ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪೂರ್ವಾಂಚಲ್ ಎಕ್ಸಪ್ರೆಸ್ ವೇ ಉದ್ಘಾಟಿಸಿದ ಪ್ರಧಾನಮಂತ್ರಿ


ಸುಲ್ತಾನ್ ಪುರ್ ಜಿಲ್ಲೆಯ  ಎಕ್ಸ್ ಪ್ರೆಸ್ ವೇ ಮೇಲೆ ನಿರ್ಮಿಸಿರುವ 3.2 ಅಡಿ ಉದ್ದದ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾದ ಪ್ರಧಾನಿ

“ಈ ಎಕ್ಸ್ ಪ್ರೆಸ್ ವೇ ಉತ್ತರ ಪ್ರದೇಶದಲ್ಲಿ ನಿರ್ಣಯಗಳ ಸಾಧನೆಗೆ ಸಾಕ್ಷಿ ಮತ್ತು ಯುಪಿಯ ಹೆಮ್ಮೆ ಹಾಗೂ ಅದ್ಭುತ’’

“ಇಂದು ಪೂರ್ವಾಂಚಲದ ಬೇಡಿಕೆಗಳಿಗೆ ಪಶ್ಚಿಮಕ್ಕೆ ನೀಡುತ್ತಿರುವಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆ’’

“ಈ ದಶಕದ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ಸಮೃದ್ಧ ಉತ್ತರ ಪ್ರದೇಶ ನಿರ್ಮಾಣಕ್ಕಾಗಿ ಮೂಲಸೌಕರ್ಯ ಸೃಷ್ಟಿಸಲಾಗುತ್ತಿದೆ”

“ಡಬಲ್ ಇಂಜಿನ್ ಸರ್ಕಾರ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಂಪೂರ್ಣ ಬದ್ಧ”

Posted On: 16 NOV 2021 4:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಅನ್ನು ಉದ್ಘಾಟಿಸಿದರು. ಅಲ್ಲದೆ ಅವರು ಸುಲ್ತಾನ್ ಪುರ್ ಜಿಲ್ಲೆಯಲ್ಲಿ ಎಕ್ಸ್ ಪ್ರೆಸ್ ವೇ ಮೇಲೆ ನಿರ್ಮಿಸಿರುವ 3.2 ಕಿಲೋಮೀಟರ್ ಉದ್ದದ ವಾಯುನೆಲೆಯಲ್ಲಿ ವೈಮಾನಿಕ ಪ್ರದರ್ಶನಕ್ಕೆ ಸಾಕ್ಷಿಯಾದರು.

ಸಭೆಯಲ್ಲಿ ಸೇರಿದ್ದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಮೂರು ವರ್ಷಗಳ ಹಿಂದೆ ಪೂರ್ವಾಂಚಲ ಎಕ್ಸ್ ಪ್ರೆಸ್ ವೇಗೆ ಶಂಕುಸ್ಥಾಪನೆ ನೆರವೇರಿಸುವ ವೇಳೆ ನಾನು ಅದೇ ಎಕ್ಸ್ ಪ್ರೆಸ್ ವೇ ಮೇಲೆ ಬಂದಿಳಿಯುತ್ತೇನೆಂದು ಕಲ್ಪಸಿಕೊಂಡಿರಲಿಲ್ಲ. “ ಎಕ್ಸ್ ಪ್ರೆಸ್ ವೇ ತ್ವರಿತಗತಿಯಲ್ಲಿ ಉತ್ತಮ ಭವಿಷ್ಯವನ್ನು ಮುನ್ನಡೆಸಲಿದೆ, ಎಕ್ಸ್ ಪ್ರೆಸ್ ವೇ ಉತ್ತರ ಪ್ರದೇಶದ ಅಭಿವೃದ್ಧಿಗಾಗಿ, ಎಕ್ಸ್ ಪ್ರೆಸ್ ವೇ ನವ ಉತ್ತರ ಪ್ರದೇಶದ ನಿರ್ಮಾಣಕ್ಕಾಗಿ. ಇದು ಉತ್ತರ ಪ್ರದೇಶದಲ್ಲಿ ಆಧುನಿಕ ಸೌಕರ್ಯಗಳ ಪ್ರತಿಫಲನವಾಗಿದೆ. ಎಕ್ಸ್ ಪ್ರೆಸ್ ವೇ ಉತ್ತರ ಪ್ರದೇಶದ ನಿರ್ಣಯಗಳ ಸಕಾರಕ್ಕೆ ಸಾಕ್ಷಿಯಾಗಿದೆ ಮತ್ತು ಇದು ಉತ್ತರ ಪ್ರದೇಶದ ಹೆಮ್ಮೆ ಮತ್ತು ಅದ್ಭುತವೂ ಆಗಿದೆಎಂದು ಹೇಳಿದ್ದಾರೆ.

