ಪ್ರಧಾನ ಮಂತ್ರಿಯವರ ಕಛೇರಿ
28 ಡಿಸೆಂಬರ್ 2021ರಂದು ಮಂಗಳವಾರ ಕಾನ್ಪುರದ ಐಐಟಿಯ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ
ವಿದ್ಯಾರ್ಥಿಗಳಿಗೆ ಪ್ರಧಾನಮಂತ್ರಿಯವರ ಭಾಷಣಕ್ಕೆ ವಿಚಾರಗಳನ್ನು ಹಂಚಿಕೊಳ್ಳಲು ಐಐಟಿ-ಕಾನ್ಪುರದ ವಿದ್ಯಾರ್ಥಿಗಳು, ಇತರ ಐಐಟಿಗಳು ಮತ್ತು ಐಐಟಿ ಹಳೆಯ ವಿದ್ಯಾರ್ಥಿ ಸಮುದಾಯಕ್ಕೆ ಆಹ್ವಾನ
Posted On:
22 DEC 2021 10:17AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 28ನೇ ಡಿಸೆಂಬರ್ 2021 ರಂದು ಮಂಗಳವಾರ ಐಐಟಿ, ಕಾನ್ಪುರದ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶ್ರೀ ಮೋದಿ ಅವರು ತಮ್ಮ ಭಾಷಣಕ್ಕಾಗಿ ವಿಚಾರಗಳನ್ನು ಹಂಚಿಕೊಳ್ಳಲು ಐಐಟಿ-ಕಾನ್ಪುರ, ಇತರ ಐಐಟಿಗಳು ಮತ್ತು ಜಾಗತಿಕವಾಗಿ ವ್ಯಾಪಿಸಿರುವ ಐಐಟಿ ಹಳೆಯ ವಿದ್ಯಾರ್ಥಿಗಳ ಸಮೂಹಕ್ಕೆ ಕರೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ,
"ಈ ತಿಂಗಳ 28 ರಂದು @IITKanpur ನಲ್ಲಿ ಘಟಿಕೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲು ನಾನು ಎದುರು ನೋಡುತ್ತಿದ್ದೇನೆ. ಇದೊಂದು ಅದ್ಭುತವಾದ ಶಿಕ್ಷಣ ಸಂಸ್ಥೆಯಾಗಿದ್ದು, ವಿಜ್ಞಾನ ಮತ್ತು ನಾವೀನ್ಯತೆಗೆ ಕೊಡುಗೆಗಳನ್ನು ನೀಡಿದೆ.
ಈ ಬಗ್ಗೆ ಸಲಹೆಗಳನ್ನು ಹಂಚಿಕೊಳ್ಳಲು ನಾನು ಎಲ್ಲರನ್ನು ಆಹ್ವಾನಿಸುತ್ತೇನೆ." ಎಂದಿದ್ದಾರೆ.
***
(Release ID: 1784139)
Visitor Counter : 238
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Malayalam