂಡೊಯ್ಯಬೇಕು. ಆದುದರಿಂದ ನಿಮ್ಮ ಪ್ರಯತ್ನಗಳ ಮತ್ತು ನಿರ್ಧಾರಗಳ ಈಡೇರಿಕೆ ಭಾರತದ ಸಾಧನೆ ಮತ್ತು ಯಶಸ್ಸು ಆಗಿರುತ್ತದೆ. ಅಲ್ಲಿ ದೇಶಾಭಿಮಾನಕ್ಕಿಂತ ದೊಡ್ಡ ಭಕ್ತಿ, ಅರ್ಪಣಾಭಾವ ಇನ್ನೊಂದಿಲ್ಲ ಮತ್ತು ರಾಷ್ಟ್ರೀಯ ಹಿತಾಸಕ್ತಿಗಿಂತ ದೊಡ್ಡ ಹಿತಾಸಕ್ತಿ ಬೇರೆ ಇಲ್ಲ. ದೇಶವನ್ನು ಅತ್ಯುಚ್ಛ ಸ್ಥಾನದಲ್ಲಿಟ್ಟುಕೊಂಡು ನೀವು ಏನು ಸಾಧನೆ ಮಾಡುತ್ತೀರೋ ಅದು ದೇಶದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಇಂದು ನಮ್ಮ ಯುವ ಜನತೆ, ವಿಶ್ವದ ಮೂರು ಅತಿ ದೊಡ್ಡ ನವೋದ್ಯಮಗಳಲ್ಲಿ ಭಾರತವನ್ನು ಒಂದಾಗಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನಲ್ಲಿ ಯೂನಿಕಾರ್ನ್ ಗಳ ಸಂಖ್ಯೆ ಭಾರತದ ಯುವ ಜನತೆಯ ಶಕ್ತಿಗೆ ನಿದರ್ಶನವಾಗಿದೆ. ನೀವು ಕಲ್ಪಿಸಿಕೊಳ್ಳಬಲ್ಲಿರಾ, 50 ಕ್ಕೂ ಅಧಿಕ ಯೂನಿಕಾರ್ನ್ ಗಳು ಕೊರೊನಾ ಅವಧಿಯಲ್ಲಿಯೇ ಅಸ್ತಿತ್ವಕ್ಕೆ ಬಂದಿವೆ. ಮತ್ತು ಪ್ರತಿಯೊಂದು ಯೂನಿಕಾರ್ನ್ ಗಳ ಬಂಡವಾಳ 7,500 ಕೋ.ರೂ.ಗಳಿಗೂ ಅಧಿಕ. ಸಾಮರ್ಥ್ಯ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸುತ್ತದೆ. ಮತ್ತು ನಿಮಗಿದು ಗೊತ್ತೇ, ಇದರಲ್ಲಿ ಬಹಳ ಮುಖ್ಯವಾದ ಸಂಗತಿ ಏನೆಂಬುದು?. ನವೋದ್ಯಮಗಳು ದೇಶದ ಒಂದಲ್ಲ ಒಂದು ಆಗತ್ಯವನ್ನು ಈಡೇರಿಸುತ್ತಿವೆ. ಕೆಲವರು ಕೃಷಿಯಲ್ಲಿ ಅನ್ವೇಷಣೆಗಳನ್ನು ಮಾಡುತ್ತಿದ್ದಾರೆ; ಇನ್ನು ಕೆಲವರು ಪೂರೈಕೆ ಸರಪಳಿಯನ್ನು ಸುಧಾರಿಸಲು ತೊಡಗಿದ್ದಾರೆ. ಇನ್ನು ಕೆಲವರು ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತರಲು ಕಾರ್ಯ ನಿರತರಾಗಿದ್ದಾರೆ. ಅವರೆಲ್ಲರೂ ದೇಶಕ್ಕಾಗಿ ಏನನ್ನಾದರೂ ಮಾಡುವ ಹಟ ತೊಟ್ಟಿದ್ದಾರೆ.