ದೇಶದ ಒಟ್ಟಾರೆ ಅಭಿವೃದ್ಧಿಗೆ ದೇಶದ ಸಮತೋಲಿತ ಅಭಿವೃದ್ಧಿಯೂ ಕೂಡ ಅಷ್ಟೇ ಸಮಾನ ಅತ್ಯಗತ್ಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೆಲವು ಪ್ರದೇಶಗಳು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರಬಹುದು. ಕೆಲವು ಪ್ರದೇಶಗಳು ದಶಕಗಳಿಂದ ಹಿಂದೆ ಉಳಿದಿರಬಹುದು. ರೀತಿಯ ಅಸಮಾನತೆ ಯಾವುದೇ ದೇಶಕ್ಕೆ ಒಳ್ಳೆಯದಲ್ಲ ಎಂದು ಅವರು ಹೇಳಿದರು. ಭಾರತದ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿಗೆ ವಿಪುಲ ಅವಕಾಶವಿದ್ದರೂ, ದೇಶದಲ್ಲಿ ನಡೆಯತ್ತಿರುವ ಅಭಿವೃದ್ಧಿಯಲ್ಲಿ ಅವುಗಳಿಗೆ ಹೆಚ್ಚಿನ ಲಾಭ ದೊರೆತಿರಲಿಲ್ಲ ಎಂದರು. ದೀರ್ಘಾವಧಿಯವರೆಗೆ ಹಿಂದೆ ಸರ್ಕಾರಗಳನ್ನು ನಡೆಸಿದವರು ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಗಮನಹರಿಸಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಪೂರ್ವ ಉತ್ತರ ಪ್ರದೇಶದಲ್ಲಿ ಇಂದು ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲಾಗುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು

ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಕಾಮಗಾರಿ ಪೂರ್ಣಗೊಳಿಸುವಲ್ಲಿ ಶ್ರಮಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಹಾಗೂ ಅವರ ತಂಡ ಮತ್ತು ಉತ್ತರ ಪ್ರದೇಶದ ಜನತೆಯನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು. ಯೋಜನೆಗಾಗಿ ಭೂಮಿ ನೀಡಿದ ರೈತರಿಗೆ ಪ್ರಧಾನಿ ಧನ್ಯವಾದಗಳನ್ನು ಹೇಳಿದರು ಹಾಗೂ ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಇಂಜಿನಿಯರ್ ಗಳು ಮತ್ತು ಕಾರ್ಮಿಕರ ಕಾರ್ಯವನ್ನು ಶ್ಲಾಘಿಸಿದರು.

ದೇಶದ ಸಮೃದ್ಧಿಯ ಜತೆಗೆ ದೇಶದ ಭದ್ರತೆಗೂ ಕೂಡ ಅಷ್ಟೇ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅದನ್ನು ದೃಷ್ಟಿಯಲ್ಲಿಟ್ಟುಕೊಂಡು ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಮೇಲೆ ಯುದ್ಧ ವಿಮಾನಗಳ ತುರ್ತು ಭೂಸ್ಪರ್ಶಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಅವರು ಹೇಳಿದರು. ದಶಕಗಳ ಕಾಲ ದೇಶದಲ್ಲಿ ರಕ್ಷಣಾ ಮೂಲಸೌಕರ್ಯವನ್ನು ನಿರ್ಲಕ್ಷಿಸಿದವರು ವಿಮಾನಗಳ ಹಾರಾಟದ ಶಬ್ದವನ್ನು  ಕೇಳಬಹುದು ಎಂದು ಅವರು ಹೇಳಿದರು.

