ಪ್ರಧಾನ ಮಂತ್ರಿಯವರ ಕಛೇರಿ
2021ರ ಡಿಸೆಂಬರ್ 26ರಂದು ಪ್ರಸಾರವಾಗಲಿರುವ ʻಮನ್ ಕಿ ಬಾತ್ʼಗಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಪ್ರಧಾನಿ ಆಹ್ವಾನ
Posted On:
18 DEC 2021 10:14AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2021ರ ಡಿಸೆಂಬರ್ 26ರ ಭಾನುವಾರ ಪ್ರಸಾರವಾಗಲಿರುವ `ಮನ್ ಕಿ ಬಾತ್’ ಕಾರ್ಯಕ್ರಮಕ್ಕಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ನಾಗರಿಕರಿಗೆ ಕರೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ,
"26ರಂದು ಪ್ರಸಾರವಾಗಲಿರುವ ಈ ತಿಂಗಳ ʻಮನ್ ಕಿ ಬಾತ್ʼ#MannKiBaat ಕಾರ್ಯಕ್ರಮಕ್ಕಾಗಿ ನಾನು ಹಲವಾರು ಮಾಹಿತಿಗಳನ್ನು ಸ್ವೀಕರಿಸುತ್ತಿದ್ದೇನೆ, ಈ ಮಾಹಿತಿಗಳು 2021ರಲ್ಲಿ ನಾನು ಸ್ವೀಕರಿಸುವ ಕೊನೆಯ ಮಾಹಿತಿಗಳಾಗಲಿವೆ. ಇವುಗಳಲ್ಲಿ ಅನೇಕವು ವಿಭಿನ್ನ ವಲಯಗಳಿಗೆ ಸಂಬಂಧಿಸಿವೆ ಮತ್ತು ತಳಮಟ್ಟದ ಬದಲಾವಣೆಗಳನ್ನು ತರಲು ಶ್ರಮಿಸುತ್ತಿರುವ ಹಲವಾರು ಜನರ ಜೀವನ ಪ್ರಯಾಣದ ಸಂಭ್ರಮವನ್ನು ಒಳಗೊಂಡಿವೆ. ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಲೇ ಇರಿ." ಎಂದಿದ್ದಾರೆ.
***
(Release ID: 1783024)
Visitor Counter : 137
Read this release in:
Tamil
,
Telugu
,
Malayalam
,
Assamese
,
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Odia