ಸ್ನೇಹಿತರೇ,

ಯಾವುದೇ ದೇಶದ ಯುವ ಜನತೆ ದೇಶ ಮೊದಲು ಎಂಬ ಚಿಂತನೆಯೊಂದಿಗೆ ಮುನ್ನಡೆ ಸಾಧಿಸಲು ಆರಂಭ ಮಾಡಿದರೆ ಜಗತ್ತಿನ ಯಾವ ಶಕ್ತಿಯೂ ದೇಶವನ್ನು ತಡೆದು ನಿಲ್ಲಿಸಲಾರದು. ಇಂದು ಕ್ರೀಡಾ ಕ್ಷೇತ್ರದಲ್ಲಿ ಭಾರತದ ಸಾಧನೆ ಇದಕ್ಕೊಂದು ಬಹಳ ದೊಡ್ಡ ಉದಾಹರಣೆ. ಆಟಗಾರರ ಪ್ರತಿಭೆ, ದೃಢ ನಿರ್ಧಾರ, ಮತ್ತು ಕಠಿಣ ದುಡಿಮೆಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಆದರೆ ಈಗ 130 ಕೋಟಿ ದೇಶವಾಸಿಗಳು ಆತನ ಸೋಲು ಅಥವಾ ಗೆಲುವಿನಲ್ಲಿ ಪಾಲ್ಗೊಳ್ಳುತ್ತಾರೆ. ಆಟಗಾರರು ಎದುರಾಳಿಯನ್ನು ಎದುರಿಸುವಾಗ  ಭಾರತದ ಯುವಜನತೆಯ ಹಿಂದೆ ಇಡೀ ದೇಶವೇ ಒಗ್ಗಟ್ಟಾಗಿ ನಿಂತಿರುತ್ತದೆಆಟಗಾರರಲ್ಲಿಯೂ ತಾವು ದೇಶಕ್ಕಾಗಿ ಆಡುತ್ತಿದ್ದೇವೆ ಹೊರತು ಪ್ರಶಸ್ತಿಗಾಗಿ ಅಲ್ಲ ಎಂಬ ಬಲಿಷ್ಟವಾದಂತಹ ಭಾವನೆ ಇರುತ್ತದೆ. ಯುವಜನತೆ ಎಂದರೆ ದೇಶದ ಭವಿಷ್ಯದ ತಲೆಮಾರು, ಸ್ಪೂರ್ತಿಯೊಂದಿಗೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರೆಯಬೇಕು.

ಸ್ನೇಹಿತರೇ,

ಕೊರೊನಾ ಕಾಲಘಟ್ಟವು ನಮ್ಮ ಶಿಸ್ತು ಮತ್ತು ಭಾರತೀಯರ ಸಾಮಾಜಿಕ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯ ಮಾಡಿತು.ಕೊರೊನಾ ವಿರುದ್ಧ ಹೋರಾಟಕ್ಕಾಗಿಜನತಾ ಕರ್ಫ್ಯುಜಾರಿ ಮಾಡಿದಾಗ ಇಡೀ ದೇಶ ಒಂದಾಗಿ ನಿಂತಾಗ ಇಡೀ ಜಗತ್ತೇ ಬೆರಗಾಗಿತ್ತು. ಕೆಲವು ಜನರು ನಮ್ಮ ಸಮಾಜಕ್ಕೆ ಶಾಪ ಹಾಕುತ್ತಾರೆ. ಆದರೆ ಅದೇ ಸಮಾಜ ದೇಶದ ವಿಷಯ ಬಂದಾಗ ಇತರ ಯಾವುದೂ ಮಹತ್ವದ್ದಲ್ಲ ಎಂಬುದನ್ನು ತೋರಿಸಿಕೊಟ್ಟಿತು. ನಮ್ಮ ದೇಶಕ್ಕೆ ಸರಿಯಾದ ದಿಕ್ಕು ತೋರಿಸಿದರೆ ಮತ್ತು ಪಾಠಗಳನ್ನು ಹೇಳಿಕೊಟ್ಟರೆ ನಮ್ಮ ದೇಶ ಬಹಳಷ್ಟನ್ನು ಮಾಡಬಲ್ಲದು ಎಂಬುದಕ್ಕೆ ಇದು ಉದಾಹರಣೆ

ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಯುವಜನರು ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಸೇವೆಯ ಮೂಲಕ ಪ್ರತಿಯೊಬ್ಬರ ಹೃದಯವನ್ನು ಗೆದ್ದಿದ್ದಾರೆ. ಈಗ ಎನ್.ಸಿ.ಸಿ.ಯಲ್ಲಿ ನಿಮ್ಮ ತರಬೇತಿ ನೀವು ಸಮವಸ್ತ್ರದಲ್ಲಿರುವಾಗಲಷ್ಟೇ ಸೀಮಿತವಾದುದಲ್ಲ ಎಂಬುದನ್ನು ಖಾತ್ರಿಪಡಿಸುವ ಜವಾಬ್ದಾರಿ ಕೂಡಾ ನಿಮ್ಮ ಮೇಲಿದೆ. ಅದು ನಿಮ್ಮ ಜೀವನದ ಅವಿಭಾಜ್ಯ ಭಾಗವಾಗಿರಬೇಕು ಮತ್ತು ಕಾಲ ಕಾಲಕ್ಕೆ ಅದು ಪ್ರತಿಫಲಿಸುತ್ತಿರಬೇಕು. ಕೆಡೆಟ್ ಆಗಿ ನೀವು ಹೇಗೆ ಸಮಾಜಕ್ಕೆ ಪ್ರಯೋಜನಕಾರಿಯಾಗುತ್ತೀರಿ ಎಂಬುದನ್ನು ನೀವು ತೋರಿಸಿ ಕೊಡಬೇಕು.ಉದಾಹರಣೆಗೆ, ನೀವು ಹಳ್ಳಿಯಲ್ಲಿ ವಾಸಿಸುತ್ತಿರುವಿರಾದರೆ ನೀವು ಯಾವುದಾದರೂ ವಿದ್ಯಾರ್ಥಿ ಶಾಲೆ ತೊರೆದಿದ್ದಾನೆಯೇ ಎಂಬುದನ್ನು ಪತ್ತೆ ಹಚ್ಚಬಹುದು. ನೀವು ಆತನನ್ನು ಭೇಟಿಯಾಗಿ ಮತ್ತು ಆತನ ಸಮಸ್ಯೆಗಳನ್ನು ತಿಳಿದುಕೊಂಡರೆ ಮತ್ತು ಆತನಿಗೆ ಕಲಿಕೆಯನ್ನು ಮತ್ತೆ ಕೈಗೊಳ್ಳುವ ನಿಟ್ಟಿನಲ್ಲಿ  ಸಹಾಯ ಮಾಡುವಂತಹ ಪ್ರಯತ್ನಗಳನ್ನು ಮಾಡಿದರೆ ಎನ್.ಸಿ.ಸಿ. ಸ್ಪೂರ್ತಿಯನ್ನು ನಿಮಗೆ ಇನ್ನಷ್ಟು ಮುಂದೆ ಕೊಂಡೊಯ್ಯಲು ಸಾಧ್ಯವಾಗುತ್ತದೆ.

ಗ್ರಾಮಗಳಲ್ಲಿ, ನಗರಗಳಲ್ಲಿ, ಪಟ್ಟಣಗಳಲ್ಲಿ ಸ್ವಚ್ಛತೆಯ ಆಂದೋಲನವನ್ನು ಉತ್ತೇಜಿಸಲು  ನೀವು ನಿಮ್ಮ ಸ್ಥಳೀಯ ಪ್ರದೇಶಗಳಲ್ಲಿ ವಿವಿಧ ತಂಡಗಳನ್ನು ರೂಪಿಸಬಹುದು, ಯಾಕೆಂದರೆ ನೀವು ಇಲ್ಲಿ ಕಲಿತ ನಿಮ್ಮ ನಾಯಕತ್ವದ ಗುಣಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳಬೇಕು. ಕಡಲ ಕಿನಾರೆಗಳನ್ನು ಸ್ವಚ್ಛ ಮಾಡುವ ನಿಮ್ಮಪುನೀತ ಸಾಗರ ಅಭಿಯಾನಬಹಳಷ್ಟು ಶ್ಲಾಘನೆಗಳನ್ನು ಗಳಿಸಿದೆ, ಅದನ್ನು ಎನ್.ಸಿ.ಸಿ. ಯಲ್ಲಿ  ನಿಮ್ಮ ಅವಧಿ ಮುಗಿದ ಬಳಿಕವೂ ಮುಂದುವರೆಸಬೇಕು. ಅದೇ ರೀತಿಮಳೆಯನ್ನು ಹಿಡಿಯಿರಿಜನಾಂದೋಲನ ದೇಶದಲ್ಲಿ ಜಾರಿಯಲ್ಲಿದೆ. ನೀವು ಮಳೆ ನೀರನ್ನು ಹೇಗೆ ಉಳಿಸಬೇಕು ಮತ್ತು ನಮ್ಮ ಕೆರೆ ಕಟ್ಟೆಗಳನ್ನು ಹೇಗೆ ಸ್ವಚ್ಛವಾಗಿಡಬೇಕು ಎಂಬುದರ ಬಗ್ಗೆ ಜಾಗೃತಿಯನ್ನು ಮೂಡಿಸಬಹುದು.