ಗಂಗಾ ಮಾತೆ ಮತ್ತು ಇತರ ನದಿಗಳ ಕೃಪೆ ಇದ್ದರೂ ಬಹುದೊಡ್ಡ ಪ್ರದೇಶ ಕಳೆದ ಏಳೆಂಟು ವರ್ಷಗಳ ಹಿಂದಿನವರೆಗೆ ಯಾವುದೇ ರೀತಿಯಲ್ಲೂ ಅಭಿವೃದ್ಧಿಯಾಗಿರಲಿಲ್ಲ ಎಂದು ಪ್ರಧಾನಮಂತ್ರಿ ಟೀಕಿಸಿದರು. 2014ರಲ್ಲಿ ದೇಶ ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ನಂತರ ತಾವು ಉತ್ತರ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾಗಿ ಪ್ರಧಾನಮಂತ್ರಿ ಹೇಳಿದರು. ಬಡವರಿಗೆ ಪಕ್ಕಾ ಮನೆಗಳು ಲಭ್ಯವಾಗಬೇಕು, ಬಡವರಿಗೆ ಶೌಚಾಲಯಗಳು ಲಭ್ಯವಾಗಬೇಕು, ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುವಂತಿರಬಾರದು ಮತ್ತು ಪ್ರತಿಯೊಬ್ಬರ ಮನೆಯಲ್ಲೂ ವಿದ್ಯುತ್ ಸಂಪರ್ಕವಿರಬೇಕು ಮತ್ತು ಅಂತಹ ಇನ್ನೂ ಹಲವು ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು. ಹಿಂದಿನ ಉತ್ತರ ಪ್ರದೇಶ ಸರ್ಕಾರ ಮೂಲಸೌಕರ್ಯಗಳ ಬೆಂಬಲ ನೀಡದಿರುವುದು ತಮಗೆ ತುಂಬಾ ನೋವುಂಟು ಮಾಡಿದೆ ಎಂದು ಹೇಳಿದರು. “ಉತ್ತರ ಪ್ರದೇಶದ ಜನರು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡುತ್ತಾರೆ. ಮತ್ತು ಅನ್ಯಾಯಯುತ ವರ್ತನೆಯನ್ನು ಸಹಿಸದೆ ದೂರ ಮಾಡುತ್ತಾರೆ. ಅಭಿವೃದ್ಧಿಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಹಿಂದಿನ ಸರ್ಕಾರ ತಮ್ಮ ಕುಟುಂಬದ ಹಿತಾಸಕ್ತಿಯನ್ನಷ್ಟೇ ಕಾಯ್ದುಕೊಳ್ಳುತ್ತಿತ್ತುಎಂದು ಪ್ರಧಾನಮಂತ್ರಿ ಟೀಕಿಸಿದರು.   

ಹಿಂದೆ ಉತ್ತರ ಪ್ರದೇಶದಲ್ಲಿ ಎಷ್ಟು ಬಾರಿ ವಿದ್ಯುತ್ ಸಂಪರ್ಕ ಕಡಿತವಾಗುತ್ತಿತ್ತು ಎಂಬುದನ್ನು ಯಾರು ಮರೆಯಲು ಸಾಧ್ಯ ಎಂದು ಕೇಳಿದ ಪ್ರಧಾನಮಂತ್ರಿ ಅವರು, ಉತ್ತರ ಪ್ರದೇಶದಲ್ಲಿ ಹಿಂದೆ ಯಾವ ರೀತಿಯ ಕಾನೂನು ಮತ್ತು ಸುವ್ಯವಸ್ಥೆ ಇತ್ತು ಎಂಬುದನ್ನು ಮರೆಯಲು ಸಾಧ್ಯವೇ ಮತ್ತು ಉತ್ತರ ಪ್ರದೇಶದಲ್ಲಿ ವೈದ್ಯಕೀಯ ಸೌಕರ್ಯಗಳ ಸ್ಥಿತಿಗತಿ ಹೇಗಿತ್ತೆಂಬುದನ್ನು ಮರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು. ಉತ್ತರ ಪ್ರದೇಶದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಅದು ಪೂರ್ವ ಅಥವಾ ಪಶ್ಚಿಮವಾಗಿರಬಹುದು. ಸಹಸ್ರಾರು ಗ್ರಾಮಗಳಿಗೆ ಹೊಸ ರಸ್ತೆ ಸಂಪರ್ಕಗಳನ್ನು ಕಲ್ಪಿಸಲಾಗಿದೆ ಮತ್ತು ಸಹಸ್ರಾರು ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಜನರ ಸಕ್ರಿಯ ಭಾಗಿದಾರಿಕೆಯೊಂದಿಗೆ ಉತ್ತರ ಪ್ರದೇಶದ ಅಭಿವೃದ್ಧಿಯ ಕನಸು ಇದೀಗ ಸಾಕಾರವಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರುಹೊಸ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ, ಏಮ್ಸ್ ಸ್ಥಾಪನೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಆಧುನಿಕ ಶಿಕ್ಷಣ ಸಂಸ್ಥೆಗಳು ತಲೆಎತ್ತುತ್ತಿವೆ. ಕೆಲವೇ ವಾರಗಳ ಹಿಂದೆ ಖುಷಿ ನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಾಯಿತು.  

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಹಿಂದೆ ಕೆಲವು ಭಾಗಗಳು ಬಹುತೇಕ ಸಂಪರ್ಕಗಳನ್ನು ಕಳೆದುಕೊಂಡಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ರಾಜ್ಯದ ಜನರು ನಾನಾ ಭಾಗಗಳಿಗೆ ತೆರಳುತ್ತಿದ್ದರು, ಆದರೆ ಅವರಿಗೆ ಸಂಪರ್ಕದ ಕೊರತೆ ಕಾಡುತ್ತಿತ್ತು. ಪೂರ್ವ ಉತ್ತರ ಪ್ರದೇಶದ ಜನರು ಲಖನೌ ತಲುಪುವುದೇ ಬಹು ಕಷ್ಟಕರವಾಗಿತ್ತು. “ಹಿಂದಿನ ಮುಖ್ಯಮಂತ್ರಿಗಳು ಅಭಿವೃದ್ಧಿಯನ್ನು ತಮ್ಮ ಮನೆಗಳಿಗಷ್ಟೇ ಸೀಮಿತಗೊಳಿಸಿಕೊಂಡಿದ್ದರು. ಆದರೆ ಇಂದು ಪಶ್ಚಿಮದ ಬೇಡಿಕೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಪೂರ್ವಾಂಚಲದ ಬೇಡಿಕೆಗಳಿಗೂ ನೀಡಲಾಗುತ್ತಿದೆ’’ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಎಕ್ಸ್ ಪ್ರೆಸ್ ವೇ ಲಖನೌದೊಂದಿಗೆ ಅಪಾರ ಆಕಾಂಕ್ಷೆ ಮತ್ತು  ಅಭಿವೃದ್ಧಿಯ ವಿಪುಲ ಸಾಮರ್ಥ್ಯ ಹೊಂದಿರುವ ಸಂಪರ್ಕಿಸುತ್ತದೆ. ಉತ್ತಮ ರಸ್ತೆಗಳು, ಉತ್ತಮ ಹೆದ್ದಾರಿಯನ್ನು ತಲುಪುತ್ತವೆ. ಮೂಲಕ ಅಭಿವೃದ್ಧಿಯ ವೇಗ ವರ್ಧನೆಯಾಗುತ್ತದೆ ಹಾಗೂ ಉದ್ಯೋಗಸೃಷ್ಟಿ ಕೂಡ ತ್ವರಿತವಾಗಿ ಘಟಿಸುತ್ತದೆ’’ ಎಂದು ಪ್ರಧಾನಮಂತ್ರಿ ಹೇಳಿದರು.