ಸ್ನೇಹಿತರೇ,

ಸ್ವಾತಂತ್ರ್ಯ ಹೋರಾಟದಲ್ಲಿ, ಮಹಾತ್ಮಾ ಗಾಂಧಿ ಅವರು ಇಂತಹ ಪ್ರವೃತ್ತಿಗಳ ಮೂಲಕ   ದೇಶದ ಜನಸಾಮಾನ್ಯರ ಜೊತೆಯಲ್ಲಿ ತಮ್ಮನ್ನು ಜೋಡಿಸಿಕೊಂಡರು. ಇದು ಜನರಿಗೆ ಜೀವನೋಪಾಯವನ್ನು ಒದಗಿಸಿತು. ಮತ್ತು ಇದೇ ವೇಳೆ ದೇಶಪ್ರೇಮದ ಆಂದೋಲನ ಕೂಡಾ ವೇಗ ಪಡೆದುಕೊಂಡಿತು. ಕೆಲವರು ಚರಕದಲ್ಲಿ  ನೂಲು ತೆಗೆಯಲು ಆರಂಭ ಮಾಡಿದಂತೆ, ಕೆಲವರು ವಯಸ್ಕ ಶಿಕ್ಷಣದಲ್ಲಿ, ಪಶುಪಾಲನೆಯಲ್ಲಿ ಮತ್ತು ನೈರ್ಮಲ್ಯದಲ್ಲಿ ತೊಡಗಿಕೊಂಡಂತೆ, ಗಾಂಧೀಜಿ ಅವರು ಎಲ್ಲ ಸಂಗತಿಗಳನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಜೋಡಿಸಿಕೊಂಡರು. ಅದೇ ರೀತಿ ನಾವು ನಮ್ಮ ಯೋಗ್ಯತೆ ಮತ್ತು ಕ್ರಮಗಳನ್ನು ಸ್ವಾತಂತ್ರ್ಯದ ಪುಣ್ಯಕರ ಕಾಲಘಟ್ಟದಲ್ಲಿ ಮುಂದಿನ 25 ವರ್ಷಗಳ ದೇಶದ ಅಭಿವೃದ್ಧಿ, ನಿರೀಕ್ಷೆಗಳು ಮತ್ತು ಆಶೋತ್ತರಗಳ ಜೊತೆ ಸಂಯೋಜಿಸಿಕೊಳ್ಳಬೇಕು. ಇಂದು ದೇಶವುಆತ್ಮ ನಿರ್ಭರ ಭಾರತ್ನಿರ್ಧಾರದೊಂದಿಗೆ ಮುನ್ನಡೆಯುತ್ತಿದೆ. ಎಲ್ಲಾ ಯುವಜನತೆವೋಕಲ್ ಫಾರ್ ಲೋಕಲ್ಆಂದೋಲನದಲ್ಲಿ ಪ್ರಮುಖವಾದಂತಹ ಪಾತ್ರವನ್ನು ನಿಭಾಯಿಸಬಹುದು.

ಭಾರತದ ಯುವ ಜನತೆ ಭಾರತೀಯರ ಶ್ರಮ ಮತ್ತು ಬೆವರನ್ನು ಹೊಂದಿರುವ ಉತ್ಪನ್ನವನ್ನು ಮಾತ್ರವೇ ಬಳಸುವ ನಿರ್ಧಾರ ತಳೆದರೆ ಆಗ ಭಾರತದ ಅದೃಷ್ಟ ಬಹಳ ತ್ವರಿತವಾಗಿ ಬದಲಾಗುತ್ತದೆ. “ವೋಕಲ್ ಫಾರ್ ಲೋಕಲ್ಮಂತ್ರವು ದೇಶದ ಯುವಜನತೆಯ ಜೊತೆ ನೇರ ಸಂಬಂಧ ಉಳ್ಳದ್ದಾಗಿದೆ. ಜನರು ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿದಾಗ ಸ್ಥಳೀಯ ಉತ್ಪಾದನೆ ಹೆಚ್ಚುತ್ತದೆ. ಮತ್ತು ಅದರ ಗುಣಮಟ್ಟವೂ ಹೆಚ್ಚುತ್ತದೆ. ಸ್ಥಳೀಯ ಉತ್ಪಾದನೆ ಹೆಚ್ಚಿದಾಗ ಸ್ಥಳೀಯ ಮಟ್ಟದಲ್ಲಿ ಹೊಸ ಉದ್ಯೋಗಾವಕಾಶಗಳು ಕೂಡಾ ಹೆಚ್ಚುತ್ತವೆ.