ಉತ್ತರ ಪ್ರದೇಶದ ಕೈಗಾರಿಕಾ ಅಭಿವೃದ್ಧಿಗೆ ಅತ್ಯುತ್ತಮ ಸಂಪರ್ಕ ಅತ್ಯಗತ್ಯ, ಉತ್ತರ ಪ್ರದೇಶದ ಪ್ರತಿಯೊಂದು ಮೂಲೆಮೂಲೆಗೂ ಸಂಪರ್ಕಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಉತ್ತರ ಪ್ರದೇಶದಲ್ಲಿ ಎಕ್ಸ್ ಪ್ರೆಸ್ ವೇ ಸಿದ್ಧವಾಗುತ್ತಿದೆ. ಕೈಗಾರಿಕಾ ಕಾರಿಡಾರ್ ಕಾಮಗಾರಿ ಕೂಡ ಆರಂಭವಾಗಿದೆ ಎಂದು ಹೇಳಿದರು. ಶೀಘ್ರವೇ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಸುತ್ತಮುತ್ತ ಹೊಸ ಕೈಗಾರಿಕೆಗಳು ಆರಂಭವಾಗಲಿವೆ. ಮುಂಬರುವ ದಿನಗಳಲ್ಲಿ ಎಕ್ಸ್ ಪ್ರೆಸ್ ವೇ ಸುತ್ತಮುತ್ತ ಇರುವ ನಗರಗಳಲ್ಲಿ ಆಹಾರ ಸಂಸ್ಕರಣೆ, ಹಾಲು, ಶೈತ್ಯಾಗಾರ, ಹಣ್ಣುಗಳ ಮತ್ತು ತರಕಾರಿಗಳ ಸಂಗ್ರಹ, ದ್ವಿದಳ ಧಾನ್ಯ, ಪಶುಸಂಗೋಪನೆ ಮತ್ತು ಇತರ ಕೃಷಿ ಸಂಬಂಧಿ ಚಟುವಟಿಕೆಗಳು ಮತ್ತು ಉತ್ಪನ್ನಗಳ ಕೆಲಸವು ತ್ವರತ ಗತಿಯಲ್ಲಿ ಹೆಚ್ಚಾಗಲಿವೆ ಎಂದರು. ಅದಕ್ಕಾಗಿ ಮಾನವ ಸಂಪನ್ಮೂಲಕ್ಕೆ ತರಬೇತಿ ನೀಡುವ ಕಾರ್ಯ ಆರಂಭವಾಗಿದೆ. ಐಟಿಐ ಹಾಗೂ ಇತರ ತರಬೇತಿ ಸಂಸ್ಥೆಗಳು ಮತ್ತು ವೈದ್ಯಕೀಯ ಸಂಸ್ಥೆಗಳು ನಗರಗಳಲ್ಲಿ ಸ್ಥಾಪನೆಯಾಗಲಿವೆ.

ಉತ್ತರ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಕೈಗಾರಿಕಾ ಕಾರಿಡಾರ್ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತರ ಪ್ರದೇಶದಲ್ಲಿನ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು ಭವಿಷ್ಯದಲ್ಲಿ ಆರ್ಥಿಕತೆ ಹೊಸ ಎತ್ತರಕ್ಕೇರಲು ಸಹಕಾರಿಯಾಗಲಿದೆ ಎಂದರು.

ಯಾವುದೇ ವ್ಯಕ್ತಿ ಮನೆಗಳನ್ನು ನಿರ್ಮಿಸಿದರೂ ಆತ ಮೊದಲು ರಸ್ತೆಯ ಬಗ್ಗೆ ಚಿಂತಿಸುತ್ತಾನೆ. ಮಣ್ಣಿನ ಪರಿಶೀಲನೆ ನಡೆಸುತ್ತಾನೆ ಮತ್ತು ಆನಂತರ ಇತರ ಅಂಶಗಳ ಬಗ್ಗೆ ಗಮನಹರಿಸುತ್ತಾನೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ಉತ್ತರ ಪ್ರದೇಶದಲ್ಲಿ ಸಂಪರ್ಕ ಬಗ್ಗೆ ಚಿಂತನೆ ಮಾಡದೆ ದೀರ್ಘಾವಧಿಯವರೆಗೆ ಅಧಿಕಾರದಲ್ಲಿದ್ದ ಸರ್ಕಾರಗಳು ಕೈಗಾರಿಕೀಕರಣದ ಕನಸುಗಳನ್ನಷ್ಟೇ ಬಿತ್ತಿದ್ದವು. ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದಾಗಿ ಇಲ್ಲಿ ಸ್ಥಾಪನೆಯಾಗಿದ್ದ ಹಲವು ಕಾರ್ಖಾನೆಗಳು ಮುಚ್ಚಲ್ಪಟ್ಟವು. ಇಂತಹ ಪರಿಸ್ಥಿತಿಯಲ್ಲಿ ದೆಹಲಿ ಮತ್ತು ಲಖನೌ ಎರಡೂ  ವಂಶಪಾರಂಪರ್ಯ ರಾಜಕಾರಣಕ್ಕೆ ತುತ್ತಾಗಿದ್ದು ದುರದೃಷ್ಟಕರ. ಹಲವು ವರ್ಷಗಳವರೆಗೆ ಕುಟುಂಬಗಳ ಸದಸ್ಯರ ಸಹಭಾಗಿತ್ವ ಉತ್ತರ ಪ್ರದೇಶದ ಆಶೋತ್ತರಗಳನ್ನು ಪುಡು ಪುಡಿ ಮಾಡಿ ಹೊಸಕಿಹಾಕಿತು ಎಂದರು.  

ಉತ್ತರ ಪ್ರದೇಶದಲ್ಲಿ,ಇಂದು ಡಬಲ್ ಇಂಜಿನ್ ಸರ್ಕಾರವಿದೆ, ಅದು ಉತ್ತರ ಪ್ರದೇಶದ ಸಾಮಾನ್ಯ ಜನರನ್ನು ತಮ್ಮ ಕುಟುಂಬದ ಸದಸ್ಯರು ಎಂದು ಪರಿಗಣಿಸಿ ಕಾರ್ಯನಿರ್ವಹಿಸುತ್ತಿದೆ. ಹೊಸ ಕೈಗಾರಿಕೆಗಳಿಗೆ ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ದಶಕದ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಸಮೃದ್ಧ ಉತ್ತರ ಪ್ರದೇಶ ನಿರ್ಮಾಣಕ್ಕಾಗಿ ಮೂಲಸೌಕರ್ಯವನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕೊರೊನಾ ಲಸಿಕೀಕರಣದಲ್ಲಿ ಅತ್ಯುತ್ತಮ ಕಾರ್ಯ ನಿರ್ವಹಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು, ಉತ್ತರ ಪ್ರದೇಶ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಭಾರತದಲ್ಲಿ ತಯಾರಿಸಲಾದ ಲಸಿಕೆಗಳ ವಿರುದ್ಧ ಯಾವುದೇ ರೀತಿಯ ರಾಜಕೀಯ ಪ್ರಚಾರಕ್ಕೆ ಅವಕಾಶ ನೀಡದ ಉತ್ತರ ಪ್ರದೇಶ ಸರ್ಕಾರದ ಜನರನ್ನು ಪ್ರಧಾನಮಂತ್ರಿ  ಶ್ಲಾಘಿಸಿದರು.

ಉತ್ತರ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಹಗಲು ರಾತ್ರಿ ಶ್ರಮಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಂಪರ್ಕದ ಜತೆ ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯವೃದ್ಧಿಗೂ ಸಹ ಅಗ್ರ ಆದ್ಯತೆ ನೀಡಲಾಗಿದೆ. ಕೇವಲ ಎರಡೇ ವರ್ಷಗಳಲ್ಲಿ ಉತ್ತರ ಪ್ರದೇಶ ಸರ್ಕಾರ ಬಹುತೇಕ 30 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸಿದೆ ಎಂದು ಅವರು ಹೇಳಿದರು. ವರ್ಷ ಡಬಲ್ ಇಂಜಿನ್ ಸರ್ಕಾರ ಲಕ್ಷಾಂತರ ಸಹೋದರಿಯರ ಮನೆಗಳಿಗೆ ಕೊಳವೆ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ಸಂಪೂರ್ಣ ಬದ್ಧವಾಗಿದೆ ಎಂದು ಅವರು ಹೇಳಿದರು. ಸೇವಾ ಮನೋಭಾವದೊಂದಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗುವುದು ನಮ್ಮ ಕರ್ತವ್ಯವಾಗಿದ್ದು, ಅದನ್ನು ತಾವು ಮುಂದುವರಿಸುವುದಾಗಿ ಅವರು ಹೇಳಿದರು.

***


(Release ID: 1772462) Visitor Counter : 232