ಸ್ನೇಹಿತರೇ,  

ಇದು ತಂತ್ರಜ್ಞಾನ ಮತ್ತು ಅನ್ವೇಷಣೆಗಳ ಕಾಲ. ಇದು ಡಿಜಿಟಲ್ ಕ್ರಾಂತಿಯ ಕಾಲ. ಕಾಲಾವಧಿಯಲ್ಲಿ ಹೀರೋ ಎನ್ನುವವರು ಯಾರಾದರೂ ಇದ್ದರೆ ಅದು ನೀವು, ನನ್ನ ಯುವ ಸಂಗಾತಿಗಳು. ಆದುದರಿಂದ, ಪರಿವರ್ತನೆಯ ಕಾಲದಲ್ಲಿ, ಕೆಡೆಟ್ ಆಗಿ ನಿಮಗೆ ಹಲವಾರು ಹೊಸ ಜವಾಬ್ದಾರಿಗಳಿವೆ. ನೀವು ಭಾರತವನ್ನು ಕ್ರಾಂತಿಯಲ್ಲಿ ನಾಯಕನನ್ನಾಗಿಸಲು ದೇಶದ ನೇತೃತ್ವ ವಹಿಸಿಕೊಳ್ಳಬೇಕು ಮತ್ತು ಇದೇ ವೇಳೆ ಅದರಿಂದುಂಟಾಗುವ ಸವಾಲುಗಳನ್ನು ಎದುರಿಸಬೇಕು. ಇಂದು ಒಂದೆಡೆ ಮಾಹಿತಿ ಮತ್ತು ಡಿಜಿಟಲ್ ತಂತ್ರಜ್ಞಾನದಲ್ಲಿ ಹಲವಾರು ಅವಕಾಶಗಳು, ಸಾಧ್ಯತೆಗಳು ಇವೆ; ಇನ್ನೊಂದೆಡೆ ಅಲ್ಲಿ ತಪ್ಪು ಮಾಹಿತಿಯ ಅಪಾಯಗಳೂ ಇವೆ. ನಮ್ಮ ದೇಶದ ಜನಸಾಮಾನ್ಯರು ಯಾವುದೇ ಗಾಳಿ ಸುದ್ದಿಗಳಿಗೆ, ವದಂತಿಗಳಿಗೆ ಬಲಿಪಶುವಾಗದಂತೆ ಖಾತ್ರಿಪಡಿಸುವುದು ಅವಶ್ಯ. ನಿಟ್ಟಿನಲ್ಲಿ ಎನ್.ಸಿ.ಸಿ. ಕೆಡೆಟ್ ಗಳು ಜಾಗೃತಿ ಆಂದೋಲನವನ್ನು ಕೈಗೊಳ್ಳಬಹುದು. ಇಂದಿನ ಯುವಜನತೆ ಎದುರಿಸುತ್ತಿರುವ  ಇನ್ನೊಂದು ಸವಾಲೆಂದರೆ  ವರ್ಚುವಲ್ ಮತ್ತು ನೈಜ ಜೀವನದಲ್ಲಿ ಸೌಹಾರ್ದತೆ ಹದಗೆಡುತ್ತಿರುವುದು!. ಎನ್.ಸಿ.ಸಿ.ಯು ಒಗ್ಗಟ್ಟು ಪ್ರತಿಪಾದಿಸಲು  ತನ್ನ ಕೆಡೆಟ್ ಗಳಿಗಾಗಿ ತರಬೇತಿ ವಿಧಾನಗಳನ್ನು ರೂಪಿಸಬಹುದು, ಅದು ಇತರರಿಗೂ ಸಹಕಾರಿಯಾಗಬಹುದು

ಸ್ನೇಹಿತರೇ,

ನಾನು ನಿಮ್ಮೆದುರು ಇನ್ನೊಂದು ವಿಷಯವನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಅದು ಮಾದಕ ದ್ರವ್ಯಗಳು ಮತ್ತು ಅಮಲು ಪದಾರ್ಥಗಳು. ಮಾದಕ ದ್ರವ್ಯ ವ್ಯಸನದಿಂದ ನಮ್ಮ ಯುವ ತಲೆಮಾರಿಗೆ ಆಗುತ್ತಿರುವ ಹಾನಿಯ ಬಗ್ಗೆ ನಿಮಗೆಲ್ಲ ತಿಳಿದಿದೆ.ಹಾಗಿದ್ದರೂ ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಇರುವ ಶಾಲೆಗಳು ಮತ್ತು ಕಾಲೇಜುಗಳಿಗೆ ಮಾದಕ ದ್ರವ್ಯಗಳು ಹೇಗೆ ತಲುಪುತ್ತವೆ. ಓರ್ವ ಕೆಡೆಟ್ ಆಗಿ ನೀವು ಮಾದಕ ದ್ರವ್ಯಗಳಿಂದ ದೂರ ಇರಬೇಕು ಮತ್ತು ಇದೇ ವೇಳೆ ನಿಮ್ಮ ಕ್ಯಾಂಪಸ್ಸನ್ನು ಮಾದಕ ದ್ರವ್ಯಗಳಿಂದ ದೂರವಿಡಬೇಕು. ಎನ್.ಸಿ.ಸಿ. ಮತ್ತು ಎನ್.ಎಸ್.ಎಸ್. ಗಳಲ್ಲಿ ಇಲ್ಲದ ನಿಮ್ಮ ಸ್ನೇಹಿತರಿಗೆ ಕೆಟ್ಟ ಹವ್ಯಾಸವನ್ನು ತೊರೆಯಲು ನೆರವು ನೀಡಿ.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದೆ, ದೇಶದಲ್ಲಿ ಇಂತಹ ಸಾಮೂಹಿಕ ಪ್ರಯತ್ನಗಳಿಗೆ ಹೊಸ ಶಕ್ತಿಯನ್ನು ನೀಡಲು ಪೋರ್ಟಲೊಂದನ್ನು ಆರಂಭಿಸಲಾಯಿತು. ಇದು ಸೆಲ್ಫ್ ಪೋರ್ ಸೊಸೈಟಿ ಪೋರ್ಟಲ್. ವಿವಿಧ ಜನರು, ಕಂಪೆನಿಗಳು ಮತ್ತು ಸಂಘಟನೆಗಳು ಪೋರ್ಟಲಿನ ಭಾಗವಾಗಿವೆ ಮತ್ತು ಅವುಗಳು ಸಮಾಜ ಸೇವೆಯ ಕ್ಷೇತ್ರದಲ್ಲಿ ಸಹಕಾರ ಮಾಡುತ್ತವೆ. ವಿಶೇಷವಾಗಿ ಭಾರತದ .ಟಿ. ಮತ್ತು ತಂತ್ರಜ್ಞಾನ ಕಂಪೆನಿಗಳು ನಿಟ್ಟಿನಲ್ಲಿ ಬಹಳ ದೊಡ್ಡ ಕೆಲಸ ಮಾಡಿವೆ. ಇಂದು 7,000 ಕ್ಕೂ ಮಿಕ್ಕಿ ಸಂಘಟನೆಗಳು ಮತ್ತು 2.25 ಲಕ್ಷಕ್ಕೂ ಅಧಿಕ ಜನರು ಇದರೊಂದಿಗೆ ಕೈಜೋಡಿಸಿ ಸಮಾಜ ಸೇವೆ ಮಾಡುತ್ತಿದ್ದಾರೆ. ಎನ್.ಸಿ.ಸಿ. –ಎನ್.ಎಸ್.ಎಸ್.ಗಳ ಲಕ್ಷಾಂತರ ಯುವ ಜನತೆ ಫೋರ್ಟಲಿಗೆ ಸೇರಬೇಕು.

ಸಹೋದರರೇ ಮತ್ತು ಸಹೋದರಿಯರೇ,

ನಾವು ಕೆಡೆಟ್ ಸ್ಪೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯುವಂತೆ ಕೆಡೆಟ್ ಗಳನ್ನು ಬೆಳೆಸಬೇಕು. ಸ್ಪೂರ್ತಿ, ಉತ್ಸಾಹ ಜನಸಮೂಹಕ್ಕೆ ಮತ್ತು ಗ್ರಾಮಗಳಿಗೆ ತಲುಪುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಮತ್ತು ಎನ್.ಸಿ.ಸಿ. ಹಿರಿಯ ಕೆಡೆಟ್ ಗಳಿಗೆ ಇದರಲ್ಲಿ ಪ್ರಮುಖವಾದಂತಹ ಪಾತ್ರ ವಹಿಸುವ ಹೊಣೆಗಾರಿಕೆ ಇದೆ ಎಂದು ನಾನು ನಂಬುತ್ತೇನೆ. ಎನ್.ಸಿ.ಸಿ. ಅಲುಮಿನಿ ಅಸೋಸಿಯೇಷನ್ ಉಪಕ್ರಮದಲ್ಲಿ ಸೇತುವೆಯ ಮತ್ತು ಜಾಲದ ಪಾತ್ರವನ್ನು ನಿರ್ವಹಿಸಬಲ್ಲುದು. ನಾನು ಸಂಘಟನೆಯ ಸದಸ್ಯನಾಗಿರುವುದರಿಂದ ದೇಶಾದ್ಯಂತ ಮತ್ತು ವಿದೇಶಗಳಲ್ಲಿಯೂ ಹರಡಿರುವ ಎಲ್ಲಾ ಹಿರಿಯ ಸಹೋದ್ಯೋಗಿಗಳಿಗೆ ಆಂದೋಲನವನ್ನು ವಿಸ್ತರಿಸುವಲ್ಲಿ ಸಕ್ರಿಯ ಪಾತ್ರವಹಿಸಬೇಕು ಎಂದು ಮನವಿ ಮಾಡುತ್ತೇನೆ. ಒಮ್ಮೆ ಕೆಡೆಟ್ ಆದರೆ ಆವರು ಸದಾ ಕೆಡೆಟ್ ಆಗಿರುತ್ತಾರೆ!. ನಾವು ಎಲ್ಲೇ ಇರಲಿ, ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರಲಿ, ನಮ್ಮ ಅನುಭವಗಳು ದೇಶಕ್ಕೆ ಮತ್ತು ಹೊಸ ತಲೆಮಾರಿಗೆ ಬಹಳ ಪ್ರಯೋಜನಕಾರಿಯಾಗಬಲ್ಲವು. ಎನ್.ಸಿ.ಸಿ.ಯನ್ನು ಒಂದು ಸಂಘಟನೆಯಾಗಿ ಇನ್ನಷ್ಟು ಉತ್ತಮಪಡಿಸುವಲ್ಲಿ ನಮ್ಮ ಅನುಭವಗಳು ನೆರವಾಗಬಲ್ಲವು. ಇದು ಎನ್.ಸಿ.ಸಿ. ಸ್ಪೂರ್ತಿಯನ್ನು, ಉತ್ಸಾಹವನ್ನು ಮತ್ತು ಸಮಾಜದಲ್ಲಿ ಕರ್ತವ್ಯದ ಭಾವನೆಯನ್ನು ಹರಡಲಿದೆ

ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಮ್ಮ ಪ್ರಯತ್ನಗಳು ನವ ಭಾರತ ನಿರ್ಮಾಣದಲ್ಲಿ ಶಕ್ತಿಯಾಗಿ ಕೆಲಸ ಮಾಡುತ್ತವೆ, ಮತ್ತು ಎನ್.ಸಿ.ಸಿ. ಕೆಡೆಟ್ ಗಳು ನಿಟ್ಟಿನಲ್ಲಿ ಬಹಳ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತಾರೆ ಎಂಬ ಬಗ್ಗೆ ನನಗೆ ಖಚಿತವಾದ ವಿಶ್ವಾಸವಿದೆ. ನಂಬಿಕೆಯೊಂದಿಗೆ ನಿಮ್ಮೆಲ್ಲರಿಗೂ ಬಹಳ ಧನ್ಯವಾದಗಳು!.

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ವಂದೇ ಮಾತರಂ, ವಂದೇ ಮಾತರಂ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1793781) Visitor Counter : 177